ಸ್ಟ್ಯಾಗ್ ಬೀಟಲ್ ಎಂಬ ಕೀಟವು ವಿಶ್ವದ ಅತ್ಯಂತ ದುಬಾರಿ ಕೀಟ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ. ಈ ಒಂದು ಕೀಟದ ಬೆಲೆ ಕೇಳಿದರೆ ನೀವು ಶಾಕ್ ಆಗುವುದಂತೂ ಖಂಡಿತಾ. ಈ ಕೀಟವನ್ನು ಖರೀದಿಸುವ ಹಣದಲ್ಲಿ ನೀವು BMW ಮತ್ತು Audiಗಳಂತಹ ದುಬಾರಿ ಕಾರುಗಳನ್ನು ಖರೀದಿಸಬಹುದಾಗಿದೆ. ಆದರೆ ಈ ಕೀಟ ಯಾಕಿಷ್ಟು ದುಬಾರಿ ಎಂಬ ಪ್ರಶ್ನೆ ನಿಮ್ಮಲ್ಲಿ ಕಾಡಬಹುದು. ಅದಕ್ಕೆ ಉತ್ತರ ಇಲ್ಲಿದೆ ನೋಡಿ.
ಮಾಧ್ಯಮ ವರದಿಗಳ ಪ್ರಕಾರ, ಸ್ಟ್ಯಾಗ್ ಬೀಟಲ್ ವಿಶ್ವದ ಅತ್ಯಂತ ದುಬಾರಿ ಕೀಟಗಳಲ್ಲಿ ಒಂದಾಗಿದೆ. ಒಬ್ಬ ವ್ಯಕ್ತಿಯು ಒಂದು ಕೀಟವನ್ನು ಖರೀದಿಸಲು 75 ಲಕ್ಷದಷ್ಟು ಹಣ ಖರ್ಚು ಮಾಡಬೇಕು. ಈ ಕೀಟವನ್ನು ಅಪರೂಪವೆಂದು ಪರಿಗಣಿಸಲಾಗುತ್ತದೆ ಮತ್ತು ಅದೃಷ್ಟದ ಸಂಕೇತ ಎಂದು ನಂಬಲಾಗಿದೆ. ಈ ಕೀಟವನ್ನು ಮನೆಯಲ್ಲಿ ಇರಿಸುವುದರಿಂದ ಹಠಾತ್ ಸಂಪತ್ತನ್ನು ತರುತ್ತದೆ ನೀವು ಆರ್ಥಿಕವಾಗಿ ಲಾಭವನ್ನು ಪಡೆಯುತ್ತೀರಿ ಎಂದು ಅನೇಕ ಜನರು ನಂಬುತ್ತಾರೆ.
ಈ ಕೀಟ ದುಬಾರಿಯಾಗಲು ಮತ್ತೊಂದು ಕಾರಣವೆಂದರೆ ಔಷಧಿ ತಯಾರಿಕೆಯಲ್ಲಿ ಬಳಕೆ. ಸ್ಟ್ಯಾಗ್ ಬೀಟಲ್ಗಳನ್ನು ಔಷಧೀಯ ತಯಾರಿಕೆಯಲ್ಲಿ ಬಳಸಿಕೊಳ್ಳಲಾಗುತ್ತದೆ. ಅವುಗಳ ಔಷಧೀಯ ಬಳಕೆ ಹೊರತುಪಡಿಸಿ, ಈ ಕೀಟಗಳು ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ.
ಈ ಕೀಟದ ವಿಶಿಷ್ಟ ಲಕ್ಷಣವೆಂದರೆ ಅವುಗಳ ವಿಶಿಷ್ಟ ನೋಟ. ಕೀಟವು ದೊಡ್ಡ ದವಡೆಗಳನ್ನು ಹೊಂದಿದೆ. ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಗಂಡು ಕೀಟದ ದವಡೆಗಳು ಕೊಂಬುಗಳನ್ನು ಹೋಲುತ್ತವೆ. ತಮ್ಮ ಸಂತಾನವೃದ್ಧಿ ಕಾಲದಲ್ಲಿ ಸಂಯೋಗದ ಅವಕಾಶಗಳಿಗಾಗಿ ಹೋರಾಡಿದಾಗ ಈ ದವಡೆಗಳು ಸಹಾಯಕವಾಗಿವೆ.
ಇದನ್ನೂ ಓದಿ: 20 ಪ್ರಿಯಕರರಿಂದ 20 ಐಫೋನ್ ಗಿಫ್ಟ್, ಕೊನೆಗೆ ಎಲ್ಲ ಫೋನ್ ಮಾರಿ ಹೊಸ ಮನೆ ಖರೀದಿಸಿದ ಯುವತಿ
ಯುರೋಪಿಯನ್ ಸ್ಟಾಗ್ ಬೀಟಲ್ ಮಾನಿಟರಿಂಗ್ ನೆಟ್‌ವರ್ಕ್ ಪ್ರಕಾರ, ಗಂಡು ಕೀಟದ ಉದ್ದವು 4 ಸೆಂ.ಮೀ ನಿಂದ 9 ಸೆಂ.ಮೀ ವರೆಗೆ ಇರುತ್ತದೆ. ಆದರೆ ಹೆಣ್ಣು ಕೀಟದ ಉದ್ದವು 3 cm ನಿಂದ 4 cm ವರೆಗೆ ಇರುತ್ತದೆ. ಈ ಕೀಟಗಳ ಜೀವಿತಾವಧಿ ಮೂರರಿಂದ ಏಳು ವರ್ಷಗಳವರೆಗೆ ಇರುತ್ತದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ