ಈ ಪ್ರಕೃತಿಯಲ್ಲಿ ಪ್ರತಿ ದಿನ ಅದೆಷ್ಟೋ ವೈಚಿತ್ರ್ಯಗಳು ನಡೆಯುತ್ತಲೇ ಇರುತ್ತವೆ. ಅಂತಹ ಘಟನೆಗಳು ನಮ್ಮಲ್ಲಿ ಅಚ್ಚರಿಯನ್ನು ಮೂಡಿಸುತ್ತವೆ. ಇಂತಹ ಹಲವಾರು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಇದೀಗ ಅಂತಹದ್ದೇ ಒಂದು ವಿಡಿಯೋ ಸಖತ್ ವೈರಲ್ ಆಗಿದ್ದು, ಗದ್ದೆಯಲ್ಲಿ ಭತ್ತ ಕೊಯ್ಲು ಮಾಡುವ ವೇಳೆಯಲ್ಲಿ ಬಂದಂತಹ ನವಿಲೊಂದು ಭತ್ತಗಳ ಮೇಲಿದ್ದ ಕೀಟಗಳನ್ನು ತಿನ್ನುತ್ತಾ, ರೈತರ ಜೊತೆಗೆ ಸಮಯವನ್ನು ಕಳೆದಿದೆ. ಸಾಮಾನ್ಯವಾಗಿ ಮನುಷ್ಯರು ಇರೋ ಕಡೆ ನವಿಲುಗಳು ಅಷ್ಟಾಗಿ ಬರೋದಿಲ್ಲ, ಅವುಗಳು ಮನುಷ್ಯರನ್ನು ಕಂಡರೆ ದೂರ ಓಡಿ ಹೋಗುತ್ತವೆ. ಆದ್ರೆ ಈ ನವಿಲು ಮಾತ್ರ ನಾನು ನಿಮಗೆ ಸಹಾಯ ಮಾಡುತ್ತೇನೆ ಎನ್ನುತ್ತಾ ಭತ್ತ ಕೊಯ್ಲು ಮಾಡುವ ವೇಳೆಯಲ್ಲಿ ರೈತರ ಪಕ್ಕದಲ್ಲಿಯೇ ಅತ್ತಿಂದ ಇತ್ತ ಓಡಾಡುತ್ತಿತ್ತು. ಈ ಮುದ್ದಾದ ದೃಶ್ಯ ನೆಟ್ಟಿಗರ ಮನ ಗೆದ್ದಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಗದ್ದೆಯಲ್ಲಿ ಭತ್ತ ಕೊಯ್ಲು ಮಾಡುತ್ತಿದ್ದ ವೇಳೆಯಲ್ಲಿ ಹೆಣ್ಣು ನವಿಲೊಂದು ರೈತರ ಪಕ್ಕದಲ್ಲಿಯೇ ಸುತ್ತಾಡುತ್ತಿರುವ ಸುಂದರ ದೃಶ್ಯವನ್ನು ಕಾಣಬಹುದು. ಈ ವಿಡಿಯೋ ತುಣುಕನ್ನು @tarapkari1 ಎಂಬ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದೆ.
ವೈರಲ್ ವಿಡಿಯೋದಲ್ಲಿ ಗದ್ದೆಯಲ್ಲಿ ಭತ್ತ ಕೊಯ್ಲು ಮಾಡುತ್ತಿರುವ ವೇಳೆಯಲ್ಲಿ ಅಲ್ಲಿಗೆ ಬಂದಂತಹ ನವಿಲೊಂದು, ಅಣ್ಣೋ ನಾನ್ ಬರ್ಲೇನೋ ನಿಮ್ ಸಹಾಯಕ್ಕೆ ಬೇಗ ಹೇಳನ್ನೋ ಎನ್ನುತ್ತಾ ರೈತರ ಪಕ್ಕದಲ್ಲಿಯೇ ಅತ್ತಿಂದ ಇತ್ತ ಓಡಾಡುತ್ತಿರುವ ಸುಂದರ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಕೆಸರಲ್ಲಿ ಸಿಲುಕಿದ ಮರಿಯಾಯ ರಕ್ಷಣೆಗೆ ನಿಂತ ಗಜ ಪಡೆ; ಹೃದಯಸ್ಪರ್ಶಿ ವಿಡಿಯೋ ವೈರಲ್
ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 13.9 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಐದು ಲಕ್ಷಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼನೀವು ತುಂಬಾ ಅದೃಷ್ಟವಂತರುʼ ಅಂತ ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼ ಭತ್ತದಲ್ಲಿನ ಕೀಟಗಳನ್ನು ಕಡಿಮೆ ಮಾಡಲೆಂದು ರೈತರಿಗೆ ಸಹಾಯ ಮಾಡಲು ಬಂದ ರಾಷ್ಟ್ರೀಯ ಪಕ್ಷಿʼ ಅಂತ ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರು ʼಇದು ನಿಸ್ವಾರ್ಥ ಪ್ರೀತಿʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ನವಿಲು ಮನುಷ್ಯರೊಂದಿಗೆ ಬೆರೆತಿರುವ ಈ ಸುಂದರ ದೃಶ್ಯವನ್ನು ನೋಡಲು ಎರಡು ಕಣ್ಣುಗಳು ಸಾಲದು ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ