ಮದುವೆಯೊಂದರಲ್ಲಿ ಭಾಂಗ್ರಾ ನೃತ್ಯದಲ್ಲಿ ಮುಳುಗೇಳುತ್ತಿರುವ ಈ ಪುರುಷರ ವಿಡಿಯೋ ವೈರಲ್
Bhangra Dance : ವಯಸ್ಸಾಯ್ತೆಂದು ಎಷ್ಟೇ ಗಂಭೀರವಾಗಿ ಇರಲು ನೋಡಿದರೂ ನಿಮ್ಮೊಳಗಿನ ಮಗು ಸಂದರ್ಭಕ್ಕೆ ತಕ್ಕಂತೆ ಯಾರಿಗೂ ಹೇಳದೇ ಕೇಳದೆ ಹೀಗೆ ಕುಣಿಯಲು ಶುರುಮಾಡುತ್ತದೆ. ನೋಡಿ ಈ ವೈರಲ್ ವಿಡಿಯೋ.
Viral Video : ಮದುವೆ ಎಂದರೆ ಕೇಳಬೇಕೆ? ಸಂಭ್ರಮ ತೇಲಾಡುತ್ತಿರುತ್ತದೆ. ಬಣ್ಣ, ಬೆಳಕು, ಪರಿಮಳ, ನಗು ಒಟ್ಟು ಉತ್ಸಾಹ ತುಂಬಿ ತುಳುಕುತ್ತಿರುತ್ತದೆ. ದೈನಂದಿನ ಏಕತಾನತೆಯನ್ನು ಮುರಿಯುವ ಇಂಥ ಸಂದರ್ಭಗಳಲ್ಲೇ ವಿಶೇಷ ಶಕ್ತಿ ಉಕ್ಕುವುದು. ಈಗಿಲ್ಲಿ ನೋಡಿ, ಪಂಜಾಬಿ ಪುರುಷರುಗಳು ಮದುವೆಯೊಂದರಲ್ಲಿ ಮೈಮರೆತು ಕುಣಿದಿದ್ದಾರೆ. ನೆಟ್ಟಿಗರು ಇವರ ಉತ್ಸಾಹಕ್ಕೆ ಭಲೇ ಎನ್ನುತ್ತಿದ್ದಾರೆ.
ಇದನ್ನೂ ಓದಿView this post on Instagram
ಈ ನೃತ್ಯವನ್ನು 87,000ಕ್ಕೂ ಹೆಚ್ಚು ಜನ ಇಷ್ಟಪಟ್ಟಿದ್ದಾರೆ. ಅದ್ಭುತವಾದ ನೃತ್ಯವಿದು ನೀವಷ್ಟೇ ಇದನ್ನು ಇಷ್ಟು ಚೆಂದವಾಗಿ ಮಾಡಲು ಸಾಧ್ಯ ಎಂದಿದ್ದಾರೆ ನೆಟ್ಟಿಗರನೇಕರು. ನಿಮಗಿರುವ ಈ ತಾಕತ್ತು ನಮಗಿಲ್ಲಬಿಡಿ ಎಂದಿದ್ದಾರೆ ಅನೇಕರು. ನಮಗೂ ಕಲಿಸಿಕೊಡಿ ಭಾಂಗ್ರಾ ಎಂದಿದ್ದಾರೆ ಹಲವರು.
ನೃತ್ಯದಲ್ಲಿ ಮೈಮನಸ್ಸು ಎರಡೂ ತೊಡಗುವುದರಿಂದ ವಿಶಿಷ್ಟ ಚೈತನ್ಯ ನಿಮ್ಮದಾಗುತ್ತದೆ. ಅಷ್ಟೇ ಅಲ್ಲ ಸುತ್ತಮುತ್ತಲೂ ನಿಂತು ನೋಡುತ್ತಿರುವವರಲ್ಲಿಯೂ ಆ ಅಲೆಗಳು ಹರಡುತ್ತವೆ. ಈ ವಿಡಿಯೋದಲ್ಲಿ ನೋಡಿ ಮಹಿಳೆಯರೂ ಪ್ರೇರಿತಗೊಂಡು ನರ್ತಿಸಿದ್ಧಾರೆ.
ನಿಮಗೂ ಈ ಭಾಂಗ್ರಾ ಮಾಡಬೇಕು ಅನ್ನಿಸುತ್ತಿದೆಯಾ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 5:56 pm, Fri, 18 November 22