ಅಗ್ಗದ ಲೆಹೆಂಗಾ ಕಳಿಸಿದ ವರನ ಕುಟುಂಬ, ಈ ಮದುವೆಯೇ ಬೇಡವೆಂದ ವಧು

Cheap Lehenga : ರೂ. 10,000 ಲೆಹೆಂಗಾ ಅನ್ನು ವರನ ತಂದೆತಾಯಿ ಆರ್ಡರ್ ಮಾಡಿದ್ದಾರೆ. ಆದರೆ ವಧು ಇದು ಅಗ್ಗದ್ದು ಎಂದು ತಿರಸ್ಕರಿಸಿದ್ದಾಳೆ. ಅಷ್ಟೇ ಅಲ್ಲ ಈ ಮದುವೆಯೇ ಬೇಡವೆಂದು ಹೇಳಿದ್ದಾಳೆ. ಎಲ್ಲೆಡೆ ಆಮಂತ್ರಣ ಪತ್ರಿಕೆ ಹಂಚಿಯಾಗಿತ್ತು.

ಅಗ್ಗದ ಲೆಹೆಂಗಾ ಕಳಿಸಿದ ವರನ ಕುಟುಂಬ, ಈ ಮದುವೆಯೇ ಬೇಡವೆಂದ ವಧು
Bride Calls Off Wedding As Groom’s Family Sends Her Cheap Lehenga
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 17, 2022 | 12:28 PM

Viral : ಹಿರಿಯರು ನಿರ್ಧರಿಸಿದ ಮದುವೆ ಎಂದಮೇಲೆ ಎಲ್ಲವೂ ವಧುವರರ ಇಷ್ಟದಂತೆಯೇ ಆಗುತ್ತದೆ ಎಂದು ಹೇಳಲಾಗುವುದಿಲ್ಲ. ಅವರದೂ ಇಷ್ಟ ಇವರದೂ ಇಷ್ಟ ಅಂತ ಅಷ್ಟಷ್ಟೇ ಇಷ್ಟಕಷ್ಟಗಳ ನಡುವೆ ಮದುವೆ ತಯಾರಿ ನಡೆಯುತ್ತಿರುತ್ತದೆ. ಕೊನೆಗೆ ಹಾಗೂ ಹೀಗೂ ಆಗಿ ಅಂತೂ ಮದುವೆ ಎನ್ನುವುದೊಂದು ಆಗಿಯೇ ಬಿಡುತ್ತದೆ. ಆದರೆ ಮದುವೆಯೊಂದು ಮುರಿದು ಬೀಳುತ್ತದೆ ಎಂದರೆ ಅದಕ್ಕೆ ಇನ್ನೇನೋ ಗಂಭೀರ ಕಾರಣಗಳಿರುತ್ತವೆ ಎಂದರ್ಥ. ಆದರೆ ಇದೀಗ ವೈರಲ್ ಆಗುತ್ತಿರುವ ಈ ಸುದ್ದಿಯನ್ನು ಗಮನಿಸಿ. ವರನ ಮನೆಯವರು ಅಗ್ಗದ ಲೆಹೆಂಗಾ ಕಳಿಸಿದ್ದಾರೆಂಬ ಕಾರಣಕ್ಕೆ ವಧು ಈ ಮದುವೆಯೇ ಬೇಡವೆಂದು ತೀರ್ಮಾನಿಸಿದಳು.

ಮದುವೆಗೆ ಕೆಲ ದಿನಗಳಿರುವಾಗ ಲಕ್ನೋದಿಂದ ವರನ ತಂದೆತಾಯಿ ವಧುವಿಗೆಂದು ರೂ. 10,000 ಲೆಹೆಂಗಾ ಆರ್ಡರ್ ಮಾಡಿದರು. ಆದರೆ ಇದು ಅಗ್ಗದ ಲೆಹೆಂಗಾ ತನಗೆ ಇಷ್ಟವಾಗಿಲ್ಲ ಎಂದು ಆಕೆ ಅದನ್ನು ನಿರಾಕರಿಸಿದಳು. ಅಷ್ಟೇ ಅಲ್ಲ ಈ ಮದುವೆಯೇ ಬೇಡವೆಂದು ಹೇಳಿದಳು. ಉತ್ತರಾಖಾಂಡದ ಹಲ್ದಾನಿಯಲ್ಲಿ ವಧು ವಾಸವಾಗಿದ್ದಾಳೆ. ಈ ಮದುವೆ ಆಮಂತ್ರಣ ಪತ್ರಿಕೆಗಳು ಎಲ್ಲೆಡೆ ಹಂಚಿಯಾಗಿತ್ತು. ಜೂನ್​ನಲ್ಲಿ ಇಬ್ಬರೂ ನಿಶ್ಚಿತಾರ್ಥಕ್ಕೆ ಒಳಗಾಗಿದ್ದರು. ನವೆಂಬರ್ 5ರಂದು ಇವರಿಬ್ಬರ ಮದುವೆ ನಡೆಯಬೇಕಿತ್ತು. ಇದೀಗ ಪೊಲೀಸರು ಈ ಮದುವೆ ರದ್ದಾಗಿದೆ ಎಂದು ಹೇಳಿದ್ದಾರೆ.

ನಿಜವಾದ ಕಾರಣವೇನಿತ್ತೋ? ತಿಳಿದುಬಂದಿಲ್ಲ. ಆದರೆ ಲೆಹೆಂಗಾದ ವಿಷಯವಾಗಿ ಮದುವೆ ಬೇಡವೆನ್ನುವುದು ಅಷ್ಟು ಸಮಂಜಸವೂ ಎನ್ನಿಸುತ್ತಿಲ್ಲ. ಯಾರಿಗೆ ಗೊತ್ತು ಯಾರ ಮನಸು, ಸಂದರ್ಭ, ನಿರೀಕ್ಷೆ, ಗುರಿ ಏನೆಲ್ಲ ಇರುತ್ತದೆ ಎಂದು?

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 10:57 am, Thu, 17 November 22

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್