ಹೈದರಾಬಾದ್: ಸೋಶಿಯಲ್ ಮೀಡಿಯಾ ಪ್ರಭಾವಿಯೊಬ್ಬ ಕಂತೆ ಕಂತೆ ನೋಟುಗಳನ್ನು ರಸ್ತೆಗೆ ಎಸೆದಿರುವ ಘಟನೆ ಹೈದರಾಬಾದ್‌ನ ಕುಕಟ್‌ಪಲ್ಲಿಯಲ್ಲಿ ನಡೆದಿದೆ. ವಾಹನ ದಟ್ಟನೆಯಿರುವ ನಡು ರಸ್ತೆಯಲ್ಲೇ ನಿಂತು ಈ ಯುವಕ ನೋಟುಗಳನ್ನು ರಸ್ತೆಗೆ ಎಸೆದಿದ್ದು, ನೋಟುಗಳ ಸುರಿಮಳೆ ಸುರಿಯುತ್ತಿದ್ದಂತೆ ಸ್ಥಳೀಯರು ಶಾಕ್ ಆಗಿದ್ದಾರೆ. ಹಣದ ಸುರಿಮಳೆಯನ್ನು ಕಂಡು ಜನರು ಹಣ ಹೆಕ್ಕಲು ಮುಗಿಬಿದ್ದಿದ್ದಾರೆ.
@indian66669296 ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ಭಾರೀ ವೈರಲ್ ಆಗಿದೆ. ಆಗಸ್ಟ್ 21 ರಂದು ಹಂಚಿಕೊಂಡಿರುವ ವೀಡಿಯೋ ಒಂದೇ ದಿನದಲ್ಲಿ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.
Dear @RachakondaCop @TelanganaDGP can u Warn such Chapris who are creating Nuisance on Roads in Name of Content??? pic.twitter.com/pEX3BLCeiq
— Mahesh Goud #9999# (@indian66669296) August 21, 2024
ಇದನ್ನೂ ಓದಿ: ಹೋಮ್‌ವರ್ಕ್ ಮಾಡದಿದ್ದಕ್ಕೆ ವಿದ್ಯಾರ್ಥಿನಿಗೆ ಕಿವಿ ಮೂಗಿನಲ್ಲಿ ರಕ್ತ ಬರುವಂತೆ ಹೊಡೆದ ಶಿಕ್ಷಕ
ವೈರಲ್ ಆಗಿರುವ ವಿಡಿಯೋದಲ್ಲಿ ಯುವಕ ಎರಡೂ ಕೈಗಳಲ್ಲಿ ಕಂತೆ ಕಂತೆ ನೋಟುಗಳನ್ನು ಇಟ್ಟುಕೊಂಡು ರಸ್ತೆಯ ವಾಹನ ಸಂಚಾರದ ನಡುವೆಯೂ ಹಣ ಎಸೆಯುತ್ತಿರುವುದು ಸೆರೆಯಾಗಿದೆ. ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. “ದಯವಿಟ್ಟು ಈತನ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ” ಎಂದು ನಗರ ಪೊಲೀಸರಿಗೆ ಟ್ಯಾಗ್ ಮಾಡಿ ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ