
ನೀವೇನೇ ಹೇಳಿ, ಕಾಂಗ್ರೆಸ್ ಸಂಸದ ಶಶಿ ತರೂರ್ ಪದೇಪದೆ ಸುದ್ದಿಯಲ್ಲಿ ಇರುತ್ತಾರೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುವುದು ಹೆಚ್ಚು. ಕೆಲವು ವಿಭಿನ್ನ, ವಿಶಿಷ್ಟ ಕಾರಣಗಳಿಗೆ ಅವರು ಟ್ರೋಲ್ ಆಗುತ್ತಿರುತ್ತಾರೆ. ಈಗ ಮತ್ತೊಮ್ಮೆ ಶಶಿ ತರೂರ್ ನೆಟ್ಟಿಗರ ಬಾಯಿಗೆ ಆಹಾರವಾಗಿದ್ದಾರೆ.. ಅದೂ ಲೋಕಸಭೆಯಲ್ಲಿ ಕಂಡುಬಂದ ಒಂದು ಸನ್ನಿವೇಶದಿಂದಾಗಿ !.
Farrago Abdullah ಎಂಬ ಟ್ವಿಟರ್ ಅಕೌಂಟ್ನಿಂದ ವಿಡಿಯೋವೊಂದು ಶೇರ್ ಆಗಿದೆ. ಅದರಲ್ಲಿ ಫಾರೂಕ್ ಅಬ್ದುಲ್ಲಾ ಎದ್ದು ನಿಂತು, ಸದನವನ್ನು ಉದ್ದೇಶಿಸಿ ಗಂಭೀರವಾಗಿ ಮಾತನಾಡುತ್ತಿದ್ದಾರೆ. ಆದರೆ ಅವರ ತುಸು ಹಿಂದೆ ಕುಳಿತ ಶಶಿ ತರೂರ್, ಸಂಸದೆ ಸುಪ್ರಿಯಾ ಸುಲೆಯೊಂದಿಗೆ ಏನೋ ಹರಟೆಹೊಡೆಯುತ್ತಿದ್ದಾರೆ. ಅದೂ ಹೇಗೆ ಅಂತೀರಿ, ಮುಂದಿನ ಸಾಲಿನಲ್ಲಿ ಕುಳಿತ ಸುಪ್ರಿಯಾ ಹಿಂದಿರುಗಿ ಕುಳಿತು ಶಶಿ ತರೂರ್ಗೆ ಏನೋ ಹೇಳುತ್ತಿದ್ದಾರೆ. ಶಶಿ ತರೂರ್ ತಮ್ಮ ಮುಂದಿನ ಡೆಸ್ಕ್ ಮೇಲೆ ಎರಡೂ ಕೈಯಿಟ್ಟು, ಆ ಕೈಗಳ ಮೇಲೆ ತಮ್ಮ ಗಲ್ಲವನ್ನಿಟ್ಟು, ಮುಗುಳ್ನಗುತ್ತ ಸುಪ್ರಿಯಾ ಮಾತುಗಳಿಗೆ ತಲೆ ಹಾಕುತ್ತ ಆಲಿಸುತ್ತಿದ್ದಾರೆ. ಅದನ್ನು ನೋಡಿದರೆ ಕಾಲೇಜು ಹುಡುಗರ ಫೀಲ್ ಬಾರದೆ ಇರದು. ಹೀಗೆ ಸುಪ್ರಿಯಾ ಸುಲೆಯ ಮಾತುಗಳನ್ನು ಅಷ್ಟು ಮಗ್ನವಾಗಿ ಆಲಿಸುತ್ತ, ಅದಕ್ಕೆ ತಲೆ ಅಲ್ಲಾಡಿಸುತ್ತಿರುವ ಶಶಿ ತರೂರ್ರನ್ನು ನೋಡಿ ನೆಟ್ಟಿಗರು ಕಾಲೆಳೆದಿದ್ದಾರೆ. ಈ ವಿಡಿಯೋಕ್ಕೆ ಪುಷ್ಪಾ ಸಿನಿಮಾದ ಶ್ರೀವಲ್ಲಿ ಹಾಡನ್ನು ಹಾಕಿ ವೈರಲ್ ಮಾಡಲಾಗಿದೆ. ಹೀಗಾಗಿ ಫಾರೂಕ್ ಅಬ್ದುಲ್ಲಾ ಯಾವ ವಿಚಾರ ಮಾತನಾಡುತ್ತಿದ್ದರು ಎಂಬುದು ಗೊತ್ತಾಗುತ್ತಿಲ್ಲ.
ನೆಟ್ಟಿಗರಂತೂ ಶಶಿ ತರೂರ್ರನ್ನು ಸಿಕ್ಕಾಪಟೆ ಕಾಲೆಳೆದಿದ್ದಾರೆ. ಸುಪ್ರಿಯಾ ಸುಲೆ ಮಾತನಾಡುತ್ತಿದ್ದರೆ, ಶಶಿ ತರೂರ್ ಮುಖಭಾವ ಹೇಗಿತ್ತು ಎಂಬುದನ್ನು ಝೂಮ್ ಮಾಡಿ ತೋರಿಸಲಾಗಿದೆ. ವೃತ್ತಿಜೀವನವನ್ನೂ ಹೇಗೆ ಬೋರ್ ಬಾರದಂತೆ ಮಾಡಬೇಕು ಎಂಬುದನ್ನು ಶಶಿ ತರೂರ್ ತೋರಿಸುತ್ತಿದ್ದಾರೆ ಎಂಬಂಥ ಕಮೆಂಟ್ಗಳನ್ನೂ ನೆಟ್ಟಿಗರು ಮಾಡಿದ್ದಾರೆ ಇಲ್ಲಿದೆ ನೋಡಿ ಫನ್ನಿ ವಿಡಿಯೋ..
Published On - 4:23 pm, Thu, 7 April 22