ಫುಡ್ ಡೆಲಿವರಿಗಾಗಿ 30,000 ಕಿ.ಮೀ ಪ್ರಯಾಣಿಸಿದ ಈ ಯುವತಿ
Food Delivery Agent : ಸಿಂಗಾಪುರದಿಂದ ಅಂಟಾರ್ಟಿಕಾ ತನಕ, ವಾಯುಮಾರ್ಗ, ಭೂಮಾರ್ಗ, ಜಲಮಾರ್ಗದ ಮೂಲಕ ಪ್ರಯಾಣಿಸಿ, ಹಿಮಪ್ರದೇಶದಲ್ಲಿ ನಡೆದು ತನ್ನ ಗ್ರಾಹಕರಿಗೆ ಆಹಾರವನ್ನು ತಲುಪಿಸುತ್ತಾಳೆ ಈ ಯುವತಿ! ನೋಡಿ ವಿಡಿಯೋ.
Viral Video : ಎಷ್ಟೆಷ್ಟೋ ದೂರದಿಂದ ಫುಡ್ ಏಜಂಟರುಗಳು ನಮಗೆ ಆಹಾರವನ್ನು ಸರಿಯಾದ ಸಮಯದಲ್ಲಿ ತಲುಪಿಸಿ ಹೋಗುತ್ತಾರೆ. ಆದರೆ ಸಾವಿರಾರು ಕಿ.ಮೀಟರ್ಗಟ್ಟಲೆ ಪ್ರಯಾಣಿಸಿದವರನ್ನು ಈತನಕ ಕೇಳಿದ್ದಿರಾ ಅಥವಾ ನೋಡಿದ್ದಿರಾ? ಈಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ಈ ಯುವತಿ ಫುಡ್ ಡೆಲಿವರಿಗಾಗಿ ಪ್ರಯಾಣಿಸಿದ್ದು ಬರೋಬ್ಬರಿ 30,000 ಕಿ.ಮೀ! ಸಿಂಗಾಪುರದಿಂದ ಅಂಟಾರ್ಟಿಕಾತನಕ ಈಕೆ ಪ್ರಯಾಣಿಸಿದ ಮಾಂಟೇಜ್ ಅನ್ನೂ ಇನ್ಸ್ಟಾಗ್ರಾಂನಲ್ಲಿ ನೋಡಬಹುದಾಗಿದೆ.
View this post on Instagram
ಸಿಂಗಾಪುರದಿಂದ ವಿಮಾನದಲ್ಲಿ ಪ್ರಯಾಣ ಪ್ರಾರಂಭಿಸಿ, ಹ್ಯಾಂಬರ್ಗ್ಗೆ ಹೋಗುತ್ತಾಳೆ. ನಂತರ ಬ್ಯೂಯಾನಸ್ ಏರ್ಸ್, ಉಷೂಯಾ ನಂತರ ಅಂಟಾರ್ಟಿಕಾಗೆ ಬರುತ್ತಾಳೆ. ಭೂಮಾರ್ಗ, ಜಲಮಾರ್ಗ, ವಾಯುಮಾರ್ಗ ಕೊನೆಗೆ ಹಿಮಪ್ರದೇಶದಲ್ಲಿ ಪ್ರಯಾಣಿಸಿ ಗ್ರಾಹಕರಿಗೆ ಆಹಾರವನ್ನು ತಲುಪಿಸುತ್ತಾಳೆ.
ಈತನಕ ಸುಮಾರು 40,000 ಜನರು ಈ ವಿಡಿಯೋ ನೋಡಿದ್ದಾರೆ. 6,000 ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಹಲವರು ಇದನ್ನು ಅದ್ಭುತ ಎಂದಿದ್ದಾರೆ. ಇನ್ನೂಕೆಲವರು ಹುಚ್ಚುತನ ಎಂದಿದ್ದಾರೆ. ಡೆಲಿವರಿಯ ಚಾರ್ಜ್ ಎಷ್ಟಾಗಿತ್ತು ಎಂದು ಕೇಳಿದ್ದಾರೆ ಕೆಲವರು.
ಇದನ್ನು ನೋಡಿದ ನೀವು ಏನು ಹೇಳುತ್ತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ