Sign In

By signing in or creating an account, you agree with Associated Broadcasting Company's Terms & Conditions and Privacy Policy.

Love Story: ಪ್ರೀತಿಗೆ ಕಣ್ಣಿಲ್ಲ; 70 ವರ್ಷದ ವೃದ್ಧನನ್ನು ಮದುವೆಯಾದ 19ರ ಹರೆಯದ ಪಾಕ್ ಯುವತಿ

Viral News: ತನಗಿಂತಲೂ ಸುಮಾರು 50 ವರ್ಷ ದೊಡ್ಡ ವ್ಯಕ್ತಿಯೊಂದಿಗೆ ಮದುವೆಯಾಗಿರುವ ಶುಮೈಲಾ ಅಲಿ ಇದೀಗ ಬಹಳ ಖುಷಿಯಾಗಿದ್ದಾರೆ. ಇವರಿಬ್ಬರ ಪ್ರೇಮಕತೆ ಶುರುವಾಗಿದ್ದೇ ಒಂದು ರೋಚಕ.

Love Story: ಪ್ರೀತಿಗೆ ಕಣ್ಣಿಲ್ಲ; 70 ವರ್ಷದ ವೃದ್ಧನನ್ನು ಮದುವೆಯಾದ 19ರ ಹರೆಯದ ಪಾಕ್ ಯುವತಿ
ಲಿಯಾಕತ್ ಅಲಿ - ಶುಮೈಲಾ ಅಲಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Nov 17, 2022 | 12:35 PM

ಕೆಲವೊಂದು ಘಟನೆಗಳನ್ನು ನೋಡಿದಾಗ ಪ್ರೀತಿಗೆ ಕಣ್ಣಿಲ್ಲ (Love is Blind) ಎಂಬ ಮಾತು ಖಂಡಿತವಾಗಿಯೂ ಸತ್ಯ ಎನಿಸುತ್ತದೆ. ಧರ್ಮ, ದೇಶ, ಭಾಷೆ, ವಯಸ್ಸಿನ ಮಿತಿಗಳನ್ನು ದಾಟಿ ಕೆಲವೊಂದು ಸಂಬಂಧಗಳು ಹುಟ್ಟಿಕೊಂಡು ಬಿಡುತ್ತವೆ. ಪಾಕಿಸ್ತಾನದ (Pakistan) 70 ವರ್ಷದ ವೃದ್ಧರೊಬ್ಬರು 19 ವರ್ಷದ ಯುವತಿಯನ್ನು ಪ್ರೀತಿಸಿ, ಹಠ ಹಿಡಿದು ಆಕೆಯನ್ನೇ ಮದುವೆಯಾಗಿದ್ದಾರೆ. ವಯಸ್ಸಿನ ಮಿತಿ ದಾಟಿ ಈ ಪ್ರೇಮಿಗಳು ಈಗ ದಂಪತಿಯಾಗಿದ್ದಾರೆ.

ಪಾಕಿಸ್ತಾನದ ಲಿಯಾಕತ್ ಅಲಿ ಎಂಬ 70 ವರ್ಷದ ವ್ಯಕ್ತಿ ಮತ್ತು ಶುಮೈಲಾ ಅಲಿ ಎಂಬ 19 ವರ್ಷದ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಅವರ ಪ್ರೀತಿಗೆ ವಯಸ್ಸು ದೊಡ್ಡ ಅಡ್ಡಿಯಾಗಿತ್ತು. ಪಾಕಿಸ್ತಾನಿ ಯೂಟ್ಯೂಬರ್ ಸೈಯದ್ ಬಸಿತ್ ಅಲಿ ಇವರಿಬ್ಬರ ಪ್ರೇಮಕತೆಯನ್ನು ಯೂಟ್ಯೂಬ್​ನಲ್ಲಿ ಅಪ್​ಲೋಡ್ ಮಾಡಿದ ನಂತರ ಈ ಜೋಡಿ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: Crime News: ಪ್ರೀತಿಯ ನಾಯಿಗೆ ಊಟ ಹಾಕದಿದ್ದಕ್ಕೆ ಕಸಿನ್​ಗೆ ಹೊಡೆದು ಕೊಂದ ಯುವಕ!

ತನಗಿಂತಲೂ ಸುಮಾರು 50 ವರ್ಷ ದೊಡ್ಡ ವ್ಯಕ್ತಿಯೊಂದಿಗೆ ಮದುವೆಯಾಗಿರುವ ಶುಮೈಲಾ ಅಲಿ ಇದೀಗ ಬಹಳ ಖುಷಿಯಾಗಿದ್ದಾರೆ. ಆಕೆಯ ಅಜ್ಜನ ವಯಸ್ಸಿನ ವ್ಯಕ್ತಿಯನ್ನು ಮದುವೆಯಾಗಲು ನಿರ್ಧರಿಸಿದ ಶುಮೈಲಾಳ ಮದುವೆಗೆ ಆಕೆಯ ಮನೆಯವರು ಒಪ್ಪಿರಲಿಲ್ಲ. ಆದರೂ ಹಠ ಬಿಡದ ಆಕೆ ಮದುವೆಯಾಗಿದ್ದಾಳೆ. ಅಂದಹಾಗೆ, ಇವರಿಬ್ಬರ ಪ್ರೇಮಕತೆ ಶುರುವಾಗಿದ್ದೇ ಒಂದು ರೋಚಕ. ಬೆಳಗ್ಗೆ ವಾಕಿಂಗ್ ಹೋಗುವಾಗ ಲಿಯಾಕತ್ ಅಲಿಯನ್ನು ಭೇಟಿಯಾದ ಶುಮೈಲಾ ಬಳಿಕ ಆತನನ್ನು ಭೇಟಿಯಾಗಲೆಂದೇ ವಾಕಿಂಗ್​ಗೆ ಹೋಗುತ್ತಿದ್ದರು. ಆ ವಾಕಿಂಗ್ ಅವರಿಬ್ಬರ ಬದುಕಿಗೆ ಹೊಸ ತಿರುವು ನೀಡಿತು. ಪಾರ್ಕ್​ನಲ್ಲಿ ಒಟ್ಟಿಗೇ ವಾಕಿಂಗ್ ಮಾಡುತ್ತಿದ್ದ ಅವರಿಬ್ಬರೂ ಇದೀಗ ಒಟ್ಟಿಜೇ ಜೀವನದ ಹೆಜ್ಜೆಗಳನ್ನು ಇಡುತ್ತಿದ್ದಾರೆ.

ಲಾಹೋರ್‌ ಮೂಲದ ಈ ದಂಪತಿ ತಮ್ಮ ವಯಸ್ಸಿನ ಮಿತಿಯ ನಡುವೆಯೂ ಸಂತೋಷದಿಂದ ಸಂಸಾರ ನಡೆಸುತ್ತಿದ್ದಾರೆ. ಶುಮೈಲಾಳನ್ನು ಇಷ್ಟಪಟ್ಟ ಲಿಯಾಕತ್ ಅಲಿ ಆಕೆಗೆ ಪ್ರೇಮ ನಿವೇದನೆ ಮಾಡಿದ್ದರು. ಅದಕ್ಕೆ ಆಕೆಯೂ ಒಪ್ಪಿಗೆ ನೀಡಿದ್ದಳು. ಪ್ರೀತಿ ಹೇಗೆ ಹುಟ್ಟುತ್ತದೆ ಎಂಬುದನ್ನು ಯಾರೂ ಹೇಳಲು ಸಾಧ್ಯವಿಲ್ಲ ಎಂಬುದು ಅವರ ಸ್ವಂತ ಅನುಭವದ ಮಾತು.

ಇದನ್ನೂ ಓದಿ: ನಾಗಾಲ್ಯಾಂಡ್ ಸಿಎಂ ಪುತ್ರಿಯ ಮದುವೆಯಲ್ಲಿ ಕುಣಿದ ಸಚಿವ ತೆಮ್ಜೆನ್ ಇಮ್ನಾ ಅಲೋಂಗ್, ವಿಡಿಯೊ ವೈರಲ್

ಮೊದಲು ಅವರಿಬ್ಬರ ಮದುವೆಯನ್ನು ವಿರೋಧಿಸಿದ್ದ ಪೋಷಕರು ಇದೀಗ ಒಪ್ಪಿ, ಹರಸಿದ್ದಾರೆ. ನಾನು ವಯಸ್ಸಿನಲ್ಲಿ ದೊಡ್ಡವನಾದರೂ ಹೃದಯದಲ್ಲಿ ಬಹಳ ಚಿಕ್ಕವನು ಎಂದು ಹೇಳುವ 70 ವರ್ಷದ ಲಿಯಾಕತ್ ತಮ್ಮ ಹೆಂಡತಿಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಮದುವೆಗೆ ವಯಸ್ಸು ಮುಖ್ಯವಲ್ಲ, ಕಾನೂನುಬದ್ಧವಾಗಿ ಮದುವೆಯಾಗಲು ಅವಕಾಶವಿರುವ ಯಾರಾದರೂ ಮದುವೆಯಾಗಬಹುದು ಎಂಬುದು ಅವರ ಮಾತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳಿ ಕತಾರ್ ರಾಜನನ್ನು ಬರಮಾಡಿಕೊಂಡ ಮೋದಿ
ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳಿ ಕತಾರ್ ರಾಜನನ್ನು ಬರಮಾಡಿಕೊಂಡ ಮೋದಿ
ದಿನಕ್ಕೊಂದು ಸಾವಿರ ದುಡಿಯುವವನಿಗೆ ₹12,000 ದಂಡ ಹಾಕಿದರೆ ಹೇಗೆ? ಕುಲಕರ್ಣಿ
ದಿನಕ್ಕೊಂದು ಸಾವಿರ ದುಡಿಯುವವನಿಗೆ ₹12,000 ದಂಡ ಹಾಕಿದರೆ ಹೇಗೆ? ಕುಲಕರ್ಣಿ
ನಾನು ಸುದ್ದಿಯಲ್ಲಿ ಇರೋದ್ರಿಂದ ಟಾರ್ಗೆಟ್ ಮಾಡಲಾಗುತ್ತಿದೆ: ಐಶ್ವರ್ಯ ಗೌಡ
ನಾನು ಸುದ್ದಿಯಲ್ಲಿ ಇರೋದ್ರಿಂದ ಟಾರ್ಗೆಟ್ ಮಾಡಲಾಗುತ್ತಿದೆ: ಐಶ್ವರ್ಯ ಗೌಡ
ಪೊಲೀಸರಿಗೆ ಉದ್ಯೋಗವೇ ಇಲ್ಲ, ಬರೀ ವಸೂಲಿ ಮಾಡೋದು: ಶಾಸಕ ವಿನಯ್​ ಕುಲಕರ್ಣಿ
ಪೊಲೀಸರಿಗೆ ಉದ್ಯೋಗವೇ ಇಲ್ಲ, ಬರೀ ವಸೂಲಿ ಮಾಡೋದು: ಶಾಸಕ ವಿನಯ್​ ಕುಲಕರ್ಣಿ
ಕೇವಲ ಎರಡು ತಿಂಗಳ ಅಕ್ಕಿ ಹಣ ಮಾತ್ರ ಟ್ರಾನ್ಸ್​ಫರ್ ಮಾಡೋದು ಬಾಕಿ: ಸಚಿವ
ಕೇವಲ ಎರಡು ತಿಂಗಳ ಅಕ್ಕಿ ಹಣ ಮಾತ್ರ ಟ್ರಾನ್ಸ್​ಫರ್ ಮಾಡೋದು ಬಾಕಿ: ಸಚಿವ
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯೂ ನಿಷ್ಕ್ರಿಯ, ಮಹಿಳೆಯರು ಅಸಹಾಯಕ
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯೂ ನಿಷ್ಕ್ರಿಯ, ಮಹಿಳೆಯರು ಅಸಹಾಯಕ
ರಾಜಣ್ಣಗೆ ಯಾರ ಮೇಲೂ ಸಿಟ್ಟಿಲ್ಲ, ಅವರು ಮಾತಾಡೋ ಶೈಲಿಯೇ ಹಾಗೆ: ಜಾರಕಿಹೊಳಿ
ರಾಜಣ್ಣಗೆ ಯಾರ ಮೇಲೂ ಸಿಟ್ಟಿಲ್ಲ, ಅವರು ಮಾತಾಡೋ ಶೈಲಿಯೇ ಹಾಗೆ: ಜಾರಕಿಹೊಳಿ
ಚೇತನ್ ದುಡುಕಿನ ನಿರ್ಧಾರ ತೆಗೆದುಕೊಂಡು ಘೋರ ಅಪರಾಧವೆಸಗಿದ್ದಾನೆ: ಸೋಮಶೇಖರ್
ಚೇತನ್ ದುಡುಕಿನ ನಿರ್ಧಾರ ತೆಗೆದುಕೊಂಡು ಘೋರ ಅಪರಾಧವೆಸಗಿದ್ದಾನೆ: ಸೋಮಶೇಖರ್
ಪಿಂಕ್​​ ಲೈನ್​ ಮೆಟ್ರೋ ಟನಲ್​ ಕಾಮಗಾರಿ ಬಗ್ಗೆ ಮಾಹಿತಿ ನೀಡಿದ ಇಂಜಿನಿಯರ್
ಪಿಂಕ್​​ ಲೈನ್​ ಮೆಟ್ರೋ ಟನಲ್​ ಕಾಮಗಾರಿ ಬಗ್ಗೆ ಮಾಹಿತಿ ನೀಡಿದ ಇಂಜಿನಿಯರ್
ಸಿಎಂ ಮತ್ತು ಕೆಪಿಸಿಸಿ ಬದಲಾವಣೆ ಬಿಟ್ಟು ಕೆಲ ಸಚಿವರು ಬೇರೇನೂ ಮಾತಾಡಲಾರರು!
ಸಿಎಂ ಮತ್ತು ಕೆಪಿಸಿಸಿ ಬದಲಾವಣೆ ಬಿಟ್ಟು ಕೆಲ ಸಚಿವರು ಬೇರೇನೂ ಮಾತಾಡಲಾರರು!