ಬೆಕ್ಕಿನ ಹೇರ್ ಕಟಿಂಗ್; ಏಯ್ ಮಾನವ, ನನ್ನ ಮೀಸೆ ಮಾತ್ರ ಕಟ್ ಮಾಡಬೇಡ!
Haircut : ದಿನಾ ಅದೇ ಇಲಿ ಅದೇ ಊಟ. ಅದಕ್ಕೆ ಈವತ್ತು ನನ್ನ ಫ್ರೆಂಡ್ ಜೊತೆ ಔಟಿಂಗ್ ಹೋಗ್ತೀದೀನಿ. ಸಲೂನಿನಲ್ಲಿ ಹೀಗೆ ಕುಳಿತ ನನ್ನನ್ನು ನೋಡಿದ ನೆಟ್ಟಿಗರೆಲ್ಲ ಅತ್ಯಂತ ಶಾಂತಿಯುತ ಬೆಕ್ಕು ಅಂತ ಅವಾರ್ಡ್ ಕೊಟ್ಟಿದಾರೆ. ನೋಡಿ ವಿಡಿಯೋ.
Viral Video : ಸುಂದರವಾಗಿ ಕಾಣಲು ಆರಾಮಾಗಿ ಇರಲು ನೀವು ಏನೆಲ್ಲ ಮಾಡಿಸಿಕೊಳ್ಳುತ್ತೀರೋ ಅದೆಲ್ಲ ನಮಗೂ ಬೇಕು ಎನ್ನುತ್ತಿವೆ ಬೆಕ್ಕು ನಾಯಿಗಳು. ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೆ ಇಂಥ ಸಾವಿರಾರು ವಿಡಿಯೋಗಳನ್ನು ನೋಡಿರುತ್ತೀರಿ. ಈ ಬೆಕ್ಕಿಗೆ ಕಿರಿಕಿರಿಯಾಗುತ್ತಿದ್ದರೆ ನೆಟ್ಟಿಗರೆಲ್ಲ ಇದು ಪ್ರಾಣಿಹಿಂಸೆ ಎಂದು ಖಂಡಿಸುತ್ತಿದ್ದರು. ಆದರೆ ಇದು ಆರಾಮಾಗಿ ಹೇರ್ ಕಟ್ ಮಾಡಿಸಿಕೊಳ್ಳುತ್ತಿದೆ. ಅದರ ಕಣ್ಣು, ಮುಖ, ಎಕ್ಸ್ಪ್ರೆಷನ್ ಗಮನಿಸಿ.
just a little off the top pic.twitter.com/LqcCdZQ6Vt
ಇದನ್ನೂ ಓದಿ— chaotic cat pictures & videos (@chaoticcatpics) November 16, 2022
ಕೆಲದಿನಗಳ ಹಿಂದೆ ಈ ವಿಡಿಯೋ ಟ್ವೀಟ್ ಮಾಡಲಾಗಿದ್ದು 2.8 ಮಿಲಿಯನ್ ಜನರು ಇದನ್ನು ನೋಡಿದ್ದಾರೆ. ಅನೇಕರು ಈ ಚೆಂದದ ವಿಡಿಯನ್ನು ಕೊಂಡಾಡಿದ್ದಾರೆ. ಇದು ನಾ ನೋಡಿದ ಅತ್ಯಂತ ಶಾಂತ ಬೆಕ್ಕು ಎಂದಿದ್ದಾರೆ ಒಬ್ಬರು. ಇದನ್ನು ನೋಡಿ ನಗು ನಿಲ್ಲಿಸಲಾಗುತ್ತಲೇ ಇಲ್ಲ ಎಂದಿದ್ದಾರೆ ಇನ್ನೂ ಒಬ್ಬರು. ನೆಟ್ಟಿಗರು ಹೇಳುವುದರಲ್ಲಿ ನಿಜ ಇದೆ. ಅವುಗಳಿಗೆ ಇಷ್ಟವಾಗದ ಯಾವುದನ್ನೂ ಅವು ಹತ್ತಿರ ಸೇರಿಸಿಕೊಳ್ಳುವುದೇ ಇಲ್ಲ. ಹತ್ತಿರ ಸೇರಿಸಿಕೊಂಡಿವೆ ಎಂದರೆ ಅವುಗಳಿಗೆ ಇಷ್ಟವಾಗಿದೆ ಎಂದರ್ಥ. ಹಾಗೆಯೇ ಈ ಹೇರ್ ಕಟ್ ಮಾಡಿಸಿಕೊಳ್ಳುವುದು ಇದಕ್ಕೆ ಇಷ್ಟವಾಗಿರಬೇಕು.
ಹುಷಾರು ನಿಮ್ಮ ಮನೆಯ ಬೆಕ್ಕಿಗೆ ಹೇರ್ ಕಟ್ ಮಾಡೋಕೆ ಹೋಗಿ ಅವಾಂತರಕ್ಕೆ ಬಿದ್ದೀರಿ! ಎಲ್ಲ ಬೆಕ್ಕುಗಳೂ ಒಂದೇ ತೆರನಾಗಿ ಇರುವುದಿಲ್ಲ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:27 pm, Fri, 18 November 22