ಅಳಿಲು ಎಂದರೆ ಪಾಪದ ಜೀವಿ ಎಂದುಕೊಳ್ಳುತ್ತೇವೆ. ಆದರೆ ಅವುಗಳಲ್ಲೂ ದ್ವೇಷ ಸಾಧಿಸುವ ಗುಣವಿರುತ್ತದೆ. ಹೌದು ಉತ್ತರ ವೇಲ್ಸ್ನಲ್ಲಿ ಅಳಿಲೊಂದು 2 ದಿನಗಳ ಅವಧಿಯಲ್ಲಿ 18 ಜನರಿಗೆ ಕಚ್ಚಿ ಗಾಯಗೊಳಿಸಿದ ಘಟನೆ ವರದಿಯಾಗಿದೆ. ಅಳಿಲನ್ನು ಕೊರಿನ್ನೆ ರೆನಾಲ್ಡ್ ಎನ್ನುವವರು ತನ್ನ ತೋಟದಲ್ಲಿ ಸಾಕಿದ್ದರು. ಕೆಲವು ದಿನಗಳ ಹಿಂದೆ ರೆನಾಲ್ಡ್ಗೆ ಕೂಡ ಕೈಯಲ್ಲಿ ಆಹಾರ ನೀಡಿದ ವೇಳೆ ಕಚ್ಚಿದ್ದು, ನಂತರ ಕೆಳೆದ 2 ದಿನಗಳಿಂದ ಸ್ಥಳೀಯರ ಮೇಲೂ ದಾಳಿ ನಡೆಸುತ್ತಿದೆ. ಇದರಿಂದ ಜನ ಆತಂಕಗೊಂಡಿದ್ದಾರೆ. ಈ ಅಳಿಲಿಗೆ ಸ್ಟ್ರೈಪ್ ಎಂದು ನಾಮಕಾರಣ ಮಾಡಲಾಗಿದೆ.
ಸ್ಟ್ರೈಪ್ ನಡುವಳಿಕೆಯಿಂದ ರೆನಾಲ್ಡ್ ಕೂಡ ಗಾಬರಿಗೊಂಡಿದ್ದಾರೆ. ಇದ್ದಕ್ಕಿದ್ದ ಹಾಗೆ ಅಳಿಲು ಕಚ್ಚಲು ಆರಂಭಿಸದ ಬಗ್ಗೆ ತನಗೂ ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ. ಸ್ಥಳೀಯರು ಅಳಿಲಿನಿಂದ ಕಚ್ಚಿಸಿಕೊಂಡ, ಮೂಗೇಟಿನಂತಹ ಗಾಯಗಳ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸ್ಥಳೀಯರು ಹಂಚಿಕೊಂಡ ಫೋಟೋಗಳನ್ನು ನೋಡಿ ರೆನಾಲ್ಡ್ ಕೂಡ ಚಿಂತಿತರಾಗಿದ್ದಾರೆ.
ಅಳಿಲು ಯಾವ ದ್ವೇಷದಿಂದ ಎಲ್ಲರಿಗೂ ಕಚ್ಚುತ್ತಿದೆ ಎನ್ನುವುದನ್ನು ತಿಳಿಯಲಾಗದೆ ಜನ ಸಾಕಿದ ಅಳಿಲಿನ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ. ಮನುಷ್ಯರಿಗೆ ಮಾತ್ರವಲ್ಲದೆ ಬೆಕ್ಕು ಮತ್ತು ನಾಯಿಗಳ ಮೇಲೂ ಸ್ಟ್ರೈಪ್ ಹೆಸರಿನ ಅಳಿಲು ದಾಳಿ ನಡೆಸಿದೆ. ಇದರಿಂದ ಗಾಬರಿಗೊಂಡಿರುವ ಜನ ಅಳಿಲನ್ನು ಸೆರೆ ಹಿಡಿದು ಕಾಡಿಗೆ ಬಿಡಬೇಕು ಎಂದುಕೊಂಡಿದ್ದರು. ಆದರೆ ಅಳಿಲನ್ನು ಸೆರೆ ಹಿಡಿದು ಕಾಡಿಗೆ ಬಿಡುವುದು ಕಾನೂನು ಬಾಹಿರವಾಗಿದೆ. ಹೀಗಾಗಿ ಅಲ್ಲಿನ ಅರಣ್ಯ ಅಧಿಕಾರಿಗೆ ಮಾಹಿತಿ ನೀಡಿದ್ದಾರೆ.
ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ ಬಳಿ ಕೋತಿಗಳ ಹಿಂಡು ಅವುಗಳ ಮರಿಯನ್ನು ನಾಯಿ ಕೊಲೆ ಮಾಡಿದ ಹಿನ್ನೆಲೆಯಲ್ಲಿ ದ್ವೇಷ ಸಾಧಿಸಿ ಒಂದೇ ತಿಂಗಳಿನಲ್ಲಿ ಒಂದೇ ಗ್ರಾಮದ 250 ನಾಯಿಗಳ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿತ್ತು. ಇದೀಗ ಉತ್ತರ ವೇಲ್ಸ್ನಲ್ಲಿ ಅಳಿಲು ಮನುಷ್ಯರ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ.
ಇದನ್ನೂ ಓದಿ:
New Year’s Eve: ವಿಶೇಷ ಆನಿಮೇಟೆಡ್ ಡೂಡಲ್ ಮೂಲಕ ಇಯರ್ ಎಂಡ್ ಆಚರಿಸಿದ ಗೂಗಲ್
Published On - 11:18 am, Fri, 31 December 21