ಬೆಂಗಳೂರಿನ ಆಟೋವೊಂದು ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಆಟೋ ಚಾಲಕ ತನ್ನ ಆಟೋ ಹಿಂಬದಿಯಲ್ಲಿ ಸಂದೇಶವೊಂದನ್ನು ಬರೆದಿದ್ದು, ಸದ್ಯ ನೆಟ್ಟಿಗರ ಗಮನ ಸೆಳೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಸಂದೇಶದ ಬಗ್ಗೆ ಚರ್ಚೆ ನಡೆದಿದೆ.
ಆಟೋ ಚಾಲಕ ತಮ್ಮ ಆಟೋ ಹಿಂಭಾಗದಲ್ಲಿ “Slim or fat, black or white, virgin or not. All girls deserve respect,” ಎಂದು ಬರೆಯಲಾಗಿದೆ. ದಪ್ಪಗಿರಲಿ ಅಥವಾ ಸಣ್ಣ, ಬೆಳ್ಳಗಿರಲಿ ಅಥವಾ ಕಪ್ಪಗೆ, ವರ್ಜಿನ್ ಅಥವಾ ಅಲ್ಲ ಏನೇ ಆದರೂ ಎಲ್ಲಾ ಹುಡುಗಿಯರು ಗೌರವಕ್ಕೆ ಅರ್ಹರಾಗಿರುತ್ತಾರೆ ಎಂದು ಬರೆಯಲಾಗಿದೆ. ಯಾವುದೇ ವಿಷಯದಲ್ಲೂ ಕೀಳಾಗಿ ನೋಡಬೇಡಿ ಎಂದು ವಿವರಿಸಲಾಗಿದೆ.
some radical feminism on the roads of bangalore pic.twitter.com/EtnLk75t3A
— retired sports fan (@kreepkroop) September 30, 2024
ಇದನ್ನೂ ಓದಿ: 4 ಅಂತಸ್ತಿನ ಕಟ್ಟಡ ಕುಸಿತ,ಕೂದಲೆಳೆ ಅಂತರದಲ್ಲಿ ಪಾರಾದ ತಾಯಿ ಮಗು; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಈ ವೈರಲ್ ಪೋಸ್ಟ್ ನೋಡಿದ ನಂತರ, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಭುಗಿಲೆದ್ದಿದೆ. ಆಟೋ ಚಾಲಕನ ಈ ಸಂದೇಶಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ, ಹಲವರು ಆತನನ್ನು ಟೀಕಿಸಿದ್ದಾರೆ. @kreepkroop ಎಂಬ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:40 pm, Thu, 3 October 24