Viral Video : ಪಾಕಿಸ್ತಾನದಲ್ಲಿ 70 ವರ್ಷದ ಲಿಯಾಕತ್ ಅಲಿ, 19 ವರ್ಷದ ಶುಮೈಲಾ ಅಲಿ ಎಂಬ ಯುವತಿಯನ್ನು ಮದುವೆಯಾಗಿದ್ದಾನೆ. ಪಾಕಿಸ್ತಾನಿ ಯೂಟ್ಯೂಬರ್ ಸೈಯದ್ ಬಸಿತ್ ಅಲಿ ಈ ನವಜೋಡಿಯನ್ನು ಸಂದರ್ಶಿಸಿದ್ದಾರೆ. ಇದೀಗ ಈ ಸಂದರ್ಶನ ವೈರಲ್ ಆಗುತ್ತಿದೆ. ತಮ್ಮ ಪ್ರೇಮ ಹೇಗೆ ಶುರುವಾಯಿತು ಎನ್ನುವುದನ್ನು ಈ ವಿಡಿಯೋದಲ್ಲಿ ಅವರಿಬ್ಬರೂ ಹೇಳಿಕೊಂಡಿದ್ದಾರೆ.
ಮದುವೆಯಾಗುವ ಕೆಲ ತಿಂಗಳುಗಳ ಮೊದಲು ಇವರಿಬ್ಬರೂ ಬೆಳಗಿ ವಾಯುವಿಹಾರದಲ್ಲಿ ಭೇಟಿಯಾಗುತ್ತಿದ್ದರು. ಒಂದು ದಿನ ಶುಮೈಲಾ ಜಾಗಿಂಗ್ ಮಾಡುತ್ತಿದ್ದಾಗ ಲಿಯಾಕತ್ ಯಾವುದೋ ಒಂದು ಹಾಡನ್ನು ಗುನುಗಲಾರಂಭಿಸಿದ. ಆಗಲೇ ಶುಮೈಲಾಗೆ ಅವನ ಬಗ್ಗೆ ಪ್ರೀತಿ ಅಂಕುರಿಸಿತು. ‘ಪ್ರೀತಿಗೆ ವಯಸ್ಸಿಗೆ ಸಂಬಂಧವೇ ಇಲ್ಲ. ಅದು ಸಂಭವಿಸುತ್ತದೆ ಅಷ್ಟೇ’ ಎಂದಿದ್ದಾಳೆ ಶುಮೈಲಾ. ಪೋಷಕರು ಈ ಮದುವೆಗೆ ವಿರೋಧಿಸಿದರು. ಆದರೆ ನಾವು ಅವರಿಗೆ ಅರ್ಥ ಮಾಡಿಸಿದೆವು ಎಂದೂ ಹೇಳಿದ್ದಾಳೆ.
‘ಮದುವೆಗೆ ವಯಸ್ಸಿ ಬೇಧವಿಲ್ಲ. ಕಾನೂನುಬದ್ಧವಾಗಿ ಮದುವೆಯಾಗುವುದಷ್ಟೇ ಮುಖ್ಯ. ಇನ್ನು ಮದುವೆಯಲ್ಲಿ ಪರಸ್ಪರರು ವೈಯಕ್ತಿಕ ಘನತೆ ಗೌರವ ಕಾಪಾಡಿಕೊಳ್ಳಬೇಕು’ ಎಂದಿದ್ದಾಳೆ.
ಈ ಹಿಂದೆ 55 ವರ್ಷದ ವ್ಯಕ್ತಿಹಯೊಬ್ಬನನ್ನು 18 ವರ್ಷದ ಹುಡುಗಿಯು ಮದುವೆಯಾದ ಸ್ಟೋರಿಯನ್ನು ಇದೇ ಯೂಟ್ಯೂಬರ್ ಸಂದರ್ಶಿಸಿದ್ದು ನೆನಪಿರಬಹುದು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ