ಇಂದಿನ ಆಧುನಿಕ ಕಾಲದಲ್ಲಿ ಫುಡ್ ಡೆಲಿವರಿ ಎಂಬುದು ಸಾಮಾನ್ಯವಾಗಿದೆ. ಹೋಟೆಲ್, ರೆಸ್ಟೋರೆಂಟ್ಗೆ ಹೋಗುತ್ತಿದ್ದವರು ಈಗ ಮನೆ ಬಾಗಿಲಿಗೆ ಊಟ, ತಿಂಡಿಗಳನ್ನು ತರಿಸುವುದು ಅಭ್ಯಾಸವಾಗಿದೆ. ಕೊರೊನಾ ಆರ್ಭಟದ ಬಳಿಕ ಜನರು ಹೊರಗೆ ಹೋಗುವುದು ಕಡಿಮೆಯಾಗಿರುವುದರಿಂದ ಎಲ್ಲವನ್ನೂ ಆನ್ಲೈನ್ ಡೆಲಿವರಿ ಮಾಡಲಾಗುತ್ತಿದೆ. ಆನ್ಲೈನ್ ಡೆಲಿವರಿಯಲ್ಲಿ ಒಳ್ಳೆಯದು ಏನಿರುತ್ತದೋ ಅದೇರೀತಿ ಕೆಟ್ಟ ಅಂಶಗಳೂ ಇರುತ್ತವೆ. ಈ ಹಿಂದೆ ಕೂಡ ಜೊಮ್ಯಾಟೋ, ಸ್ವಿಗ್ಗಿ ಮುಂತಾದ ಫುಡ್ ಡೆಲಿವರಿ ಆ್ಯಪ್ಗಳ ಸಿಬ್ಬಂದಿ ಡೆಲಿವರಿ ನೀಡುವಾಗ ಎಡವಟ್ಟಾದ ಹಲವು ಪ್ರಸಂಗಗಳು ನಡೆದಿದ್ದವು. ಅದೇರೀತಿ ಉಬರ್ ಈಟ್ಸ್ ಡೆಲಿವರಿ ಬಾಯ್ ತಾನು ಗ್ರಾಹಕರಿಗೆ ನೀಡಬೇಕಾಗಿದ್ದ ಆಹಾರವನ್ನು ತಾನೇ ತಿಂದಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ವಿಡಿಯೋವನ್ನು ಗಾರ್ಡನ್ ಸ್ಟೇಟ್ ಮಿಕ್ಸ್ ಯೂಟ್ಯೂಬ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನು 1.8 ಲಕ್ಷ ಜನರು ನೋಡಿದ್ದಾರೆ. ರಸ್ತೆಯ ಪಕ್ಕದಲ್ಲಿ ತನ್ನ ವಾಹನವನ್ನು ನಿಲ್ಲಿಸಿ ಫುಟ್ಪಾ್ ಬದಿ ಕುಳಿತಿರುವ ಡೆಲಿವರಿ ಬಾಯ್ ತಾನು ಡೆಲಿವರಿ ನೀಡಬೇಕಾದ ಆಹಾರವನ್ನೇ ತಿನ್ನುತ್ತಿರುವ ವಿಡಿಯೋ ವೈರಲ್ ಆಗಿದೆ. ಆ ಡೆಲಿವರಿ ಪ್ಯಾಕೆಟ್ನಲ್ಲಿರುವ ಆಹಾರದ ಸ್ವಲ್ಪ ಭಾಗವನ್ನು ತೆಗೆದು ತನ್ನ ಟಿಫಿಕ=ನ್ ಬಾಕ್ಸ್ಗೆ ಹಾಕಿಕೊಳ್ಳುವ ಡೆಲಿವರಿ ಬಾಯ್ ನಂತರ ಆ ಪ್ಯಾಕೆಟ್ ಅನ್ನು ಹಾಗೇ ಸೀಲ್ ಮಾಡಿ ವಾಪಾಸ್ ಬ್ಯಾಗ್ನಲ್ಲಿಟ್ಟುಕೊಳ್ಳುತ್ತಾನೆ.
ಇದನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ಆನ್ಲೈನ್ ಡೆಲಿವರಿಯವರು ಹೀಗೆ ಮೋಸ ಮಾಡಿದರೆ ಮಾಡಿದರೆ ನಾವು ಹೇಗೆ ನಂಬಿ ಆರ್ಡರ್ ಮಾಡುವುದು? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: Viral Video: ರಾಷ್ಟ್ರಗೀತೆ ಸಾಲನ್ನೇ ಮರೆತ ಸಂಸದ; ಜಯಹೇ ಎಂದು ಹಾಡಿ ಮುಗಿಸಿದ ವಿಡಿಯೋ ವೈರಲ್
Viral Video: 22 ಅಡಿ ಉದ್ದದ ಹಾವನ್ನು ಹೆಗಲ ಮೇಲೆ ಹಾಕಿಕೊಂಡು ಹೋದ ವ್ಯಕ್ತಿ; ಮೈ ಜುಂ ಎನಿಸುವ ವಿಡಿಯೋ ಇಲ್ಲಿದೆ