Viral Video: ಅಜ್ಜಿಯೊಂದಿಗೆ ಕನ್ನಡ ಮಾತನಾಡಿದ ಗಗನ ಸಖಿ, ವಿಮಾನಯಾನ ಸೂಪರ್​​ ಎಂದ ಅಜ್ಜಿ 

ವಿಶೇಷವಾಗಿ ಗಗನಸಖಿಯರು ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರನ್ನು ವಿಮಾನದೊಳಗೆ ವೆಲ್ಕಮ್ ಮಾಡುವುದರಿಂದ ಹಿಡಿದು ಪ್ರಯಾಣಿಕ ಬೇಕು ಬೇಡಗಳನ್ನು ನೋಡಿಕೊಳ್ಳುತ್ತಾ ಉತ್ತಮ ಸೇವೆಯನ್ನು ನೀಡುತ್ತಾರೆ. ಅದೇ ರೀತಿ ಪ್ರಯಾಣಿಕರೊಂದಿಗೆ ಬಹಳ ಫ್ರೆಂಡ್ಲಿಯಾಗಿಯೂ  . ಇದಕ್ಕೆ ಉದಾಹರಣೆಯೆಂಬಂತೆ ಇಲ್ಲೊಂದು ವಿಡಿಯೋ ಹರಿದಾಡುತ್ತಿದ್ದು, ಮೊದಲ ಬಾರಿಗೆ ವಿಮಾನವೇರಿದ ಅಜ್ಜಿಯೊಬ್ಬರನ್ನು ಗಗನ ಸಖಿ ಬಹಳ ಪ್ರೀತಿಯಿಂದ ಮಾತನಾಡಿಸಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.

Viral Video: ಅಜ್ಜಿಯೊಂದಿಗೆ ಕನ್ನಡ ಮಾತನಾಡಿದ ಗಗನ ಸಖಿ, ವಿಮಾನಯಾನ ಸೂಪರ್​​ ಎಂದ ಅಜ್ಜಿ 
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Jan 29, 2024 | 6:19 PM

ವಿಮಾನಯಾನ  ಸಂಸ್ಥೆಗಳು ತಮ್ಮ ಎಲ್ಲಾ ಪ್ರಯಾಣಿಕರಿಗೆ ಉತ್ತಮ ಆಥಿತ್ಯವನ್ನು ನೀಡುತ್ತವೆ. ಅದರಲ್ಲೂ ಗಗನಸಖಿಯರು ಪ್ರಯಾಣಿಕರನ್ನು ವಿಮಾನದೊಳಗೆ ವೆಲ್ಕಮ್ ಮಾಡುವುದರಿಂದ ಹಿಡಿದು ಪ್ರಯಾಣಿಕರ ಬೇಕು ಬೇಡಗಳನ್ನು ನೋಡಿಕೊಳ್ಳುತ್ತಾ, ಉತ್ತಮ ಸೇವೆಯನ್ನು ನೀಡುತ್ತಾರೆ. ಅಷ್ಟೇ ಅಲ್ಲದೆ ಸದಾ ನಗು ಮೊಗದಿಂದ ಇರುವ ಗಗನಸಖಿಯರು ಎಲ್ಲಾ ಪ್ರಯಾಣಿಕರೊಂದಿಗೂ ಬಹಳ ತಾಳ್ಮೆ ಮತ್ತು ಸಹನೆಯಿಂದ ನಡೆದುಕೊಳ್ಳುತ್ತಾರೆ. ಇನ್ನೂ ಹಿರಿಯರು  ಹಾಗೂ ಮಕ್ಕಳೊಂದಿಗೆ ಬಹಳ ಪ್ರೀತಿಯಿಂದ ನಡೆದುಕೊಳ್ಳುತ್ತಾರೆ. ಇದಕ್ಕೆ ಸಾಕ್ಷಿಯೆಂಬಂತೆ ಇಲ್ಲೊಂದು ವಿಡಿಯೋ ಹರಿದಾಡುತ್ತಿದ್ದು, ಮೊದಲ ಬಾರಿಗೆ ವಿಮಾನವೇರಿದ ಅಜ್ಜಿಯೊಬ್ಬರನ್ನು ಗಗನಸಖಿ ಬಹಳ ಪ್ರೀತಿಯಿಂದ ಮಾಡನಾಡಿಸಿದ್ದಾರೆ. ಜೊತೆಗೆ ಆ ಅಜ್ಜಿ ತಮ್ಮ ಮೊದಲ ವಿಮಾನಯಾನದ ಅನುಭವವನ್ನು ಸಹ ಹಂಚಿಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ  ಬೆಂಗಳೂರು ಮೂಲದ ಕುಟುಂಬವೊಂದು  ಭುವನೇಶ್ವರದಿಂದ ಬೆಂಗಳೂರಿಗೆ ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಾರೆ. ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಿದ ಈ ಕುಟುಂಬವನ್ನು ವಿಮಾನಯಾನ ಸಿಬ್ಬಂದಿಗಳು ಬಹಳ ಪ್ರೀತಿಯಿಂದ ಸತ್ಕರಿಸುತ್ತಾರೆ. ಅದರಲ್ಲೂ ಆ ಕುಟುಂಬದ ಹಿರಿ ಜೀವದ ಜೊತೆಗೆ ಗಗನ ಸಖಿ ವಿನಿಶಾ ಕ್ಯಾಲಿ  ಬಹಳ ಪ್ರೀತಿಯಿಂದ ಮಾತನಾಡಿಸಿ, ಅವರ ಮೊದಲ ವಿಮಾನಯಾನ ಅನುಭವ ಹೇಗಿತ್ತು ಎಂಬುದನ್ನು ಕೇಳಿದ್ದಾರೆ. ಜೊತೆಗೆ ಈ ಕುಟುಂಬದವರೂ ವಿಮಾನಯಾನ ಸಿಬ್ಬಂದಿಗಳೊಂದಿಗೆ ಬಹಳ ಫ್ರೆಂಡ್ಲಿಯಾಗಿ ನಡೆದುಕೊಂಡಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಡಿಯೋವನ್ನು ಇಂಡಿಗೋ ವಿಮಾನದ ಗಗನ ಸಖಿ ವಿನಿಶಾ ಕ್ಯಾಲಿ (@vinisha_calley_official)  ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಮೊದಲ ಫ್ಲೈಟ್ ಎಕ್ಸ್ಪೀರಿಯನ್ಸ್ ತುಂಬಾ ಇಷ್ಟ ಆಯ್ತು. ಇದು ಹೃದಯ ತುಂಬಿದ ಪ್ರೀತಿ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಗಗನಸಖಿ ವಿನಿಶಾ ಹಾಗೂ ಇತರೆ ಸಿಬ್ಬಂದಿಗಳು ಅಜ್ಜಿಯೊಂದಿಗೆ ಬಹಳ ಪ್ರೀತಿಯಿಂದ ಮಾತನಾಡಿಸುತ್ತಿರುವುದನ್ನು ಕಾಣಬಹುದು.

ವಿಡಿಯೋ ಇಲ್ಲಿದೆ ನೋಡಿ:

ವೈರಲ್ ವಿಡಿಯೋದಲ್ಲಿ ಗಗನಸಖಿ ವಿನಿಶಾ ಅವರು ಅಜ್ಜಿಯ ಭುಜದ ಮೇಲೆ ಕೈ ಇಟ್ಟು,  ಅವರದ್ದೇ ಅಜ್ಜಿಯೇನೋ ಎಂಬಂತೆ ಬಹಳ ಪ್ರೀತಿಯಿಂದ ಮಾತನಾಡಿಸುತ್ತಾರೆ. ಜೊತೆಗೆ ಅಜ್ಜಿ ನಿಮ್ಮ ಮೊದಲ ವಿಮಾನಯಾನ ಅನುಭವ ಹೇಗಿತ್ತು ಹೇಳಿ ಅಲ್ವಾ ಅಂತ ಕೇಳ್ತಾರೆ, ಆಗ ಅಜ್ಜಿ ಬಹಳ ಸಂತೋಷದಿಂದ ಮಾತನಾಡುತ್ತಾ ನಿಮ್ಮ ಸೇವೆಯಂತೂ ನನಗೆ ತುಂಬಾನೇ ಇಷ್ಟವಾಯ್ತಮ್ಮ ಅಂತ ಹೇಳ್ತಾರೆ. ಆಗ ವಿನಿಶಾ ಹಾಗಾದ್ರೆ ನಾನು ಇಷ್ಟ ಆಗಿಲ್ವಾ ಅಜ್ಜಿ ಅಂತ ತಮಾಷೆಯ ಪ್ರಶ್ನೆ ಕೇಳುತ್ತಾರೆ. ಅದಕ್ಕೆ ಉತ್ತರಿಸಿದ ಅಜ್ಜಿ ನಿನ್ನ ಮಾತು ನನ್ಗೆ ಇಷ್ಟ ಆಯ್ತು, ನೀನಂತೂ ತುಂಬಾನೇ ಇಷ್ಟ ಆದ್ಯಮ್ಮಾ ಅಂತ ಹೇಳ್ತಾರೆ. ಕೊನೆಯಲ್ಲಿ ಫ್ಲೈಟ್ ನಿಂದ ಇಳಿಯುವ ವೇಳೆ ಅಜ್ಜಿಯ ಇಡೀ ಕುಟುಂಬ ಸದಸ್ಯರೂ, ನೀವೆಲ್ಲರೂ ನಮ್ಮ ಮನೆಗೆ ಬನ್ನಿ ಅಂತ ಹೇಳಿ, ವಿಮಾನಯಾನ ಸಿಬ್ಬಂದಿಗಳಿಗೆ ಬೈ ಬೈ ಹೇಳುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ; ಇದು ಆಪಲ್ ಆಮ್ಲೆಟ್ ಅಂತೆ! ರೆಸಿಪಿ ವಿಡಿಯೋ ನೋಡಿ ನೆಟ್ಟಿಗರು ಫುಲ್ ಗರಂ

ಜನವರಿ 13 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.8 ಮಿಲಿಯನ್ ವೀಕ್ಷಣೆಗಳನ್ನು ಹಾಗೂ  1 ಲಕ್ಷಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ.  ಒಬ್ಬ ಬಳಕೆದಾರರು ʼವಿಮಾನದ ಸಿಬ್ಬಂದಿಗಳು ಪ್ರಯಾಣಿಕರೊಂದಿಗೆ ಪ್ರೀತಿಯಿಂದ ನಡೆದುಕೊಂಡ ಪರಿ ಬಹಳ ಸುಂದರವಾಗಿತ್ತುʼ ಅಂತ ಹೇಳಿದ್ದಾರೆ.  ಇನ್ನೊಬ್ಬ ಬಳಕೆದಾರರು ʼಬಹಳ ಅದ್ಭುತವಾಗಿ ಕನ್ನಡದಲ್ಲಿ ಮಾತನಾಡಿದ್ದೀರಿ, ನಿಮಗೆ ಧನ್ಯವಾದಗಳುʼ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅಕ್ಕ ಹಿರಿಯರೊಂದಿಗೆ ಬಹಳ ಪ್ರೀತಿಯಿಂದ ಮಾತನಾಡಿಸುವ ನಿಮ್ಮ ಗುಣ ನನಗೆ ತುಂಬಾನೇ ಇಷ್ಟವಾಯ್ತುʼ ಅಂತ ಹೇಳಿದ್ದಾರೆ. ಹಲವರು ಈ ವಿಡಿಯೋಗೆ ಭಾರಿ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:17 pm, Mon, 29 January 24

ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ