ಏನಿದು ಟರ್ಕಿಶ್ ಕಾಫಿ ವಿಶೇಷ? ನೋಡಿ ಈ ವೈರಲ್ ವಿಡಿಯೋ
Turkish Coffee : ಮರಳಿನ ಮೇಲೆ ಕಾಫಿ ಮಾಡುವುದೆ, ಅದು ಹೇಗೆ ಎಂದು ಯೋಚಿಸುತ್ತಿದ್ದೀರಾ? ಶತಮಾನಗಳಿಂದಲೂ ಇದು ಚಾಲ್ತಿಯಲ್ಲಿದೆ. ಇದರ ಸುವಾಸನೆಗೆ ಅನೇಕರು ಮನಸೋತಿದ್ದಾರೆ.
Viral Video : ಎಷ್ಟೋ ಬಗೆಯ ಕಾಫಿಗಳು ಜಗತ್ತಿನಾದ್ಯಂಥ ಲಭ್ಯವಿರುವಾಗ ಈ ಕಾಫಿ ಮಾತ್ರ ಯಾಕೆ ಇಷ್ಟು ಜನರನ್ನು ಸೆಳೆದಿರಬಹುದು? ಟರ್ಕಿಷ್ ಐಸ್ಕ್ರೀಂ ಬಗ್ಗೆ ಕೇಳಿದ್ದೀರಿ ಆದರೆ ಟರ್ಕಿಷ್ ಕಾಫಿ ಬಗ್ಗೆ ಕೇಳಿದ್ದೀರಾ? ಸುವಾಸನೆಯುಕ್ತ ಈ ಕಾಫಿ ತಯಾರಿಕೆಯಿಂದಲೇ ವಿಶೇಷ ಗಮನ ಸೆಳೆಯುತ್ತದೆ. ಟರ್ಕಿಷ್ ಕಾಫಿಯ ಈ ವಿಡಿಯೋ ಅನ್ನು 6.5 ಜನರು ನೋಡಿದ್ದಾರೆ. 68,000 ಜನ ಇಷ್ಟಪಟ್ಟಿದ್ದಾರೆ. ನೀವೂ ಈ ವಿಡಿಯೋ ನೋಡಿ.
Making Turkish coffee using hot sand.pic.twitter.com/GbYZRMzJdX
ಇದನ್ನೂ ಓದಿ— Fascinating (@fasc1nate) November 14, 2022
ಇದೇನು ಹೊಸ ಕ್ರಮವಲ್ಲ. ನೂರಾರು ವರ್ಷಗಳಿಂದಲೂ ಇದೇ ರೀತಿಯಲ್ಲಿ ಟರ್ಕಿಷ್ ಕಾಫಿಯನ್ನು ತಯಾರಿಸುತ್ತ ಬರಲಾಗಿದೆ. ಈ ಕಾಫಿಗಾಗಿ ಅರೇಬಿಕಾ ಬೀಜಗಳು ಮತ್ತು ಸ್ವಲ್ಪ ಸಕ್ಕರೆ ಹಾಕಲಾಗುತ್ತದೆ. ಕಾಫಿ ತಯಾರಿಕೆಗೆಂದೇ ಸೆಝ್ವೆ ಎಂಬ ವಿಶೇಷ ಪುಟ್ಟಪಾತ್ರೆಯನ್ನು ಇದಕ್ಕೆ ಬಳಸಲಾಗುತ್ತದೆ. ಇದನ್ನು ಮಂದಜ್ವಾಲೆಯಲ್ಲಿ ಕುದಿಸಲಾಗುತ್ತದೆ. ನಂತರ ಬಿಸೀಮರಳಿನ ಬಿಸಿ ಮಾಡಿ ಅದರ ಪರಿಮಳ ಹೊಮ್ಮಿಸಲಾಗುತ್ತದೆ.
ಹದಿನೈದು ಸೆಕೆಂಡುಗಳ ಈ ವಿಡಿಯೋ ನೋಡಿದ ಜನರು ತಾವೂ ಈ ಕಾಫಿ ತಯಾರಿಸಲು ಪ್ರಯತ್ನಿಸುವುದಾಗಿ ಹೇಳಿದ್ಧಾರೆ. ಅನೇಕರು ಇದು ಬಹಳ ರುಚಿಯಾಗಿರುತ್ತದೆ. ಸುವಾಸನೆಯೇ ನಿಮ್ಮನ್ನು ಮರಳುಮಾಡುತ್ತದೆ ಎಂದಿದ್ದಾರೆ. ನೀವೂ ಈ ಕಾಫಿ ಮಾಡಲು ಪ್ರಯತ್ನಿಸುತ್ತೀರಾ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ