ಟಾಯ್ಲೆಟ್​ನಿಂದ ಬರುತ್ತಿತ್ತು ಒಂದು ರೀತಿಯ ವಿಚಿತ್ರ ಶಬ್ದ, ಕಮೋಡ್​ ಮುಚ್ಚುಳವನ್ನು ತೆಗೆದಾಗ ಕಾಣಿಸಿದ್ದೇನು?

ನಾವು ಕಲ್ಪನೆಯನ್ನೇ ಮಾಡಿರದ ವಿಚಾರಗಳು ಕೆಲವೊಮ್ಮೆ ನಮ್ಮ ಮನೆಯಲ್ಲೇ ಸಂಭವಿಸುತ್ತವೆ. ಆಸ್ಟ್ರೇಲಿಯಾದಲ್ಲಿ ವಾಸಿಸುವ ವ್ಯಕ್ತಿಯೊಬ್ಬನಿಗೆ ತಮ್ಮ ಮನೆಯ ಶೌಚಾಲಯದಿಂದ ವಿಚಿತ್ರವಾದ ಶಬ್ದ ಕೇಳಿಸುತ್ತಿತ್ತು. ಈ ಧ್ವನಿಯ ಹಿಂದಿನ ಸತ್ಯವನ್ನು ಅವನು ತಿಳಿದುಕೊಳ್ಳಲು ಬಯಸಿದಾಗ, ಅವರು ಊಹಿಸದ ಏನೋ ಹೊರಬಂದಿತ್ತು.

ಟಾಯ್ಲೆಟ್​ನಿಂದ ಬರುತ್ತಿತ್ತು ಒಂದು ರೀತಿಯ ವಿಚಿತ್ರ ಶಬ್ದ, ಕಮೋಡ್​ ಮುಚ್ಚುಳವನ್ನು ತೆಗೆದಾಗ ಕಾಣಿಸಿದ್ದೇನು?
ಕಮೋಡ್

Updated on: Aug 27, 2023 | 12:39 PM

ನಾವು ಕಲ್ಪನೆಯನ್ನೇ ಮಾಡಿರದ ವಿಚಾರಗಳು ಕೆಲವೊಮ್ಮೆ ನಮ್ಮ ಮನೆಯಲ್ಲೇ ಸಂಭವಿಸುತ್ತವೆ. ಆಸ್ಟ್ರೇಲಿಯಾದಲ್ಲಿ ವಾಸಿಸುವ ವ್ಯಕ್ತಿಯೊಬ್ಬನಿಗೆ ತಮ್ಮ ಮನೆಯ ಶೌಚಾಲಯದಿಂದ ವಿಚಿತ್ರವಾದ ಶಬ್ದ ಕೇಳಿಸುತ್ತಿತ್ತು. ಈ ಧ್ವನಿಯ ಹಿಂದಿನ ಸತ್ಯವನ್ನು ಅವನು ತಿಳಿದುಕೊಳ್ಳಲು ಬಯಸಿದಾಗ, ಅವರು ಊಹಿಸದ ಏನೋ ಹೊರಬಂದಿತ್ತು.

ಸಸ್ಯ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಅದರಲ್ಲಿ ವ್ಯಕ್ತಿಯೊಬ್ಬರಿಗೆ ತನ್ನ ಮನೆಯ ಶೌಚಾಲಯದಲ್ಲಿರುವ ಕಮೋಡ್​ನಿಂದ ವಿಚಿತ್ರ ಶಬ್ದ ಕೇಳಿಸುತ್ತದೆ, ಕಮೋಡ್​ ಮುಚ್ಚುಳವನ್ನು ತೆಗೆದು ನೋಡಿದಾಗ ಹತ್ತಾರು ಹಸಿರು ಬಣ್ಣದ ಕಪ್ಪೆಗಳು ಕಾಣುತ್ತವೆ.

ವ್ಯಕ್ತಿ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಮೊದಲು ಶೌಚಾಲಯದಿಂದ ಕರ್ಕಶವಾದ ಶಬ್ದವು ಕೇಳಿಬರುತ್ತಿತ್ತು, ಅದಾದ ಬಳಿಕ ತಲೆ ಕೆಡಿಸಿಕೊಂಡು ಹಾವು ಅಥವಾ ವಿಷಪೂರಿತವಾದ್ದೇನಾದರ ಇರಬಹುದು ಎಂದು ಭಯ ಪಡುತ್ತಲ್ಲೇ ಕಮೋಡ್​ನ ಸೀಟಿನ ಕವರ್ ತೆಗೆದಾಗ ಹತ್ತಾರು ಕಪ್ಪೆಗಳು ಹೊರ ಬಂದಿದ್ದು, ಒಮ್ಮೆಲೇ ಮೈಝುಂ ಎಂದಿತ್ತು.

ಕೆಲವೊಮ್ಮೆ ಇಂಡಿಯನ್ ಟಾಯ್ಲೆಟ್​ಗಳಲ್ಲಿ ಇಲಿ ಕಾಣಿಸಿಕೊಂಡಿದ್ದಿದೆ, ಕಮೋಡ್​ನ ಸುತ್ತ ಹಾವು ಸುತ್ತಿಕೊಂಡಿದ್ದ ಉದಾಹರಣೆಗಳು ಕೂಡ ಇವೆ, ಟಾಯ್ಲೆಟ್​ ಸೀಟು ತೆರೆದಾಗ ಕಪ್ಪೆಗಳನ್ನು ನೋಡಿದಾಗ ಭಯವಾಗುವುದಂತೂ ಸತ್ಯ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us