AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ಮಹಿಳೆಯ ಮೂಗಿನ ಆಕಾರವೇ ಆಕೆಯ ಸ್ವಭಾವ ಏನೆಂಬುದನ್ನು ಹೇಳುತ್ತೆ

ನಮ್ಮ ನಡವಳಿಕೆಯಿಂದ ನಮ್ಮ ವ್ಯಕ್ತಿತ್ವ ಎಂತಹದ್ದು ಎಂಬುದನ್ನು ಜನರು ಅಳೆಯುತ್ತಾರೆ. ಜೊತೆ ಜೊತೆಗೆ ನಮ್ಮ ದೇಹದ ಅಂಗಗಳಾದ ಕಣ್ಣು, ಕಿವಿ, ಮೂಗು, ಕೈಬೆರಳುಗಳ ಆಕಾರದಿಂದಲೂ ನಮ್ಮ ವ್ಯಕ್ತಿತ್ವ ಎಂತಹದ್ದು ಎಂಬುದನ್ನು ತಿಳಿಯಬಹುದಂತೆ. ಹಾಗದ್ರೆ ಮೂಗಿನ ಆಕಾರದ ಆಧಾರದ ಮೇಲೆ ಮಹಿಳೆಯರ ಸ್ವಭಾವ ಹೇಗಿರುತ್ತದೆ ಎಂಬುದನ್ನು ತಿಳಿಯಿರಿ.

Personality Test: ಮಹಿಳೆಯ ಮೂಗಿನ ಆಕಾರವೇ ಆಕೆಯ ಸ್ವಭಾವ ಏನೆಂಬುದನ್ನು ಹೇಳುತ್ತೆ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on:Jul 10, 2024 | 1:47 PM

Share

ವ್ಯಕ್ತಿಯ ನಡವಳಿಕೆಯಿಂದ ಅವನ ವ್ಯಕ್ತಿತ್ವವನ್ನು ಅಳೆಯುವ ಹಾಗೆ ನಮ್ಮ ದೇಹದ ಭಾಗಗಳಾದ ಕಣ್ಣು, ಕಿವಿ, ಮೂಗು, ಕೈ ಬೆರಳು, ತುಟಿಗಳ ಆಕಾರದಿಂದಲೂ ನಮ್ಮ ಸ್ವಭಾವ ಎಂತಹದ್ದು ಎಂಬುದನ್ನು ತಿಳಿಯಬಹುದಾಗಿದೆ. ಅಲ್ಲದೆ ಸಾಮುದ್ರಿಕ ಶಾಸ್ತ್ರದಲ್ಲೂ ಮನುಷ್ಯನ ದೇಹದ ವಿವಿಧ ಭಾಗಗಳ ರಚನೆಯ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಲಾಗಿದ್ದು, ವ್ಯಕ್ತಿಯ ದೇಹದ ಅಂಗಗಳ ಆಕಾರ, ಮಚ್ಚೆಯ ಮೂಲಕ ಆ ವ್ಯಕ್ತಿಯ ಸ್ವಭಾವ ಮತ್ತು ಅವನ ಭವಿಷ್ಯದ ಬಗ್ಗೆ ಅನೇಕ ಮಾಹಿತಿಯನ್ನು ತಿಳಿಯಬಹುದಾಗಿದೆ. ಅದೇ ರೀತಿ ಮಹಿಳೆಯು ಆಕೆಯ ಮೂಗಿನ ಆಕಾರದ ಆಧಾರದ ಮೇಲೆ ಆಕೆಯ ಸ್ವಭಾವ ಎಂಥದ್ದು ಎಂಬುದನ್ನು ತಿಳಿಯಬಹುದು. ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.

ಮೂಗಿನ ಆಕಾರದಿಂದ ನಿಮ್ಮ ಸ್ವಭಾವ ಎಂಥದ್ದು ತಿಳಿಯಿರಿ:

ಗುಂಡು ಮೂಗು:

ಆಕಾರದಲ್ಲಿ ಗುಂಡು ಮೂಗನ್ನು ಹೊಂದಿರುವ ಮಹಿಳೆಯರು ಎಲ್ಲರನ್ನೂ ಸಮಾನವಾಗಿ ಕಾಣುತ್ತಾರೆ. ಇವರಿಗೆ ಯಾವುದೇ ರೀತಿಯ ಬೇಧಭಾವ ಇಲ್ಲ. ಜೊತೆಗೆ ಇವರು ಯಾವಾಗಲೂ ಖುಷಿಯಾಗಿರುವುದರ ಜೊತೆಗೆ ಬೇರೆಯವರನ್ನು ಖುಷಿಯಾಗಿ ಇಟ್ಟುಕೊಳ್ಳುತ್ತಾರೆ.

ಚಪ್ಪಟೆ ಮೂಗು:

ಚಪ್ಪಟೆ ಮೂಗು ಹೊಂದಿರುವ ಮಹಿಳೆಯರಿಗೆ ಸಂದೇಹ ಸ್ವಲ್ಪ ಜಾಸ್ತಿ. ಭಾವನಾತ್ಮಕ ಜೀವಿಗಳಾದ ಇವರು ಇತರರ ನೋವಿಗೆ ಬೇಗ ಸ್ಪಂದಿಸುತ್ತಾರೆ. ಜೊತೆಗೆ ಇವರುಗಳು ಪೂಜೆ, ಪುನಸ್ಕಾರ ದೇವರಲ್ಲಿ ಬಹಳ ನಂಬಿಕೆ ಇಟ್ಟುಕೊಂಡಿರುತ್ತಾರೆ.

ಕಿರಿದಾದ ಮೂಗು:

ಕಿರಿದಾದ ಮೂಗನ್ನು ಹೊಂದಿರುವವರ ಮಹಿಳೆಯರಿಗೆ ಮೂಗಿನ ತುದಿಯಲ್ಲಿಯೇ ಕೋಪ ಇರುತ್ತೆ. ಹೌದು ಇವರುಗಳು ಬಹಳ ಬೇಗ ಕೋಪಗೊಳ್ಳುತ್ತಾರೆ. ಜೊತೆಗೆ ಕಿರಿದಾದ ಮೂಗನ್ನು ಹೊಂದಿರುವ ಮಹಿಳೆಯರು ಫ್ಯಾಷನ್‌ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಕೂಡಾ ಹೊಂದಿರುತ್ತಾರೆ.

ಇದನ್ನೂ ಓದಿ: ವಿಶ್ವದ ಅತ್ಯಂತ ದುಬಾರಿ ಕೀಟ; ಇದರ ಬೆಲೆ Audi carಗಿಂತಲೂ ಹೆಚ್ಚು

ಉದ್ದನೆಯ ಮೂಗು:

ಉದ್ದನೆಯ ಮೂಗು ಹೊಂದಿರುವ ಮಹಿಳೆಯರು ಪ್ರತಿಯೊಂದು ವಿಷಯದಲ್ಲಿಯೂ ದೃಢ ನಿರ್ಧಾರವನ್ನು ಹೊಂದಿರುತ್ತಾರೆ. ಜೊತೆಗೆ ಇವರು ನೇರ ಮಾತುಗಳನ್ನು ಆಡುವವರಾಗಿರುತ್ತಾರೆ. ಸಂಬಂಧಗಳನ್ನು ಕಾಪಾಡಿಕೊಳ್ಳುವಲ್ಲಿ ಹೆಚ್ಚು ಆಸಕ್ತಿಯನ್ನು ವಹಿಸದ ಇವರು ಧಾರ್ಮಿಕ ವಿಷಯಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:27 pm, Wed, 10 July 24