ಒಡಿಶಾ : ಕೆಳಗೆ ನೀರು ಮೇಲೆ ಬಾನು ನಡುವೆ ವಲಸೆ ಹಕ್ಕಿಗಳ ಹಾರಾಟ, ನೋಡಿ ವಿಡಿಯೋ

Odisha : ಋತುಮಾನಕ್ಕೆ ತಕ್ಕಂತೆ ಪ್ರಕೃತಿಯಲ್ಲಿ ರಮ್ಯವಾದದ್ದು ಘಟಿಸುತ್ತಾ ಇರುತ್ತದೆ. ಒಮ್ಮೆ ಎಲ್ಲ ಜಂಜಡಗಳನ್ನು ಬಿಟ್ಟು ಆಗಾಗ ಇಂಥ ಪ್ರದೇಶಗಳಲ್ಲಿ ಕಳೆದುಹೋಗುತ್ತಿರಬೇಕು. ಏನಂತೀರಿ?

ಒಡಿಶಾ : ಕೆಳಗೆ ನೀರು ಮೇಲೆ ಬಾನು ನಡುವೆ ವಲಸೆ ಹಕ್ಕಿಗಳ ಹಾರಾಟ, ನೋಡಿ ವಿಡಿಯೋ
Migratory birds in Odisha
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 18, 2022 | 5:27 PM

Viral Video : ಪ್ರಕೃತಿ ಮತ್ತು ಜೀವವೈವಿಧ್ಯ ಎಂದಿಗೂ ಮುಗಿಯದಂಥ ಅನೇಕ ಅಚ್ಚರಿಗಳನ್ನು ತನ್ನ ಗರ್ಭದಲ್ಲಿ ಅಡಗಿಸಿಕೊಂಡಿರುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ. ಒಡಿಶಾದಲ್ಲಿ ವಲಸೆ ಹಕ್ಕಿಗಳ ಸುಸಮಯ ಶುರುವಾಗಿದೆ. ಚಿಲಿಕಾ ಸರೋವರದಲ್ಲಿ ಈಗ ಈ ಹಕ್ಕಿಗಳ ಕಲರವ ನೋಡಬಹುದಾಗಿದೆ. ಐಎಎಸ್ ಅಧಿಕಾರಿ ಸುಸಾಂತ ನಂದಾ ಈ ವಿಡಿಯೋ ಹಂಚಿಕೊಂಡ ನಂತರ ವೈರಲ್ ಆಗುತ್ತಿದೆ.

ಕೆಳಗೆ ನೀರು ಮೇಲೆ ಬಾನು ನಡುವೆ ವಲಸೆ ಹಕ್ಕಿಗಳ ಹಾರಾಟ. 16 ಸೆಕೆಂಡುಗಳ ಈ ದೃಶ್ಯ ನಿಮ್ಮನ್ನು ಅನುಪಮ ಜಗತ್ತಿಗೆ ಕರೆದೊಯ್ಯುತ್ತಿದೆ. ಹಕ್ಕಿಗಳಿಗೆ ಈ  ಚಿಲಿಕಾ ಸ್ವರ್ಗವೇ ಸರಿ. ಸಂತಾನೋತ್ಪತ್ತಿಗೆ ಸೂಕ್ತವಾದ ಜಾಗವನ್ನು ಹುಡುಕಿಕೊಂಡು ಅದಕ್ಕೆ ಬೇಕಾದ ತಯಾರಿಯಲ್ಲಿ ಮುಳುಗಿವೆ ಈ ಹಕ್ಕಿಗಳು. ಪ್ರಶಾಂತವಾದ ಜಾಗ, ಗೂಡು ಕಟ್ಟಲು ಎಲೆ, ನಾರುಗಳ ಸಂಗ್ರಹಣೆ ಹೀಗೆ ಭವಿಷ್ಯದ ಕೆಲಸಗಳಲ್ಲಿ ತನ್ಮಯವಾಗಿವೆ. ಇವುಗಳು ಹೀಗೆ ಈ ಚಟುವಟಿಕೆಯಲ್ಲಿ ತೊಡಗಿಕೊಂಡಿರುವುದನ್ನು ನೋಡುವುದೇ ಚೆಂದ.

7,750ಕ್ಕೂ ಹೆಚ್ಚು ಜನರು ಈ ವಿಡಿಯೋ ವೀಕ್ಷಿಸಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಬಹಳ ಅದ್ಭುತವಾದ ದೃಶ್ಯವಿದು ಎಂದಿದ್ದಾರೆ ಕೆಲವರು. ಎಲ್ಲ ಜಂಜಡಗಳ ಮಧ್ಯೆ ಹೀಗೆ ಪಕ್ಷಿಗಳನ್ನು ನೋಡುತ್ತಾ ಕಳೆದುಹೋಗಬೇಕು ಎನ್ನಿಸುತ್ತದೆ ಎಂದಿದ್ದಾರೆ ಹಲವರು. ಈಗಲೇ ಈ ಸರೋವರಕ್ಕೆ ಭೇಟಿ ನೀಡಬೇಕು ಎನ್ನಿಸುತ್ತಿದೆ ಎಂದಿದ್ದಾರೆ ಕೆಲವರು.

ನಿಮಗೂ ಇಲ್ಲಿಗೆ ಬೇಟಿ ಕೊಡಬೇಕು ಎನ್ನಿಸುತ್ತಿದೆಯಾ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:27 pm, Fri, 18 November 22

ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!