ಖಾಸಗಿ ಕಂಪನಿ ಕೆಲಸ ಬಿಟ್ಟು ಹಂದಿ ಸಾಕಾಣಿಕೆಯಿಂದ ಯಶಸ್ಸು ಕಂಡ 26ರ ಯುವತಿ

|

Updated on: Apr 18, 2024 | 4:43 PM

ಖಾಸಗಿ ಕಂಪನಿ ಕೆಲಸ ಬಿಟ್ಟು ಮನೆಯಲ್ಲಿ ಇರಲು ಪ್ರಾರಂಭಿಸಿದ ವೇಳೆ ಗೆಳೆಯರೊಬ್ಬರು ಹಂದಿ ಸಾಕಾಣಿಕೆ ಆರಂಭಿಸುವಂತೆ ಸಲಹೆ ನೀಡಿದ್ದರು. ಪ್ರಾರಂಭದಲ್ಲಿ ಈ ಕೆಲಸದಿಂದ ಹಿಂಜರಿದ್ದಿದ್ದರೂ ಸಹ ನಂತರ ಛಲ ಬಿಡದೇ ಮುಂದುವರಿಸಿಕೊಂಡು ಹೋಗಿದ್ದಾಳೆ.

ಖಾಸಗಿ ಕಂಪನಿ ಕೆಲಸ ಬಿಟ್ಟು ಹಂದಿ ಸಾಕಾಣಿಕೆಯಿಂದ ಯಶಸ್ಸು ಕಂಡ 26ರ ಯುವತಿ
ಹಂದಿ ಸಾಕಾಣಿಕೆಯಿಂದ ಯಶಸ್ಸು ಕಂಡ 26ರ ಯುವತಿ
Follow us on

ಅನೇಕ ಜನರು ಕಾರ್ಪೊರೇಟ್ ವಲಯದಲ್ಲಿ ತಮ್ಮ ಉದ್ಯೋಗಗಳನ್ನು ತೊರೆದು ತಮ್ಮದೇ ಆದ ಹೊಸ ಉದ್ಯಮವನ್ನು ಪ್ರಾರಂಭಿಸುತ್ತಿದ್ದಾರೆ. ಅದರಂತೆ ಚೀನಾದ 26 ವರ್ಷದ ಯುವತಿಯೊಬ್ಬಳು ಶಿಕ್ಷಣಕ್ಕೆ ತಕ್ಕಂತೆ ಒಳ್ಳೆ ಕಂಪನಿಯಲ್ಲಿ ಉದ್ಯೋಗ ಪಡೆದಿದ್ದರೂ ಸಹ ಆ ಕೆಲಸವನ್ನು ತೊರೆದು ಹಂದಿ ಸಾಕಲು ಪ್ರಾರಂಭಿಸಿದ್ದಾಳೆ. ಪ್ರಾರಂಭದಲ್ಲಿ ಈ ಯುವತಿಯನ್ನು ಕಂಡು ಸಾಕಷ್ಟು ಜನರು ಗೇಲಿ ಮಾಡಿದ್ದರೂ ಕೂಡ ಛಲ ಬಿಡದೇ ಇದೀಗಾ ಹಂದಿ ಸಾಕಾಣಿಕೆಯಿಂದ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾಳೆ.

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, ನೈಋತ್ಯ ಚೀನಾದ ಯುನ್ನಾನ್ ಪ್ರಾಂತ್ಯದ ನಿವಾಸಿ ಝೌ ಉತ್ತಮ ಪ್ಯಾಕೇಜ್‌ನಲ್ಲಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಆಕೆಯ ಕೆಲಸ ಸಂತೋಷ ನೀಡುತ್ತಿರಲ್ಲಿಲ್ಲ. ಇದರಿಂದ ಪ್ರತೀ ವರ್ಷ ಒಂದು ಕಂಪೆನಿಯಿಂದ ಇನ್ನೊಂದು ಕಂಪೆನಿ ಬದಲಾವಣೆ ಮಾಡುತ್ತಿದ್ದಳು. ಕಡೆಗೆ ಕೆಲಸ ಬಿಟ್ಟು ಮನೆಯಲ್ಲಿ ಇರಲು ಪ್ರಾರಂಭಿಸಿದ ವೇಳೆ ಗೆಳೆಯರೊಬ್ಬರು ಹಂದಿ ಸಾಕಾಣಿಕೆ ಆರಂಭಿಸುವಂತೆ ಸಲಹೆ ನೀಡಿದ್ದರು.ಪ್ರಾರಂಭದಲ್ಲಿ ಈ ಕೆಲಸದಿಂದ ಹಿಂಜರಿದ್ದಿದ್ದರೂ ಸಹ ನಂತರ ಛಲ ಬಿಡದೇ ಮುಂದುವರಿಸಿಕೊಂಡು ಹೋಗಿದ್ದಾಳೆ.

ಇದನ್ನೂ ಓದಿ: Miss AI Beauty Contest:ವಿಶ್ವದಲ್ಲೇ ಪ್ರಥಮ ಬಾರಿಗೆ ಮಿಸ್ AI ಸ್ಪರ್ಧೆ; ಇಲ್ಲಿ ಎಲ್ಲವೂ ಕೃತಕ!

ಇತ್ತೀಚಿಗಷ್ಟೆ ಸಾಮಾಜಿಕ ಜಾಲತಾಣದಲ್ಲಿ ಝೌ ತನ್ನ ಹಂದಿ ಸಾಕಾಣಿಕೆಯ ಕಥೆಯನ್ನು ಹಂಚಿಕೊಂಡಿದ್ದು, ಆಕೆಯ ಛಲ ಹಾಗೂ ಧೈರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗ ಎಲ್ಲೆಡೆ ಆಕೆಗೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ