Stag Beetle: ವಿಶ್ವದ ಅತ್ಯಂತ ದುಬಾರಿ ಕೀಟ; ಇದರ ಬೆಲೆ Audi carಗಿಂತಲೂ ಹೆಚ್ಚು
ನೀವು ಈ ಕೀಟವನ್ನು ಖರೀದಿಸುವ ಹಣದಲ್ಲಿ BMW ಅಥವಾ Audiಗಳಂತಹ ದುಬಾರಿ ಕಾರುಗಳನ್ನು ಖರೀದಿಸಬಹುದು. ಆದರೆ ಈ ಕೀಟ ಯಾಕಿಷ್ಟು ದುಬಾರಿ? ಏನಿದರ ವಿಶೇಷತೆ ಎಂಬ ಪ್ರಶ್ನೆ ನಿಮ್ಮಲ್ಲಿ ಕಾಡಬಹುದು. ಅದಕ್ಕೆ ಉತ್ತರ ಇಲ್ಲಿದೆ ನೋಡಿ.
ಸ್ಟ್ಯಾಗ್ ಬೀಟಲ್ ಎಂಬ ಕೀಟವು ವಿಶ್ವದ ಅತ್ಯಂತ ದುಬಾರಿ ಕೀಟ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ. ಈ ಒಂದು ಕೀಟದ ಬೆಲೆ ಕೇಳಿದರೆ ನೀವು ಶಾಕ್ ಆಗುವುದಂತೂ ಖಂಡಿತಾ. ಈ ಕೀಟವನ್ನು ಖರೀದಿಸುವ ಹಣದಲ್ಲಿ ನೀವು BMW ಮತ್ತು Audiಗಳಂತಹ ದುಬಾರಿ ಕಾರುಗಳನ್ನು ಖರೀದಿಸಬಹುದಾಗಿದೆ. ಆದರೆ ಈ ಕೀಟ ಯಾಕಿಷ್ಟು ದುಬಾರಿ ಎಂಬ ಪ್ರಶ್ನೆ ನಿಮ್ಮಲ್ಲಿ ಕಾಡಬಹುದು. ಅದಕ್ಕೆ ಉತ್ತರ ಇಲ್ಲಿದೆ ನೋಡಿ.
ಅದೃಷ್ಟದ ಸಂಕೇತ:
ಮಾಧ್ಯಮ ವರದಿಗಳ ಪ್ರಕಾರ, ಸ್ಟ್ಯಾಗ್ ಬೀಟಲ್ ವಿಶ್ವದ ಅತ್ಯಂತ ದುಬಾರಿ ಕೀಟಗಳಲ್ಲಿ ಒಂದಾಗಿದೆ. ಒಬ್ಬ ವ್ಯಕ್ತಿಯು ಒಂದು ಕೀಟವನ್ನು ಖರೀದಿಸಲು 75 ಲಕ್ಷದಷ್ಟು ಹಣ ಖರ್ಚು ಮಾಡಬೇಕು. ಈ ಕೀಟವನ್ನು ಅಪರೂಪವೆಂದು ಪರಿಗಣಿಸಲಾಗುತ್ತದೆ ಮತ್ತು ಅದೃಷ್ಟದ ಸಂಕೇತ ಎಂದು ನಂಬಲಾಗಿದೆ. ಈ ಕೀಟವನ್ನು ಮನೆಯಲ್ಲಿ ಇರಿಸುವುದರಿಂದ ಹಠಾತ್ ಸಂಪತ್ತನ್ನು ತರುತ್ತದೆ ನೀವು ಆರ್ಥಿಕವಾಗಿ ಲಾಭವನ್ನು ಪಡೆಯುತ್ತೀರಿ ಎಂದು ಅನೇಕ ಜನರು ನಂಬುತ್ತಾರೆ.
ಔಷಧೀಯ ಬಳಕೆ:
ಈ ಕೀಟ ದುಬಾರಿಯಾಗಲು ಮತ್ತೊಂದು ಕಾರಣವೆಂದರೆ ಔಷಧಿ ತಯಾರಿಕೆಯಲ್ಲಿ ಬಳಕೆ. ಸ್ಟ್ಯಾಗ್ ಬೀಟಲ್ಗಳನ್ನು ಔಷಧೀಯ ತಯಾರಿಕೆಯಲ್ಲಿ ಬಳಸಿಕೊಳ್ಳಲಾಗುತ್ತದೆ. ಅವುಗಳ ಔಷಧೀಯ ಬಳಕೆ ಹೊರತುಪಡಿಸಿ, ಈ ಕೀಟಗಳು ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ.
ಸ್ಟ್ಯಾಗ್ ಬೀಟಲ್ನ ವಿಶಿಷ್ಟ ಗುಣಲಕ್ಷಣಗಳು:
ಈ ಕೀಟದ ವಿಶಿಷ್ಟ ಲಕ್ಷಣವೆಂದರೆ ಅವುಗಳ ವಿಶಿಷ್ಟ ನೋಟ. ಕೀಟವು ದೊಡ್ಡ ದವಡೆಗಳನ್ನು ಹೊಂದಿದೆ. ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಗಂಡು ಕೀಟದ ದವಡೆಗಳು ಕೊಂಬುಗಳನ್ನು ಹೋಲುತ್ತವೆ. ತಮ್ಮ ಸಂತಾನವೃದ್ಧಿ ಕಾಲದಲ್ಲಿ ಸಂಯೋಗದ ಅವಕಾಶಗಳಿಗಾಗಿ ಹೋರಾಡಿದಾಗ ಈ ದವಡೆಗಳು ಸಹಾಯಕವಾಗಿವೆ.
ಇದನ್ನೂ ಓದಿ: 20 ಪ್ರಿಯಕರರಿಂದ 20 ಐಫೋನ್ ಗಿಫ್ಟ್, ಕೊನೆಗೆ ಎಲ್ಲ ಫೋನ್ ಮಾರಿ ಹೊಸ ಮನೆ ಖರೀದಿಸಿದ ಯುವತಿ
ಸ್ಟ್ಯಾಗ್ ಬೀಟಲ್ನ ಜೀವಿತಾವಧಿ:
ಯುರೋಪಿಯನ್ ಸ್ಟಾಗ್ ಬೀಟಲ್ ಮಾನಿಟರಿಂಗ್ ನೆಟ್‌ವರ್ಕ್ ಪ್ರಕಾರ, ಗಂಡು ಕೀಟದ ಉದ್ದವು 4 ಸೆಂ.ಮೀ ನಿಂದ 9 ಸೆಂ.ಮೀ ವರೆಗೆ ಇರುತ್ತದೆ. ಆದರೆ ಹೆಣ್ಣು ಕೀಟದ ಉದ್ದವು 3 cm ನಿಂದ 4 cm ವರೆಗೆ ಇರುತ್ತದೆ. ಈ ಕೀಟಗಳ ಜೀವಿತಾವಧಿ ಮೂರರಿಂದ ಏಳು ವರ್ಷಗಳವರೆಗೆ ಇರುತ್ತದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ