ಬೆಂಗಳೂರು ಸಾಕಾಗಿದೆ, ಜನರನ್ನು ಆಹ್ವಾನಿಸುವುದನ್ನು ನಿಲ್ಲಿಸುವ ಸಮಯ ಬಂದಿದೆ ಎಂದ ವ್ಯಕ್ತಿ
'ಬೆಂಗಳೂರು ಸಾಕಾಗಿದೆ, ಯಾರನ್ನೂ ಇಲ್ಲಿಗೆ ಕರೆಯಬೇಡಿ' ಎಂಬ ರೆಡ್ಡಿಟ್‌ನಲ್ಲಿ ವೈರಲ್ ಆಗಿರುವ ಪೋಸ್ಟ್ ನಗರದ ಸಮಸ್ಯೆಗಳನ್ನು ಬಿಚ್ಚಿಟ್ಟಿದೆ. ಮಿತಿಮೀರಿದ ಜನಸಂಖ್ಯೆ, ಮೂಲಸೌಕರ್ಯದ ಕೊರತೆ, ಗಗನಕ್ಕೇರಿದ ಬಾಡಿಗೆ, ನೀರಿನ ಸಮಸ್ಯೆ ಮತ್ತು ಪರಿಸರ ನಾಶದಿಂದ ಬೆಂಗಳೂರಿನಲ್ಲಿ ಜೀವನ ಕಷ್ಟಕರವಾಗಿದೆ ಎಂದು ಪೋಸ್ಟ್ ಹೇಳಿದೆ. ನಗರದ ಯೋಜನಾರಹಿತ ಬೆಳವಣಿಗೆಯ ಬಗ್ಗೆ ಜನರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಬೆಂಗಳೂರು ಸಾಕಾಗಿದೆ, (Bengaluru overpopulation) ಯಾರನ್ನು ಇಲ್ಲಿಗೆ ಬನ್ನಿ ಎಂದು ಕರೆಯಬೇಡಿ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೆಡ್ಡಿಟ್‌ನಲ್ಲಿ ಈ ಪೋಸ್ಟ್ ವೈರಲ್ ಆಗಿದ್ದು, ಇದಕ್ಕೊಂದು ಶೀರ್ಷಿಕೆಯನ್ನು ಕೂಡ ನೀಡಿದ್ದಾರೆ. “ಬೆಂಗಳೂರು ಸಾಕಾಗಿದೆ, ಜನರನ್ನು ಆಹ್ವಾನಿಸುವುದನ್ನು ನಿಲ್ಲಿಸುವ ಸಮಯ ಬಂದಿದೆ. ಮಿತಿ ಮೀರಿ ಬೆಳೆಯುತ್ತಿರುವ ನಗರ, ಹೆಚ್ಚುತ್ತಿರುವ ಬಾಡಿಗೆಗಳು, ಮೂಲಸೌಕರ್ಯದ ಕೊರತೆ, ಅಪರಾಧಗಳು, ಹೀಗೆ ಅನೇಕ ವಿಚಾರಗಳಿಂದ ಬೆಂಗಳೂರು ಬೇಡ ಎನ್ನುವ ನಿರ್ಧಾರಕ್ಕೆ ಬರಬೇಕಾದ ಸ್ಥಿತಿ ಬಂದಿದೆ.” ಎಂದು ಈ ಪೋಸ್ಟ್ನಲ್ಲಿ ಹೇಳಿಕೊಂಡಿದ್ದಾರೆ.
ವ್ಯಕ್ತಿಯೊಬ್ಬರು, ಬೆಂಗಳೂರಿನ ಜೀವನ ಸಾಕಾಗಿದೆ ಎನ್ನುವ ಮೂಲಕ ಬಹಳ ಹತಾಶೆ ವ್ಯಕ್ತಪಡಿಸಿದ್ದಾರೆ. “ಒಂದು ಕಾಲದಲ್ಲಿ ಎಲ್ಲರನ್ನು ಆಕರ್ಷಿಸುತ್ತಿದ್ದ, ಹಸಿರಿಗೆ ಹೆಸರುವಾಸಿಯಾಗಿದ್ದ ಬೆಂಗಳೂರು ಇಂದು ಅಧಿಕ ಜನಸಂಖ್ಯೆ ಮತ್ತು ಕಳಪೆ ಯೋಜನೆಯ ಒತ್ತಡದಿಂದ ಹೇಗೆ ಕುಗ್ಗುತ್ತಿದೆ ನೋಡಿ. ಇಲ್ಲಿನ ಜನ ದಟ್ಟಣೆ, ನೀರಿನ ಕೊರತೆ, ಹೆಚ್ಚುತ್ತಿರುವ ಬಾಡಿಗೆ, ಕಣ್ಮರೆಯಾಗುತ್ತಿರುವ ಮರಗಳು, ಪರಿಪೂರ್ಣವಾದ ಜೀವನ ಕಟ್ಟಿಕೊಳ್ಳುವ ಬದಲು ಜನ ವೇಗವಾಗಿ ಓಡುತ್ತಿದ್ದಾರೆ.” ಎಂದು ರೆಡ್ಡಿಟ್‌ನಲ್ಲಿ ಬರೆದುಕೊಂಡಿದ್ದು, ಇದೀಗ ಇದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಕಾರಣವಾಗಿದೆ.
ಇದನ್ನೂ ಓದಿ: ಗುಂಡಿಯಿಂದಾಗಿ ಕಾರು ರಿಪೇರಿಗೆ 23 ಸಾವಿರ ರೂ ಖರ್ಚು, ಗುಂಡಿ ಮುಚ್ಚಲು ನಾನು ಹಣ ಕೊಡ್ತೇನೆ ಎಂದ ನಿವಾಸಿ
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
ಇನ್ನು ಪೋಸ್ಟ್ ನೋಡಿ ಹಲವು ಬಳಕೆದಾರರು, ಮಿತಿ ಮೀರಿ ಬೆಳೆಯುತ್ತಿರುವ ಬೆಂಗಳೂರು, ಕಂಪನಿಗಳು, ಅವಕಾಶಗಳು, ಭರವಸೆ ನೀಡುತ್ತಲೇ ಇರುವ ರಾಜಕಾರಣಿಗಳ ಬಗ್ಗೆ ಟೀಕಿಸಿದ್ದಾರೆ. ನಗರಕ್ಕೆ ಬೇಕಾದ ಮೂಲಸೌಕರ್ಯಗಳ ಬಗ್ಗೆ ಯಾರೂ ಕೂಡ ಯೋಚನೆ ಮಾಡುತ್ತಿಲ್ಲ ಎಂದು ಹೇಳಿದ್ದಾರೆ. ಒಬ್ಬ ಬಳಕೆದಾರ ಬೆಂಗಳೂರಿನಲ್ಲಿ ಸ್ಥಳ ಎಲ್ಲಿದೆ? ನೀರು ಎಲ್ಲಿದೆ? ಈ ಬೆಳವಣಿಗೆ ನಿಜವಾಗಿ ಯಾರಿಗಾಗಿ? ನಿಗಮಗಳಿಗೆ ನೀಡುವ ತೆರಿಗೆಯಿಂದ ಏನು ಪ್ರಯೋಜನ? ಎಂದು ಪ್ರಶ್ನಿಸಿದ್ದಾರೆ. ಹೊಸ ಕಂಪನಿಗಳು ತಮ್ಮ ಲಾಭಗಳನ್ನು ಮಾತ್ರ ಮಾಡುತ್ತಿದೆ. ಇಲ್ಲಿನ ಜನರ ಅಭಿವೃದ್ಧಿಗೆ ಒತ್ತು ನೀಡುವುದಿಲ್ಲ ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:11 pm, Thu, 6 November 25




