ಫೇಸ್ಬುಕ್ ಇನ್ಸ್ಟಾಗ್ರಾಮ್, ವಾಟ್ಸಾಪ್ ಓಪನ್ ಮಾಡಿದರೆ ಸಾಕು ಅಲ್ಲಿ ನಾನಾ ರೀತಿಯ ಇಮೋಜಿಗಳಿರುತ್ತವೆ. ಹತ್ತಾರು ಪದಗಳಲ್ಲಿ ಹೇಳುವುದನ್ನು ಒಂದು ಇಮೋಜಿಯಲ್ಲಿ ಸುಲಭವಾಗಿ ವಿವರಿಸಿಬಿಡಬಹುದು. ಅದೇ ಕಾರಣಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಇಮೋಜಿಗಳು ಟ್ರೆಂಡಿಂಗ್ನಲ್ಲಿದೆ. ಇದೀಗ ಅಂತದ್ದೇ ಇಮೋಜಿ ಒಂದರ ಫೋಟೋ ವೈರಲ್ ಆಗಿದೆ. ಆದರೆ ಈ ಫೋಟೋದಲ್ಲಿ ಒಂದು ಇಮೋಜಿ ಮಾತ್ರ ಬೇರೆ ರೀತಿಯಲ್ಲಿದೆ. ಅದನ್ನು ಪತ್ತೆ ಹಚ್ಚಲು ನಿಮ್ಮಿಂದ ಸಾಧ್ಯವೇ?
ಚಿತ್ರವನ್ನು ನೋಡಿದಾಕ್ಷಣ ಬೇಸರದ ಮುಖ ಮಾಡಿರುವ ಸಾಕಷ್ಟು ಇಮೋಜಿಗಳನ್ನು ಕಾಣಬಹುದು. ಆದರೆ ಅದರ ಮಧ್ಯೆ ಒಂದೇ ಒಂದು ಭಿನ್ನವಾದ ಇಮೋಜಿ ಅಡಗಿದೆ. ಚಿತ್ರವನ್ನು ಕೆಲವು ಸೆಕೆಂಡುಗಳ ವರೆಗೆ ಸರಿಯಾಗಿ ದಿಟ್ಟಿಸಿ ನೋಡಿದರೆ ಮಾತ್ರ ನಿಮಗೆ ಉತ್ತರ ಕಂಡು ಹುಡುಕಲು ಸಾಧ್ಯ. ಆದರೆ ನಿಮಗೆ ಸಾಕಷ್ಟು ಕಾಲಾವಕಾಶಗಳಿಲ್ಲ, ಹದ್ದಿನ ಕಣ್ಣು ನಿಮ್ಮದ್ದಾಗಿದ್ದರೆ ಕೇವಲ 10 ಸೆಕೆಂಡುಗಳಲ್ಲಿ ಉತ್ತರವನ್ನು ಕಂಡು ಹುಡುಕಿ.
ಆಪ್ಟಿಕಲ್ ಇಲ್ಯೂಷನ್ ಸವಾಲಿನ ಆಟ ನಿಮ್ಮ ಮೆದುಳಿಗೆ ವ್ಯಾಯಾಮವನ್ನು ನೀಡುವುದಲ್ಲದೆ ನಿಮ್ಮ ಅರಿವಿನ ಸಾಮರ್ಥ್ಯವನ್ನೂ ಹೆಚ್ಚಿಸಲು ಉತ್ತಮ ಆಯ್ಕೆಯಾಗಿದೆ. ಈ ಆಟ ನಿಮ್ಮ ದೃಷ್ಟಿ ಸಾಮರ್ಥ್ಯಕ್ಕೆ ದೊಡ್ಡ ಸವಾಲು. ಎಷ್ಟೇ ಹುಡುಕಿದರೂ ಉತ್ತರ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲವೇ? ಹುಡುಕಿ ಹುಡುಕಿ ಸುಸ್ತಾಗಿದ್ದೀರಾ? ಹಾಗಿದ್ರೆ ಚಿಂತಿಸಬೇಕಿಲ್ಲ. ಕೆಳಗಿನ ಚಿತ್ರದಲ್ಲಿ ಗುರುತಿಸಲಾಗಿದೆ.
ಉತ್ತರ ಇಲ್ಲಿದೆ ನೋಡಿ:
ಇದನ್ನೂ ಓದಿ: 966 ಎಲ್ಲಿದೆ ಎಂದು ಕಂಡುಹಿಡಿಯಲು ಸಾಧ್ಯವೇ?
ಅಂದಹಾಗೆ, ನಿಮ್ಮ ಕಣ್ಣುಗಳಿಗೆ ಸವಾಲೆಸೆಯುವ ಈ ಮೋಜಿನ ಆಟ ನಿಮಗೆ ಹೇಗಾನಿಸಿತು, ಇಷ್ಟವಾಯಿತೆ? ಕಾಮೆಂಟ್ ಮೂಲಕ ತಿಳಿಸಿ. ಈ ಆಪ್ಟಿಕಲ್ ಇಲ್ಯೂಷನ್ ಫೋಟೋವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:19 pm, Tue, 11 February 25