Viral Video: ಕರೆಂಟ್ ಇಲ್ಲದೆ ಚಲಿಸುವ ಈ ಮರದ ಟ್ರೆಡ್​ಮಿಲ್​ ವಿಡಿಯೋ ನೋಡಿ ಫಿಟ್​ನೆಸ್​ ಉತ್ಸಾಹಿಗಳು ಫಿದಾ

| Updated By: ಸುಷ್ಮಾ ಚಕ್ರೆ

Updated on: Mar 23, 2022 | 6:11 PM

ತೆಲಂಗಾಣದ ಐಟಿ ಸಚಿವ ಕೆ.ಟಿ. ರಾಮರಾವ್ ಈ ವ್ಯಕ್ತಿಯ ವಿನೂತನ ಪ್ರಯತ್ನದ ವೀಡಿಯೊವನ್ನು ರೀ-ಟ್ವೀಟ್ ಮಾಡಿದ್ದಾರೆ. 45 ಸೆಕೆಂಡುಗಳ ವಿಡಿಯೋದಲ್ಲಿ ಟ್ರೆಡ್ ಮಿಲ್ ಜೋಡಿಸಲು ಆ ವ್ಯಕ್ತಿ ತನ್ನ ಮರಗೆಲಸದ ಕೌಶಲ್ಯವನ್ನು ಬಳಸುವುದನ್ನು ನೋಡಬಹುದು.

Viral Video: ಕರೆಂಟ್ ಇಲ್ಲದೆ ಚಲಿಸುವ ಈ ಮರದ ಟ್ರೆಡ್​ಮಿಲ್​ ವಿಡಿಯೋ ನೋಡಿ ಫಿಟ್​ನೆಸ್​ ಉತ್ಸಾಹಿಗಳು ಫಿದಾ
ಮರದ ಟ್ರೆಡ್​ಮಿಲ್ ತಯಾರಿಸಿದ ತೆಲಂಗಾಣದ ವ್ಯಕ್ತಿ
Follow us on

ನೀವು ಜಿಮ್​ನಲ್ಲಿ (Gym) ವರ್ಕ್​ಔಟ್ ಮಾಡುತ್ತೀರಾ? ದಿನಾ ಬೆಳಗ್ಗೆ ಅಥವಾ ಸಂಜೆ ಜಿಮ್​ಗೆ ಹೋಗಿ ವರ್ಕ್​ಔಟ್ ಮಾಡಲು ಸೋಮಾರಿತನವೇ? ಮನೆಯಲ್ಲೇ ಜಿಮ್ ಉಪಕರಣಗಳು ಇದ್ದಿದ್ದರೆ ಬಹಳ ಸಹಾಯವಾಗುತ್ತಿತ್ತು ಎಂದು ಆಗಾಗ ಅಂದುಕೊಳ್ಳುತ್ತಾ ಇರುತ್ತೀರಾ? ಮನೆಯಲ್ಲಿ ಟ್ರೆಡ್‌ಮಿಲ್ (Treadmill) ಇಟ್ಟುಕೊಳ್ಳಲು ಬಯಸುವ ಫಿಟ್‌ನೆಸ್ ಉತ್ಸಾಹಿಗಳಿಗೆ ಒಳ್ಳೆಯ ಸುದ್ದಿ ಇದೆ. ತೆಲಂಗಾಣದಲ್ಲಿ ವ್ಯಕ್ತಿಯೊಬ್ಬರು ಮರದ ಟ್ರೆಡ್‌ಮಿಲ್ ನಿರ್ಮಿಸಿದ್ದು, ಇದು ಇಂಟರ್ನೆಟ್​​ನಲ್ಲಿ ಮೆಚ್ಚುಗೆ ಗಳಿಸುತ್ತಿದೆ.

ತೆಲಂಗಾಣ ಐಟಿ ಸಚಿವ ಕೆ.ಟಿ. ರಾಮರಾವ್ ಈ ವ್ಯಕ್ತಿಯ ವಿನೂತನ ಪ್ರಯತ್ನದ ವೀಡಿಯೊವನ್ನು ರೀ-ಟ್ವೀಟ್ ಮಾಡಿದ್ದಾರೆ. “ಅದ್ಭುತ! ಈ ರೀತಿಯ ಪರಿಸರಸ್ನೇಹಿ ಟ್ರೆಡ್​ಮಿಲ್ ಮತ್ತು ಮರದ ಜಿಮ್ ಉಪಕರಣದ ಅಗತ್ಯವಿದ್ದರೆ ದಯವಿಟ್ಟು ಸಂಪರ್ಕಿಸಿ. ಅವರಿಗೆ ಈ ವಿಚಾರದಲ್ಲಿ ಇನ್ನಷ್ಟು ಸಾಧನೆ ಮಾಡಲು ಸಹಾಯ ಮಾಡಿ ಎಂದು ಸಚಿವ ಕೆಟಿಆರ್ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

45 ಸೆಕೆಂಡುಗಳ ವಿಡಿಯೋದಲ್ಲಿ ಟ್ರೆಡ್ ಮಿಲ್ ಜೋಡಿಸಲು ಆ ವ್ಯಕ್ತಿ ತನ್ನ ಮರಗೆಲಸದ ಕೌಶಲ್ಯವನ್ನು ಬಳಸುವುದನ್ನು ನೋಡಬಹುದು. ಕತ್ತರಿಸಿದ ಮರದ ಭಾಗಗಳನ್ನು ಜೋಡಿಸುವುದು ಮತ್ತು ಅವುಗಳನ್ನು ಬಿಗಿಯಾಗಿ ಸರಿಪಡಿಸುವುದನ್ನು ವಿಡಿಯೋದಲ್ಲಿ ನೋಡಬಹುದು. ವಿಡಿಯೋದ ಕೊನೆಯಲ್ಲಿ ಆ ವ್ಯಕ್ತಿಯು ಯಾವುದೇ ವಿದ್ಯುತ್ ಬಳಸದೆ ಟ್ರೆಡ್‌ಮಿಲ್‌ ಯಾವ ರೀತಿಯ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ತೋರಿಸುತ್ತದೆ.

ಟ್ರೆಡ್​ಮಿಲ್​ನ ಮರದ ಹಿಡಿಕೆಯನ್ನು ಹಿಡಿದುಕೊಂಡು, ಅವನು ತನ್ನ ಕಾಲುಗಳನ್ನು ಕನ್ವೇಯರ್ ಬೆಲ್ಟ್‌ನಂತೆ ಜೋಡಿಸಲಾದ ಮರದ ಭಾಗಗಳ ಮೇಲೆ ಇಟ್ಟುಕೊಳ್ಳುತ್ತಾನೆ. ಅದು ವೇಗವಾಗಿ ಚಲಿಸಲು ಪ್ರಾರಂಭಿಸುತ್ತದೆ. ಈ ವಿಡಿಯೋವನ್ನು ಮಾರ್ಚ್ 17ರಂದು ಪೋಸ್ಟ್ ಮಾಡಲಾಗಿತ್ತು. ಆದರೆ ಈಗ ಅದು ಹೆಚ್ಚು ವೈರಲ್ ಆಗುತ್ತಿದೆ. ಅನೇಕ ಟ್ವಿಟ್ಟರ್ ಬಳಕೆದಾರರು ಈ ವ್ಯಕ್ತಿಯ ಕೌಶಲ್ಯದಿಂದ ಪ್ರಭಾವಿತರಾಗಿದ್ದಾರೆ.

ಆದರೆ, ಕೆಲವು ಇಂಟರ್ನೆಟ್​ ಬಳಕೆದಾರರು ಇದು ಸೇಮ್ ಜಿಮ್​ನ ಟ್ರೆಡ್​ಮಿಲ್​ನಂತೆ ಕಾಣಿಸುತ್ತಿದೆ. ಈ ಟ್ರೆಡ್​ಮಿಲ್​ನ ಬಗ್ಗೆ ಅನೇಕರು ಪರ-ವಿರೋಧದ ಕಮೆಂಟ್ ಮಾಡಿದ್ದಾರೆ. ಹೈದರಾಬಾದ್‌ನ ಕೆಲವು ಜಿಮ್‌ಗಳಲ್ಲಿ ವಿದ್ಯುತ್ ಇಲ್ಲದೆ ಕೆಲಸ ಮಾಡುವ ಟ್ರೆಡ್‌ಮಿಲ್‌ಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ ಎಂದು ಕೆಲವು ಬಳಕೆದಾರರು ಹೇಳಿದ್ದಾರೆ. ಈ ವಿಡಿಯೋವನ್ನು ಪೋಸ್ಟ್ ಮಾಡಿದ ನಂತರ ವಿಡಿಯೋವನ್ನು 1,38,000ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಈ ಟ್ರೆಡ್​ಮಿಲ್ ತಯಾರಿಸಿರುವುದು ಯಾರು ಎಂಬುದು ಇನ್ನೂ ಪತ್ತೆಯಾಗಿಲ್ಲ.

ಇದನ್ನೂ ಓದಿ: Viral Video: ಮೊಟ್ಟ ಮೊದಲ ಬಾರಿಗೆ ಚಾಕೋಲೇಟ್ ರುಚಿ ನೋಡಿದ ಮಗುವಿನ ರಿಯಾಕ್ಷನ್ ಹೇಗಿತ್ತು ಗೊತ್ತಾ?

Viral Video: ತನ್ನ ಮೇಲೆ ಮುತ್ತಿನ ಮಳೆ ಸುರಿಸಿದವನಿಗೆ ಬೆಕ್ಕಿನ ಮರಿ ಏನು ಮಾಡಿತು ಗೊತ್ತಾ?; ಕ್ಯೂಟ್ ವಿಡಿಯೋ ಇಲ್ಲಿದೆ