AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ರೈಲ್ವೆ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ತಂದೆ-ಮಗ; ಭೀಕರ ದೃಶ್ಯ ವೈರಲ್

ಎಲ್ಲಾ ಸಮಸ್ಯೆಗಳಿಗೂ ಆತ್ಮಹತ್ಯೆ ಒಂದೇ ಪರಿಹಾರವೆಂದು ಆತ್ಮಹತ್ಯೆ ಮಾಡಿಕೊಂಡು ಅದೆಷ್ಟೋ ಜನರು ತಮ್ಮ ಅಮೂಲ್ಯ ಜೀವವನ್ನೇ ಕಳೆದುಕೊಂಡಿದ್ದಾರೆ. ಅಂತಹದೇ ಆಘಾತಕಾರಿ ಘಟನೆಯೊಂದು ಇದೀಗ ನಡೆದಿದ್ದು, ನಮ್ಮ ಈ ಸಮಸ್ಯೆಗೆ ಸಾವು ಒಂದೇ ಪರಿಹಾರವೆಂದು ರೈಲು ಬರುತ್ತಿದ್ದಂತೆ ರೈಲ್ವೆ ಹಳಿಗೆ ತಲೆಕೊಟ್ಟು ತಂದೆ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಭೀಕರ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Viral Video: ರೈಲ್ವೆ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ತಂದೆ-ಮಗ; ಭೀಕರ ದೃಶ್ಯ ವೈರಲ್
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Jul 10, 2024 | 2:06 PM

Share

ಮನುಷ್ಯನಿಗೆ ಎದುರಾಗುವ ಎಲ್ಲಾ ಸಮಸ್ಯೆಗಳಿಗೆ ಆತ್ಮಹತ್ಯೆ ಒಂದೇ ಪರಿಹಾರ ಅಲ್ಲ. ಜೀವನದಲ್ಲಿ ಬರುವ ಪ್ರತಿಯೊಂದು ಕಷ್ಟವನ್ನು ದೃಢವಾಗಿ ಎದುರಿಸಿ ನಿಂತರೆ ಎಂತಹ ಕಠಿಣ ಸಮಸ್ಯೆಗಳಿಂದಲೂ ಹೊರಬರಬಹುದು. ಹೀಗಿದ್ದರೂ ಕೂಡಾ ಮಾನಸಿಕ ಹಿಂಸೆಯಿಂದಲೋ, ಇನ್ಯಾವುದೋ ಕಾರಣದಿಂದಲೋ ಅದೆಷ್ಟೋ ಜನರು ಆತ್ಮಹತ್ಯೆ ಮಾಡಿಕೊಂಡು ತಮ್ಮ ಅಮೂಲ್ಯ ಜೀವವನ್ನೇ ಕಳೆದುಕೊಂಡಿದ್ದಾರೆ. ಇದೀಗ ಅಂತಹದೇ ಘಟನೆಯೊಂದು ನಡೆದಿದ್ದು, ನಮ್ಮ ಈ ಸಮಸ್ಯೆಗೆ ಸಾವು ಒಂದೇ ಪರಿಹಾರವೆಂದು ರೈಲು ಬರುತ್ತಿದ್ದಂತೆ ರೈಲ್ವೆ ಹಳಿಗೆ ತಲೆಕೊಟ್ಟು ತಂದೆ-ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಭೀಕರ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮುಂಬೈನ ಪಾಲ್ಘರ್‌ ಜಿಲ್ಲೆಯ ಭಾಯಂದರ್‌ ರೈಲ್ವೆ ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ರೈಲು ಬರುತ್ತಿದ್ದಂತೆ ತಂದೆ ಮಗ ಇಬ್ಬರು ರೈಲ್ವೆ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜುಲೈ 09 ರಂದು ಈ ಹೃದಯವಿದ್ರಾವಕ ಘಟನೆ ನಡೆದಿದ್ದು, ಭಾಯಂದರ್‌ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ ನಂ.6 ರ ಮುಂಭಾಗದಲ್ಲಿ ಇರುವಂತಹ ಹಳಿಗೆ ತಲೆಕೊಟ್ಟು ತಂದೆ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ದೃಶ್ಯ ಅಲ್ಲೇ ರೈಲ್ವೆ ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ ( ಎಕ್ಸ್​​ ಖಾತೆ )

ವರದಿಗಳ ಪ್ರಕಾರ ವಸಾಯಿಯ ನಿವಾಸಿಗಳಾದ ತಂದೆ ಹರೀಶ್‌ ಮೆಹ್ತಾ (60) ಮತ್ತು ಮಗ ಜೈ ಮೆಹ್ತಾ (30) ವಿರಾರ್‌ನಿಂದ ಚರ್ಚ್‌ಗೇಟ್‌ಗೆ ಹೋಗುತ್ತಿದ್ದ ಲೋಕಲ್‌ ಟ್ರೈನ್‌ಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡವರು. ಈ ಇಬ್ಬರ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ತಂದೆ ಮಗನ ಆತ್ಮಹತ್ಯೆಯ ನಿಖರವಾದ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ.

ಇದನ್ನೂ ಓದಿ: ಶಾಲಾ ಕೊಠಡಿಯಲ್ಲಿ ಹೆಡ್‌ ಮಾಸ್ಟರ್‌- ಲೇಡಿ ಟೀಚರ್‌ ರೊಮ್ಯಾನ್ಸ್‌, ವೈರಲ್‌ ಆಯ್ತು ಸರಸ ಸಲ್ಲಾಪದ ದೃಶ್ಯ

ಈ ಕುರಿತ ಪೋಸ್ಟ್‌ ಒಂದನ್ನು LoksattaLive ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ವೈರಲ್‌ ವಿಡಿಯೋದಲ್ಲಿ ರೈಲ್ವೆ ಫ್ಲಾಟ್‌ಫಾರ್ಮ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ತಂದೆ ಮಗ ಸೀದಾ ರೈಲ್ವೆ ಹಳಿಗೆ ಜಿಗಿದು, ಅತ್ತ ಕಡೆಯಿಂದ ರೈಲು ಬರುತ್ತಿರುವುದನ್ನು ಕಂಡು ಇಬ್ಬರೂ ಕೈ ಕೈ ಹಿಡಿದುಕೊಂಡು ಹೋಗಿ ರೈಲ್ವೆ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಭೀಕರ ದೃಶ್ಯವನ್ನು ಕಾಣಬಹುದು.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ