ಸೋಮಾರಿ ಬೆಳ್ಳಕ್ಕಿ; ಹಾರಲು ಒಲ್ಲೆ, ಸ್ಟಂಟ್ ಆದರೆ ಓಕೆ
Seagull : ನೆಲ ಬಿಟ್ಟು ಮೇಲೆ ಹಾರಿದರೆ ಮಜಾ. ನಮ್ಮಷ್ಟಕ್ಕೆ ನಾವೇ ಹಾರಿದರೆ ಇನ್ನೂ ಮಜಾ. ಹಾರುವವರ ಬೆನ್ನ ಮೇಲೆ ರೆಕ್ಕೆ ಬಿಚ್ಚಿ ಪೋಸ್ ಕೊಟ್ರಂತೂ ಮಹಾಮಜಾ. ಯಾರ ಬರ್ತೀರಿ ಫ್ರೀ ರೈಡ್? ಆಗಾಗ ಇಂಥದೆಲ್ಲ ಸ್ವಲ್ಪ ಇರಬೇಕು ಜೀವನದಲ್ಲಿ.
Viral Video : ನಿನ್ನೆಯಷ್ಟೇ ಈ ವಿಡಿಯೋ ಟ್ವೀಟ್ ಮಾಡಲಾಗಿದೆ. ಈಗ 1.1 ಮಿಲಿಯನ್ ಜನರನ್ನು ತಲುಪಿದೆ. 40,000 ಜನ ಈ ವಿಡಿಯೋ ಇಷ್ಟಪಟ್ಟಿದ್ದಾರೆ. 5,000ಕ್ಕಿಂತಲೂ ಹೆಚ್ಚು ಜನ ರೀಟ್ವೀಟ್ ಮಾಡಿದ್ದಾರೆ. 475 ಕೋಟ್ಟ್ವೀಟ್ ಮಾಡಿದ್ದಾರೆ. ಇದು ಹಳೆಯ ವಿಡಿಯೋ ಆದರೂ ನೆಟ್ಟಿಗರಿಗೆ ಮತ್ತೊಮ್ಮೆ ಬಹಳ ಇಷ್ಟವಾಗಿದೆ ಎಂದರ್ಥ. ಪಕ್ಷಿಗಳಿಗೂ ಹೀಗೆಲ್ಲ ಆಗಾಗ ಏನಾದರೂ ಸಾಹಸಕ್ಕೆ ಬೀಳಬೇಕು ಅನ್ನಿಸುತ್ತಿದೆ ಅಂದಹಾಗಾಯ್ತು. ನೋಡಿ ನೀವೇ ವಿಡಿಯೋ. ಎಂಥ ಲೀಲಾಜಾಲವಾಗಿ ಸ್ಟಂಟ್ ಮಾಡಿವೆ ಬೆಳ್ಳಕ್ಕಿಗಳು.
Seagull taking a free ride.. ?
ಇದನ್ನೂ ಓದಿ?Lincoln City, Oregon ? Imgur: Dave D pic.twitter.com/FWvJIH6uqe
— Buitengebieden (@buitengebieden) November 16, 2022
ಕೇವಲ 6 ಸೆಕೆಂಡಿನ ವಿಡಿಯೋ ಇದು. ಭಲೇ ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ನಾಸಾದ ಶೆಟಲ್ ಕ್ಯಾರಿಯರ್ ವಿಮಾನವನ್ನು ನೆನಪಿಸಿಕೊಂಡಿದ್ದಾರೆ. 1983 ರಲ್ಲಿ ರೋಮ್‌ನಲ್ಲಿ ಹಾರಿದ ಬೋಯಿಂಗ್ 747 SCA ಯಂತೆ ಕಾಣುತ್ತಿದೆ ಎಂದಿದ್ದಾರೆ ಒಬ್ಬರು. ನನ್ನ ಇಡೀ ಜೀವನದುದ್ದಕ್ಕೂ ಬೆಳ್ಳಕ್ಕಿಗಳನ್ನು ಗಮನಿಸುತ್ತಲೇ ಬಂದಿದ್ದೇನೆ. ಆದರೆ ಈ ರೀತಿಯಾಗಿ ಎಂದೂ ಎಲ್ಲಿಯೂ ನೋಡಿದ್ದಿಲ್ಲ, ಅತ್ಯದ್ಭುತ ಇದು ಎಂದಿದ್ದಾರೆ.
ಮನುಷ್ಯನಿಗಷ್ಟೇ ಅಲ್ಲ ಪ್ರಾಣಿ ಪಕ್ಷಿಗಳೂ ಹೀಗೆ ತಮ್ಮದೇ ಲೋಕದಲ್ಲಿ ಸಂತೋಷದಿಂದ, ಪುಳಕದಿಂದ ಕಳೆದು ಹೋಗಲು ಏನಾದರೊಂದು ಪ್ರಯೋಗಗಳಿಗೆ ತೆರೆದುಕೊಳ್ಳುತ್ತಿರುತ್ತವೆ. ಹೌದು ತಾನೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:23 am, Fri, 18 November 22