ಕೇರಳದ ಮಾಲ್ನ ಮಹಿಳೆಯರ ಶೌಚಾಲಯದಲ್ಲಿ ವಿಡಿಯೋ ರೆಕಾರ್ಡ್, ಬುರ್ಖಾ ಧರಿಸಿ ಪ್ರವೇಶಿಸಿದ್ದ ಟೆಕ್ಕಿ
ಕೇರಳದಲ್ಲಿ ಮಹಿಳೆಯರ ಶೌಚಾಲಯದಲ್ಲಿ ವಿಡಿಯೋ ರೆಕಾರ್ಡ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಟೆಕ್ಕಿಯೊಬ್ಬ ಬುರ್ಖಾ ಧರಿಸಿ ಶೌಚಾಲಯಕ್ಕೆ ಪ್ರವೇಸಿ ಕೃತ್ಯ ಎಸಗಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕೇರಳದ ಕೊಚ್ಚಿಯಲ್ಲಿರುವ ಲುಲುಮಾಲ್ನಲ್ಲಿ ಈ ಘಟನೆ ನಡೆದಿದೆ
ಕೇರಳದಲ್ಲಿ ಮಹಿಳೆಯರ ಶೌಚಾಲಯದಲ್ಲಿ ವಿಡಿಯೋ ರೆಕಾರ್ಡ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಟೆಕ್ಕಿಯೊಬ್ಬ ಬುರ್ಖಾ ಧರಿಸಿ ಶೌಚಾಲಯಕ್ಕೆ ಪ್ರವೇಸಿ ಕೃತ್ಯ ಎಸಗಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕೇರಳದ ಕೊಚ್ಚಿಯಲ್ಲಿರುವ ಲುಲುಮಾಲ್ನಲ್ಲಿ ಈ ಘಟನೆ ನಡೆದಿದೆ, ಐಟಿ ಉದ್ಯೋಗಿ ಅಭಿಮನ್ಯು(23) ಈ ಕೃತ್ಯ ಎಸಗಿದ್ದಾನೆ. ಆತ ಬಿಟೆಕ್ ಪದವೀಧರನಾಗಿರುವ ಆರೋಪಿ ಐಟಿ ಕಂಪನಿಯ ಉದ್ಯೋಗಿಯಾಗಿದ್ದಾನೆ. ಮಹಿಳೆಯ ಸೋಗಿನಲ್ಲಿ ಬುರ್ಖಾ ಧರಿಸಿ ಲುಲುಮಾಲ್ಗೆ ಬಂದಿದ್ದ, ಈ ವೇಳೆ ಮಹಿಳೆಯರ ಶೌಚಾಯಲಕ್ಕೆ ತೆರಳಿ ವಿಡಿಯೋ ಚಿತ್ರೀಕರಣ ಮಾಡಿದ್ದಾನೆ.
ಆತ ಶೌಚಾಲಯದಲ್ಲಿ ಮೊಬೈಲ್ ಇಟ್ಟು ಹೊರಬಂದು ನಿಂತಿದ್ದ, ಸಿಬ್ಬಂದಿಗೆ ಅನುಮಾನ ಬಂದು ಮಾಲ್ನ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೊಚ್ಚಿ ಪೊಲೀಸರು ಅಭಿಮನ್ಯುವನ್ನು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಕೊಚ್ಚಿಯ ಪ್ರಸಿದ್ಧ ಮಾಲ್‌ನಲ್ಲಿ ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ಕೊಚ್ಚಿಯಲ್ಲಿ ಕೆಲಸ ಮಾಡುವ ರೊಬೊಟಿಕ್ಸ್ ಎಂಜಿನಿಯರಿಂಗ್ ಪದವೀಧರ ಅಭಿಮನ್ಯು ಮಹಿಳೆಯಂತೆ ಪೋಸ್ ನೀಡಲು ಬುರ್ಖಾ (ಮುಸುಕು) ಧರಿಸಿ ಮಹಿಳೆಯರ ವಾಶ್‌ರೂಮ್‌ನಲ್ಲಿ ವೀಡಿಯೊಗಳನ್ನು ಚಿತ್ರೀಕರಿಸುವಾಗ ಸಿಕ್ಕಿಬಿದ್ದಿದ್ದಾನೆ. ಸ್ಥಳೀಯ ನ್ಯಾಯಾಲಯದಿಂದ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬುರ್ಖಾ ಧರಿಸಿರುವ ಅಭಿಮನ್ಯು ವಿಡಿಯೋ
Kerala techie arrested for planting camera in Kochi mall’s women’s bathroom
Police arrested Abhimanyu (23) for trying to place a camera in the washroom of Lulu Mall, Kochi, Kerala
The mobile camera was placed inside the washroom after wearing a Burqa. pic.twitter.com/oJ39qEGfzC
— زماں (@Delhiite_) August 17, 2023
ಪೊಲೀಸರು ಅಭಿಮನ್ಯು ಅವರ ಫೋನ್ ಮತ್ತು ಅಪರಾಧ ಮಾಡಲು ಬಳಸಿದ ಬುರ್ಖಾವನ್ನು ವಶಪಡಿಸಿಕೊಂಡಿದ್ದಾರೆ, ಈ ವ್ಯಕ್ತಿ ಈ ಹಿಂದೆಯೂ ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರೆ ಅದನ್ನು ತನಿಖೆ ಮಾಡಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮತ್ತಷ್ಟು ಓದಿ: ಉಡುಪಿ ಕಾಲೇಜಿನ ವಿಡಿಯೋ ಪ್ರಕರಣ, ಉಡುಪಿ ತಲುಪುವ ಮುನ್ನ ಮೌನ ಮುರಿದ ಸಿದ್ದರಾಮಯ್ಯ
ಕರ್ನಾಟಕದಲ್ಲೂ ನಡೆದಿತ್ತು ಇಂಥಹದ್ದೇ ಘಟನೆ
ಉಡುಪಿಯ ನೇತ್ರ ಜ್ಯೋತಿ ಕಾಲೇಜಿನ ಶೌಚಾಲಯದಲ್ಲಿ ಮೊಬೈಲ್ ಇಟ್ಟು ವಿದ್ಯಾರ್ಥಿಯೋರ್ವಳ ಖಾಸಗಿ ದೃಶ್ಯ ಚಿತ್ರೀಕರಣ ಮಾಡಿರುವ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿತ್ತು.
ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿನ ಶೌಚಾಲಯದಲ್ಲಿ ಹಿಂದೂ ಹುಡುಗಿಯರ ವಿಡಿಯೋ ರೆಕಾರ್ಡ್ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ವಿದ್ಯಾರ್ಥಿನಿಯರು ತಮಾಷೆಗೆಂದು ವಿಡಿಯೋ ಮಾಡಿ ನಂತರ ಡಿಲೀಟ್ ಮಾಡಿದ್ದಾರೆ ಎಂದು ಹೇಳಲಾಗಿತ್ತು.
ಅಷ್ಟೇ ಅಲ್ಲ ಕರ್ನಾಟಕದಲ್ಲಿ ಶಕ್ತಿ ಯೋಜನೆ ಜಾರಿಯಾದ ಬಳಿಕ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಎಂದು ಘೋಷಿಸಿದ ಬಳಿಕ ವ್ಯಕ್ತಿಯೊಬ್ಬರು ಬುರ್ಖಾ ಧರಿಸಿ ಬಸ್ನಲ್ಲಿ ಪ್ರಯಾಣಿಸಿ ಸಿಕ್ಕಿಬಿದ್ದಿದ್ದರು.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:19 am, Fri, 18 August 23