
Viral Video : 19 ವರ್ಷದ ಹುಡುಗಿ 70 ವರ್ಷದ ವ್ಯಕ್ತಿಯನ್ನು ಮದುವೆಯಾದ ವಿಡಿಯೋ ವೈರಲ್ ಆಗಿದ್ದನ್ನು ನೋಡಿದ್ದೀರಿ. 17 ವರ್ಷದ ಶ್ರೀಮಂತ ಮನೆತನದ ಏಕೈಕ ಪುತ್ರಿ ಕಾರ್ ಡ್ರೈವರ್ನನ್ನು ಮದುವೆಯಾದ ವಿಡಿಯೋ ವೈರಲ್ ಆಗಿದ್ದನ್ನೂ ನೋಡಿದ್ದೀರಿ. 22 ವರ್ಷದ ಯುವಕ 65 ವರ್ಷದ ಮಹಿಳೆಯನ್ನು ಮದುವೆಯಾದ ಸುದ್ದಿ ಓದಿದ್ದೀರಿ. ಇದೀಗ ವೈರಲ್ ಆಗಿರುವ ವಿಡಿಯೋ ಮುಂಬೈ ಮೂಲದ್ದು. ಮಹಾರಾಷ್ಟ್ರದ ಸೊಲ್ಲಾಪುರದ ವರನೊಬ್ಬ ಮುಂಬೈನ ಅವಳಿ ಸಹೋದರಿಯರನ್ನು ಶುಕ್ರವಾರದಂದು ಮದುವೆಯಾಗಿದ್ದಾನೆ. ನೆಟ್ಟಿಗರೆಲ್ಲ ಹುಬ್ಬೇರಿಸಿ ಈ ಬಗ್ಗೆ ಚರ್ಚಿಸುತ್ತಿದ್ದಾರೆ.
ರಿಂಕಿ ಮತ್ತು ಪಿಂಕಿ ಅವಳಿ ಸಹೋದರಿಯರು ಮುಂಬೈ ಮೂಲದವರಾಗಿದ್ದು ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದಾರೆ. ನೋಟದಲ್ಲಿಯೂ ತದ್ರೂಪಿಗಳು. ಇವರಿಬ್ಬರನ್ನೂ ಮದುವೆಯಾದ ವರನ ಹೆಸರು ಅತುಲ್ ಅವಠಡೆ. ಈ ಮದುವೆಯ ವಿಡಿಯೋ ಆನ್ಲೈನ್ನಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರ ಗಮನಕ್ಕೆ ಬಂದಿದೆ, ಹಿಂದೂ ವಿವಾಹ ಕಾಯ್ದೆಗೆ ವಿರುದ್ಧವಾಗಿ ಈ ತ್ರಿಕೋನ ಮದುವೆ ನಡೆದಿದೆ ಎಂಬ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆದರೆ ಪಿಂಕಿ-ರಿಂಕಿಯ ಕುಟುಂಬ ಮತ್ತು ವರನ ಕುಟುಂಬ ಪರಸ್ಪರ ಒಪ್ಪಿಗೆಯ ಮೇಲೆ ಈ ವಿವಾಹ ನಡೆದಿದೆ. ಕಾರಣ, ಈ ಸಹೋದರಿಯರು ಮತ್ತು ಅತುಲ್ ಚಿಕ್ಕಂದಿನಿಂದಲೂ ಒಂದೇ ಕಡೆ ವಾಸಿಸುತ್ತಿದ್ದರು ಕ್ರಮೇಣ ಮೂವರು ಸೇರಿ ಮದುವೆಯ ನಿರ್ಧಾರಕ್ಕೆ ಬಂದರು ಎಂದು ವರದಿಯಾಗಿದೆ. ಆದರೆ ನೆಟ್ಟಿಗರು ಮಾತ್ರ ಕಾನೂನು ಮತ್ತು ನೈತಿಕ ಜವಾಬ್ದಾರಿಯ ಬಗ್ಗೆ ಪ್ರಶ್ನಿಸಿದ್ದಾರೆ.
ಸೊಲ್ಲಾಪುರ ಪೊಲೀಸರು ಅತುಲ್ನ ವಿರುದ್ಧ ಐಪಿಸಿ ಸೆಕ್ಷನ್ 494ರ ಅಡಿ ಪ್ರಕರಣ ದಾಖಲಿಸಿದ್ದಾರೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ