ಮುತ್ತು ಕೊಡಲು ಬಂದ ಯುವಕನ ತುಟಿ ಕಚ್ಚಿದ ನಾಗರಹಾವು!

ಯುವಕನೊಬ್ಬ ವಿಡಿಯೋಗಾಗಿ ನಾಗರ ಹಾವೊಂದಕ್ಕೆ ಮುತ್ತು ಕೊಡಲು ಹೋಗಿದ್ದಾನೆ. ಆಗ ಆ ಹಾವು ಆತನಿಗೆ ಸರ್​ಪ್ರೈಸ್ ಗಿಫ್ಟ್​ ಕೊಟ್ಟು ಕಳುಹಿಸಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮುತ್ತು ಕೊಡಲು ಬಂದ ಯುವಕನ ತುಟಿ ಕಚ್ಚಿದ ನಾಗರಹಾವು!
ಹಾವು
Image Credit source: pexels.com

Updated on: Sep 15, 2023 | 5:29 PM

ಪ್ರಾಣಿಗಳಿಗೆ ನಾವು ಯಾವುದೇ ತೊಂದರೆ ನೀಡದಿದ್ದರೆ ಅವು ಮನುಷ್ಯರಿಗೆ ಯಾವ ಅಪಾಯವನ್ನೂ ಮಾಡುವುದಿಲ್ಲ. ಆದರೆ, ಮನುಷ್ಯ ಆ ಪ್ರಾಣಿಗಳನ್ನು ಕೆಣಕಲು ಹೋದಾಗ ಅವು ತಿರುಗಿಬೀಳುವುದು ಸಾಮಾನ್ಯ. ಊರೊಳಗೆ ಬಂದ ಹಾವುಗಳನ್ನು ಹಿಡಿದು ಕಾಡಿಗೆ ಬಿಡುತ್ತಿದ್ದ ಯುವಕನೊಬ್ಬ ವಿಡಿಯೋಗಾಗಿ ನಾಗರ ಹಾವೊಂದಕ್ಕೆ ಮುತ್ತು ಕೊಡಲು ಹೋಗಿದ್ದಾನೆ. ಆಗ ಆ ಹಾವು ಆತನಿಗೆ ಸರ್​ಪ್ರೈಸ್ ಗಿಫ್ಟ್​ ಕೊಟ್ಟು ಕಳುಹಿಸಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಊರೊಳಗೆ ಹರಿದಾಡುತ್ತಿದ್ದ ನಾಗರಹಾವನ್ನು ಹಿಡಿಯಲು ಹೋದ ಯುವಕ ಆ ಹಾವಿನ ತಲೆಗೆ ಮುತ್ತು ಕೊಡಲು ಪ್ರಯತ್ನಿಸಿದ್ದಾನೆ. ಆಗ ರೊಚ್ಚಿಗೆದ್ದ ಹಾವು ತಕ್ಷಣ ಹಿಂದೆ ತಿರುಗಿ ಆ ಯುವಕನ ತುಟಿಗೆ ಕಚ್ಚಿದೆ. ಈ ವೀಡಿಯೋ ವೀಕ್ಷಕರನ್ನು ಬೆರಗುಗೊಳಿಸಿದೆ ಮತ್ತು ಕಳವಳವನ್ನುಂಟು ಮಾಡಿದೆ. ಈ ವಿಡಿಯೋ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಇದನ್ನೂ ಓದಿ: ವಿಡಿಯೋ ವೈರಲ್​​: ಅಮೆರಿಕದ ಸಾರ್ವಜನಿಕ ಪ್ರದೇಶದಲ್ಲಿ ಮಹಿಳೆಗೆ ಚುಂಬಿಸಿದ ಪೊಲೀಸ್​​ ಅಧಿಕಾರಿ ಅಮಾನತು

ಈ ಘಟನೆ ಯಾವಾಗ ನಡೆದಿದೆ ಎಂಬುದು ಖಚಿತವಾಗಿ ತಿಳಿದಿಲ್ಲ. ಇದು ಎಲ್ಲಿ ಚಿತ್ರೀಕರಿಸಿದ್ದು ಎಂಬುದು ಕೂಡ ತಿಳಿದಿಲ್ಲ. ಆದರೆ, ನೆಟ್ಟಿಗರು ಆ ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಿನ್ನ ಕೊನೆಯ ಲಿಪ್ ಕಿಸ್ ಅನ್ನು ಬಹಳ ಎಂಜಾಯ್ ಮಾಡಿದ್ದೀಯ ಎನಿಸುತ್ತಿದೆ ಎಂದು ಕೆಲವರು ಲೇವಡಿ ಮಾಡಿದ್ದಾರೆ.


ವಿಶ್ವದ ಅತ್ಯಂತ ವಿಷಕಾರಿ ಹಾವಿನ ಜಾತಿಗಳಲ್ಲಿ ಒಂದೆಂದು ಹೆಸರುವಾಸಿಯಾಗಿರುವ ನಾಗರಹಾವಿನ ವಿಷ ಅತ್ಯಂತ ಭಯಾನಕವಾದುದು. ಈ ಹಾವುಗಳು ಸಾಮಾನ್ಯವಾಗಿ ಆಗ್ನೇಯ ಏಷ್ಯಾದ ಸೊಂಪಾದ ಮಳೆಕಾಡುಗಳಲ್ಲಿ ಕಂಡುಬರುತ್ತವೆ. ಈ ಹಾವು ಗರಿಷ್ಠ 5.85 ಮೀಟರ್ ಉದ್ದಕ್ಕೆ ಬೆಳೆಯುತ್ತವೆ. ಈ ಹಾವುಗಳು ಕಚ್ಚಿದ ಕೇವಲ 15 ನಿಮಿಷಗಳಲ್ಲಿ ಮನುಷ್ಯ ಸಾಯುವ ಸಾಧ್ಯತೆಯೂ ಇರುತ್ತದೆ. ಹಾವಿನಿಂದ ಕಚ್ಚಿಸಿಕೊಂಡ ಯುವಕನ ಸ್ಥಿತಿ ಹೇಗೆ ಇದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us