Viral video; ಮನೆಯ ಗೋಡೆ ಹತ್ತಿದ ಹೆಬ್ಬಾವು; ಬದುಕಿದೆಯಾ ಬಡಜೀವವೇ ಎಂದುಕೊಂಡ ಬೆಕ್ಕು

ಭಯಾನಕ ಹೆಬ್ಬಾವೊಂದು ಮನೆಯ ಗೋಡೆಯನ್ನು ಹತ್ತುತ್ತಿರುವ ವಿಡಿಯೋ ವೈರಲ್​ ಆಗಿದೆ. ಈ ಘಟನೆ ಥೈಲ್ಯಾಂಡ್​ನಲ್ಲಿ ನಡೆದಿದೆ. ಸದ್ಯ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

Viral video; ಮನೆಯ ಗೋಡೆ ಹತ್ತಿದ ಹೆಬ್ಬಾವು; ಬದುಕಿದೆಯಾ ಬಡಜೀವವೇ ಎಂದುಕೊಂಡ ಬೆಕ್ಕು
ಗೋಡೆ ಹತ್ತುತ್ತಿರುವ ಹಾವು
Edited By:

Updated on: Jan 25, 2022 | 5:35 PM

ಸಾಮಾಜಿಕ ಜಾಲತಾಣದಲ್ಲಿ ಭಯಾನಕ, ಮೈನವಿರೇಳಿಸುವ ವಿಡಿಯೋಗಳು ಆಗಾಗ ಕಾಣಸಿಗುತ್ತವೆ. ನೋಡುಗರನ್ನು ಬೆಚ್ಚಿ ಬೀಳಿಸುವ ವಿಡಿಯೋಗಳನ್ನು ಯುಟ್ಯೂಬ್​ನಲ್ಲಿ ಕಾಣಬಹುದು. ವೈರಲ್​ ಹಾಗ್​ ಯುಟ್ಯೂಬ್​  ಚಾನೆಲ್ ಅಪರೂಪದ, ವೈರಲ್​ ವಿಡಿಯೋಗಳನ್ನು ಹಂಚಿಕೊಳ್ಳುತ್ತದೆ. ಇದೀಗ ಭಯಾನಕ ಹೆಬ್ಬಾವೊಂದು ಮನೆಯ ಗೋಡೆಯನ್ನು ಹತ್ತುತ್ತಿರುವ ವಿಡಿಯೋ ವೈರಲ್​ ಆಗಿದೆ. ಈ ಘಟನೆ ಥೈಲ್ಯಾಂಡ್​ನಲ್ಲಿ ನಡೆದಿದೆ. ಸದ್ಯ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ. ವಿಡಿಯೋದಲ್ಲಿನ ಹಾವನ್ನು ನೋಡಿ ನೋಡುಗರರು ಬೆಚ್ಚಿಬಿದ್ದಿದ್ದಾರೆ.

ವಿಡಿಯೋದಲ್ಲಿ ಉದ್ದನೆಯ ಹಾವೊಂದು ಮನೆಯ ಮಹಡಿಯನ್ನು ನಿಧಾನವಾಗಿ ಹತ್ತುತ್ತಿರುವುದನ್ನು ಕಾಣಬಹುದು. ಕಪ್ಪು ಮೈಬಣ್ಣದ ಬಿಳಿಯ ಚುಕ್ಕೆಗಳಿರುವ ಹಾವು ಮನೆಯ ಗೋಡೆಯನ್ನು ಹತ್ತುತ್ತದೆ. ವಿಡಿಯೋದಲ್ಲಿ ಇನ್ನೊಂದು ಅಚ್ಚರಿಯ ದೃಶ್ಯವೆಂದರೆ ಬೆಕ್ಕೊಂದು ಕಾಣಿಸಿಕೊಳ್ಳುತ್ತದೆ. ಹಾವು ಗೋಡೆ ಹತ್ತುತ್ತಿದ್ದಂತೆ ನಿಧಾನವಾಗಿ ಬೆಕ್ಕು ನಡೆದುಕೊಂಡು ಬರುತ್ತದೆ. ಗಾಬರಿಯಿಂದ ಗೋಡೆಯನ್ನು ಹತ್ತುತ್ತಿದ್ದ ಹಾವನ್ನು ನೋಡಿದ ಬೆಕ್ಕನ್ನು ವಿಡಿಯೋದಲ್ಲಿ ಕಾಣಬಹುದು.

ಸದ್ಯ ವಿಡಿಯೋ 29 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ವಿಡಿಯೋ ನೋಡಿ ನೆಟ್ಟಿಗರು ಹೌಹಾರಿದ್ದಾರೆ. ಕೆಲವರು ಬೆಕ್ಕಿನ ಪರಿಸ್ಥಿತಿಯನ್ನು ನೋಡಿ  ಅಯ್ಯೋ ಪಾಪ ಎಂದ್ದಿದ್ದರೆ, ಇನ್ನೂ ಕೆಲವರು ಹಾವು ಬೆಕ್ಕನ್ನು ತಿನ್ನುತ್ತದೆ ಎಂದು ಭಾವಿಸಿದ್ದೆ ಎಂದಿದ್ದಾರೆ.

ಇದನ್ನೂ ಓದಿ:

Video; ವಿರೋಧಗಳನ್ನು ಎದುರಿಸಿ ಶ್ರವಣದೋಷವುಳ್ಳ ಭಾರತದ ಮಗುವನ್ನು ದತ್ತು ಪಡೆದ ವಿದೇಶಿ ದಂಪತಿ