Russia Ukraine War: ಪೊಲೆಂಡ್​ ಮೇಲೆ ಕ್ಷಿಪಣಿ ದಾಳಿ; ಆಕಸ್ಮಿಕ ಎಂದ ನ್ಯಾಟೊ, ರಷ್ಯಾ ಕಾರಣ ಎಂದ ಉಕ್ರೇನ್, ನಿಟ್ಟುಸಿರು ಬಿಟ್ಟ ಜಗತ್ತು

ಈ ಮೂಲಕ ಈಗಾಗಲೇ 200 ದಿನ ದಾಟಿರುವ ರಷ್ಯಾ-ಉಕ್ರೇನ್ ಯುದ್ಧವು ಇನ್ನಷ್ಟು ದಿನಗಳ ಕಾಲ ಮುಂದುವರಿಯಬಹುದು ಎಂಬ ಸೂಚನೆಯನ್ನು ಅಮೆರಿಕ ನೀಡಿದೆ.

Russia Ukraine War: ಪೊಲೆಂಡ್​ ಮೇಲೆ ಕ್ಷಿಪಣಿ ದಾಳಿ; ಆಕಸ್ಮಿಕ ಎಂದ ನ್ಯಾಟೊ, ರಷ್ಯಾ ಕಾರಣ ಎಂದ ಉಕ್ರೇನ್, ನಿಟ್ಟುಸಿರು ಬಿಟ್ಟ ಜಗತ್ತು
ರಷ್ಯಾ ಉಕ್ರೇನ್ ಸಂಘರ್ಷದಲ್ಲಿ ಹಲವು ಮಹತ್ವದ ಬೆಳವಣಿಗೆಗಳು ನಡೆದಿವೆ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Nov 17, 2022 | 9:12 AM

ನ್ಯಾಟೊ ಸದಸ್ಯ ರಾಷ್ಟ್ರ ಪೊಲೆಂಡ್ ಗಡಿಯಲ್ಲಿ ಕ್ಷಿಪಣಿಗಳು ಸ್ಫೋಟಿಸಿರುವುದು 3ನೇ ಮಹಾಯುದ್ಧಕ್ಕೆ ಕಾರಣವಾಗಬಹುದು ಎಂಬ ಆತಂಕಕ್ಕೆ ಇದೀಗ ತೆರೆಬಿದ್ದಿದೆ. ‘ಇದೊಂದು ಆಕಸ್ಮಿಕ ಘಟನೆ, ಉದ್ದೇಶಪೂರ್ವಕವಾಗಿ ನಡೆದ ದಾಳಿಯಲ್ಲ’ ಎಂದು ನ್ಯಾಟೊ ಸದಸ್ಯ ದೇಶಗಳು ಘಟನೆಯ ನಂತರ ನೆಲೆಗೊಂಡಿದ್ದ ಉದ್ವಿಗ್ನತೆ ಕಡಿಮೆ ಮಾಡಲು ಯತ್ನಿಸಿವೆ. ಆದರೆ ಉಕ್ರೇನ್ ಮಾತ್ರ ಈ ಹೇಳಿಕೆಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿದೆ. ‘ಉಕ್ರೇನ್ ಹಾರಿಬಿಟ್ಟ ವಿಮಾನ ನಿರೋಧಕ ರಾಕೆಟ್​ಗಳಿಂದ ಪೊಲೆಂಡ್ ಗಡಿಯೊಳಗೆ ಸ್ಫೋಟ ಸಂಭವಿಸಿತು ಎಂಬ ಮಾತು ಒಪ್ಪಲು ಸಾಧ್ಯವಿಲ್ಲ’ ಎಂದು ತನ್ನ ನಿಲುವು ಸ್ಪಷ್ಟಪಡಿಸಿದೆ.

ಪೊಲೆಂಡ್​ನಲ್ಲಿ ಸ್ಫೋಟ ಸಂಭವಿಸಿದೆ ಎಂಬ ಮಾಹಿತಿ ಬಹಿರಂಗಗೊಂಡ ಕ್ಷಣದಿಂದಲೂ ನ್ಯಾಟೊ ಒಕ್ಕೂಟವನ್ನು ರಷ್ಯಾ ವಿರುದ್ಧ ಎತ್ತಿಕಟ್ಟಲು ಉಕ್ರೇನ್ ಯತ್ನಿಸುತ್ತಿತ್ತು. ಆದರೆ ಇದೀಗ ಅಮೆರಿಕ ಕೂಡ ಇತರ ನ್ಯಾಟೊ ಸದಸ್ಯ ದೇಶಗಳಂತೆ ಇದು ಉಕ್ರೇನ್​ ಹಾರಿಬಿಟ್ಟ ರಾಕೆಟ್​ನಿಂದ ಸಂಭವಿಸಿದ ಸ್ಫೋಟ ಎಂದು ಒಪ್ಪಿಕೊಂಡಿದೆ. ಪ್ರಾಥಮಿಕ ತನಿಖೆಗಳ ನಂತರ ಈ ಮಾಹಿತಿಯನ್ನು ಮೊದಲು ಪೊಲೆಂಡ್ ಬಹಿರಂಗಪಡಿಸಿತ್ತು. ಉಕ್ರೇನ್ ಗಡಿಯ ಪೊಲೆಂಡ್​ನ ಹಳ್ಳಿಯಲ್ಲಿ ಕ್ಷಿಪಣಿ ದಾಳಿಯಿಂದಾಗಿ ಮಂಗಳವಾರ (ನ 15) ಇಬ್ಬರು ಮೃತಪಟ್ಟಿದ್ದರು. ಈ ವೇಳೆ ರಷ್ಯಾ ಉಕ್ರೇನ್​ನಲ್ಲಿರುವ ಮೂಲಸೌಕರ್ಯ ವ್ಯವಸ್ಥೆಯ ಮೇಲೆ ವ್ಯಾಪಕ ದಾಳಿ ನಡೆಸಿತ್ತು.

ಉಕ್ರೇನ್ ಗಡಿಯಾಚೆ ಸಂಭವಿಸಿದ ಸ್ಫೋಟವು ಜಾಗತಿಕ ಮಟ್ಟದಲ್ಲಿ ಆತಂಕ ಹುಟ್ಟುಹಾಕಿತ್ತು. ಆದರೆ ಕೆಲ ಹೊತ್ತಿನ ನಂತರ ಈ ಸ್ಫೋಟಕ್ಕೆ ರಷ್ಯಾದಿಂದ ಹಾರಿಬಂದ ಕ್ಷಿಪಣಿ ಕಾರಣವಲ್ಲ ಎಂಬುದು ದೃಢಪಟ್ಟ ನಂತರ ಹಲವು ದೇಶಗಳು ನಿಟ್ಟುಸಿರು ಬಿಟ್ಟಿದ್ದವು. ರಷ್ಯಾದಿಂದ ಬರುತ್ತಿದ್ದ ಕ್ಷಿಪಣಿಯನ್ನು ತಡೆಗಟ್ಟಲು ಉಕ್ರೇನ್ ಹಾರಿಬಿಟ್ಟ ಬರಾಜ್ (ಕ್ಷಿಪಣಿಗಳನ್ನು ಆಗಸದಲ್ಲಿಯೇ ತಡೆಯುವ ಯುದ್ಧೋಪಕರಣ) ಪೊಲೆಂಡ್ ಗಡಿಯೊಳಗೆ ಬಂದಿರಬಹುದು. ಅಂತಿಮವಾಗಿ ಇದಕ್ಕೆ ರಷ್ಯಾವೇ ಮುಖ್ಯ ಕಾರಣ ಎಂದು ನ್ಯಾಟೊ ಒಕ್ಕೂಟ ಹೇಳಿತ್ತು. ‘ಪೊಲೆಂಡ್​ನಲ್ಲಿ ಆದ ಜೀವಹಾನಿಗೆ ರಷ್ಯಾ ಮುಖ್ಯ ಕಾರಣ ಎಂಬ ಮಾತಿನಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ಅಮೆರಿಕ ಸಹ ತನ್ನ ನಿಲುವು ಸ್ಪಷ್ಟಪಡಿಸಿತ್ತು.

ಆರಂಭದಿಂದಲೂ ಪೊಲೆಂಡ್ ದಾಳಿಯ ಆರೋಪವನ್ನು ನಿರಾಕರಿಸುತ್ತಿದ್ದ ರಷ್ಯಾದ ರಕ್ಷಣಾ ಸಚಿವಾಲಯವು, ‘ಸ್ಫೋಟಿಸಿದ ಕ್ಷಿಪಣಿಯ ಅವಶೇಷಗಳ ಚಿತ್ರಗಳನ್ನು ಪರಿಶೀಲಿಸಿರುವ ತಜ್ಞರು ಇದು ಉಕ್ರೇನ್​ನ ಎಸ್-300 ವಾಯುರಕ್ಷಣಾ ವ್ಯವಸ್ಥೆಯ ಕ್ಷಿಪಣಿ ಎಂಬುದನ್ನು ದೃಢಪಡಿಸಿದ್ದಾರೆ. ಪೊಲೆಂಡ್ ಗಡಿಯಿಂದ ಕನಿಷ್ಠ 35 ಕಿಮೀ ಅಂತರವಿರುವಂತೆ ರಷ್ಯಾ ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದೆ’ ಎಂದು ಹೇಳಿದೆ. ‘ರಷ್ಯಾ ಸೇನೆ ಸಂಪೂರ್ಣವಾಗಿ ಕುಸಿಯದೇ ಈ ಯುದ್ಧ ಕೊನೆಗೊಳ್ಳುವುದಿಲ್ಲ. ಆದರೆ ಎಂದಿಗೂ ರಷ್ಯಾ ಸೇನೆಯು ಈ ಸ್ಥಿತಿಗೆ ತಲುಪುವುದಿಲ್ಲ’ ಎಂದು ಅಮೆರಿಕದ ಉನ್ನತ ಸೇನಾಧಿಕಾರಿ ಹೇಳಿದ್ದಾರೆ. ಈ ಮೂಲಕ ಈಗಾಗಲೇ 200 ದಿನ ದಾಟಿರುವ ರಷ್ಯಾ-ಉಕ್ರೇನ್ ಯುದ್ಧವು ಇನ್ನಷ್ಟು ದಿನಗಳ ಕಾಲ ಮುಂದುವರಿಯಬಹುದು ಎಂಬ ಸೂಚನೆಯನ್ನು ಅಮೆರಿಕ ನೀಡಿದೆ.

Published On - 9:12 am, Thu, 17 November 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್