ತಂದೆಯ ತ್ಯಾಗಕ್ಕೆ ಮಗನ ಬಹುಮಾನ: ಅಪ್ಪನಿಗೆ ಉಡುಗೊರೆಯಾಗಿ ಟಾಟಾ ಪಂಚ್ ನೀಡಿದ ಮಗ

ಬೆಂಗಳೂರು ಮೂಲದ ಸಾಫ್ಟ್‌ವೇರ್ ಡೆವಲಪರ್ ಸತ್ಯಂ ಪಾಂಡೆ ತಮ್ಮ ತಂದೆಯ ತ್ಯಾಗ ಮತ್ತು ಶ್ರಮವನ್ನು ಗೌರವಿಸಿ ಹೊಸ ಟಾಟಾ ಪಂಚ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಮಕ್ಕಳಿಗೆ ಉತ್ತಮ ಜೀವನ ನೀಡಲು ಹಳೆಯ ದ್ವಿಚಕ್ರ ವಾಹನದಲ್ಲೇ ಓಡಾಡಿದ್ದ ತಂದೆಗೆ ಈ ಭಾವನಾತ್ಮಕ ಉಡುಗೊರೆ ನೀಡಲಾಗಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ತಂದೆಯ ತ್ಯಾಗಕ್ಕೆ ಮಗನ ಬಹುಮಾನ: ಅಪ್ಪನಿಗೆ ಉಡುಗೊರೆಯಾಗಿ ಟಾಟಾ ಪಂಚ್ ನೀಡಿದ ಮಗ
ವೈರಲ್​ ವಿಡಿಯೋ
Image Credit source: social Media

Updated on: Nov 06, 2025 | 3:44 PM

ಬೆಂಗಳೂರು ಮೂಲದ ಸಾಫ್ಟ್‌ವೇರ್ ಡೆವಲಪರ್ (software developer) ಒಬ್ಬರು ತಮ್ಮ ತಂದೆಗೆ ಕಾರನ್ನು ಗಿಫ್ಟ್ ನೀಡುವ ಮೂಲಕ​​ ಅಪ್ಪನ ಶ್ರಮ ಮತ್ತು ತ್ಯಾಗಕ್ಕೆ ಗೌರವ ನೀಡಿದ್ದಾರೆ. 26 ವರ್ಷದ ಸತ್ಯಂ ಪಾಂಡೆ ಎಂಬವವರು ತಮ್ಮ ತಂದೆಗೆ ಹೊಸ ಟಾಟಾ ಪಂಚ್ ಕಾರನ್ನು ಉಡುಗೊರೆಯಾಗಿ ನೀಡಿರುವ ಭಾವನತ್ಮಕ ಪೋಸ್ಟ್​​ನ್ನು ಹಂಚಿಕೊಂಡಿದ್ದಾರೆ. ಅಪ್ಪ ಮಾಡಿದ ತ್ಯಾಗ ಹಾಗೂ ಶ್ರಮಕ್ಕೆ ಇದು ಚಿಕ್ಕ ಕೊಡುಗೆ ಎಂದು ಪೋಸ್ಟ್​​​ನಲ್ಲಿ ಬರೆದುಕೊಂಡಿದ್ದಾರೆ. “ತನ್ನ ಮೂವರು ಮಕ್ಕಳು ಚೆನ್ನಾಗಿ ಓದಬೇಕು ಹಾಗೂ ಐಷಾರಾಮಿ ಜೀವನ, ವಸ್ತುಗಳನ್ನು ಕೊಟ್ಟು, ಎತ್ತರಕ್ಕೆ ಬೆಳೆಸಿದ್ದಾರೆ. ಆದರೆ ಅವರು ತನ್ನ ಜೀವನದುದ್ದಕ್ಕೂ ಆ ಹಳೆಯ ದ್ವಿಚಕ್ರ ವಾಹನದಲ್ಲೇ ಓಡುತ್ತಿದ್ದಾರೆ.” ಎಂದು ಸತ್ಯಂ ಪಾಂಡೆ ಅವರು ತಮ್ಮ ಅಪ್ಪನ ಬಗ್ಗೆ HT (hindustan times) ನಡೆಸಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಸತ್ಯಂ ಪಾಂಡೆ ಅವರ  ತಂದೆ ಪಾಟ್ನಾದ ಸಿವಿಲ್ ನ್ಯಾಯಾಲಯದಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ.  ಮೂರು ಮಕ್ಕಳಲ್ಲಿ ಸತ್ಯಂ ಪಾಂಡೆ  ಹಿರಿಯ ಮಗ, ಹಾಗಾಗಿ ಅವರಿಗೆ ಮನೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿ ತಿಳಿದಿತ್ತು. ಕೆಳಮಧ್ಯಮ ವರ್ಗದಲ್ಲಿ ಜನಿಸಿದ ಕಾರಣ ಅವರ ತಂದೆ ಮಕ್ಕಳನ್ನು ತುಂಬಾ ಕಷ್ಟದಿಂದ ಸಾಕಿದ್ದಾರೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ. ಸತ್ಯಂ ಪಾಂಡೆ  ಅವರು 14 ವರ್ಷದ ಬಾಲಕನಾಗಿದ್ದಾಗಲೇ ಅಪ್ಪನ ಕಷ್ಟವನ್ನು ನೋಡಿದ್ದಾರೆ. ಅವರ ತಂದೆ ಪಾಟ್ನಾದ 120 ಕಿ.ಮೀ. ದೂರದಲ್ಲಿದ್ದ ಬಕ್ಸಾರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಪ್ರತಿದಿನ ಬೆಳಗಿನ ಜಾವ ಎದ್ದು, 120 ಕಿ.ಮೀ. ದೂರ ರೈಲಿನಲ್ಲಿ ಪ್ರಯಾಣಿಸಿ, ತಡ ರಾತ್ರಿ ಮನೆಗೆ ವಾಪಸ್ ಬರುತ್ತಿದ್ದರು. ಅಪ್ಪನ ಕಷ್ಟಗಳನ್ನು ನೋಡಿಕೊಂಡು ಬೆಳೆದ ಕಾರಣ ಅವರು ಶ್ರಮಕ್ಕೆ ಯಾವತ್ತೂ ಅಗೌರವ ನೀಡಿಲ್ಲ. ನಮ್ಮ ಶಿಕ್ಷಣಕ್ಕೆ ಧಕ್ಕೆಯಾಗದಂತೆ ಎಲ್ಲ ಸಹಕಾರವನ್ನು ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ನಿಮ್ಮ ಬುದ್ಧಿವಂತಿಕೆಗೆ ಸವಾಲು; ಪ್ರತಿ ಸಾಲಿನ ಉತ್ತರ 15 ಬರುವಂತೆ ಈ ಮ್ಯಾಜಿಕ್ ಸ್ಕ್ವೇರ್ ಬಿಡಿಸಿದ್ರೆ ನೀವು ಜಾಣರು ಎಂದರ್ಥ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಸತ್ಯಂ ಪಾಂಡೆ ಅವರು ಮನೆಯ ಎಲ್ಲ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಸಾಫ್ಟ್‌ವೇರ್ ಡೆವಲಪರ್ ಕೆಲಸದ ಜತೆಗೆ ಇತರ ವ್ಯವಹಾರಗಳನ್ನು ಕೂಡ ಮಾಡುತ್ತಿದ್ದಾರೆ. ಮನೆಯ ಜವಾಬ್ದಾರಿ ಜತೆಗೆ ಶಿಕ್ಷಣಕ್ಕಾಗಿ ಮಾಡಿದ ಸಾಲವನ್ನು ತೀರಿಸಿಕೊಂಡು, ತಂಗಿಗೆ ಎಂಬಿಬಿಎಸ್ ಓದಿಸುತ್ತಿದ್ದಾರೆ. ಇದರ ಜತೆಗೆ ಅಪ್ಪನಿಗೆ ಹೊಸ ಕಾರು ಕೊಡಿಸಿದ್ದಾರೆ.   ತಮ್ಮ ತಂದೆಗೆ ನೀಡಿದ ಹೊಸ ಟಾಟಾ ಪಂಚ್ ಕಾರಿನ ವಿಡಿಯೋವನ್ನು ಎಕ್ಸ್​​ನಲ್ಲಿ ಹಂಚಿಕೊಂಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ