Radford Family: ಟ್ರೋಲರ್​ಗಳ ಬಾಯಿ ಮುಚ್ಚಿಸಲು ಪುಸ್ತಕ ಬರೆದ 22 ಮಕ್ಕಳ ತಂದೆ!

ಬ್ರಿಟನ್‌ನ ಸ್ಯೂ ಮತ್ತು ನೋಯೆಲ್ ರಾಡ್‌ಫೋರ್ಡ್ ಇತ್ತೀಚೆಗೆ "ದಿ ರಾಡ್‌ಫೋರ್ಡ್ಸ್: ಮೇಕಿಂಗ್ ಲೈಫ್ ಕೌಂಟ್" ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಈ ಪುಸ್ತಕದಲ್ಲಿ ಅವರು ಆನ್‌ಲೈನ್ ಟ್ರೋಲ್​​​ ಬಗ್ಗೆ ತಮ್ಮ ಅನುಭವಗಳನ್ನು ವಿವರವಾಗಿ ಉಲ್ಲೇಖಿಸಿದ್ದಾರೆ.

Radford Family: ಟ್ರೋಲರ್​ಗಳ ಬಾಯಿ ಮುಚ್ಚಿಸಲು ಪುಸ್ತಕ ಬರೆದ 22 ಮಕ್ಕಳ ತಂದೆ!
The Radfords: Making Life Count
Image Credit source: Instagram

Updated on: Mar 26, 2024 | 10:52 AM

ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌ಗಳಿಗೆ ಕೊರತೆ ಇಲ್ಲ. ಕೆಲವಷ್ಟು ಜನರು ಟ್ರೋಲರ್​​​ಗಳಿಂದಲೇ ಸಖತ್​​ ಫೇಮಸ್​​ ಕೂಡ ಆಗುವುದುಂಟು. ನಾನಾ ರೀತಿಯಲ್ಲಿ ಟ್ರೋಲ್ ಮಾಡಿದರೂ ಕೂಡ ಯಾವುದನ್ನೂ ಲೆಕ್ಕಿಸದೇ ಮುನ್ನುಗ್ಗಿ ಸೋಶಿಯಲ್​​ ಮೀಡಿಯಾ ಸ್ಟಾರ್​ ಆದವರು ಸಾಕಷ್ಟು ಜನರಿದ್ದಾರೆ. ಇದೀಗಾ ಅಂತದ್ದೇ ಸೋಶಿಯಲ್​ ಮೀಡಿಯಾ ಪ್ರಭಾವಿಯೊಬ್ಬರು ಸಾಕಷ್ಟು ಟ್ರೋಲ್​​​​ಗಳಿಗೆ ಬೇಸತ್ತು ಇದೀಗಾ ಟ್ರೋಲರ್​ಗಳ ಬಾಯಿ ಮುಚ್ಚಿಸಲು ಪುಸ್ತಕವೊಂದನ್ನು ಪ್ರಕಟಿಸಿದ್ದಾರೆ.

ಬ್ರಿಟನ್‌ನ ಸ್ಯೂ ಮತ್ತು ನೋಯೆಲ್ ರಾಡ್‌ಫೋರ್ಡ್ ಇತ್ತೀಚೆಗೆ “ದಿ ರಾಡ್‌ಫೋರ್ಡ್ಸ್: ಮೇಕಿಂಗ್ ಲೈಫ್ ಕೌಂಟ್” ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಈ ಪುಸ್ತಕದಲ್ಲಿ ಅವರು ಆನ್‌ಲೈನ್ ಟ್ರೋಲ್​​​ ಬಗ್ಗೆ ತಮ್ಮ ಅನುಭವಗಳನ್ನು ವಿವರವಾಗಿ ಉಲ್ಲೇಖಿಸಿದ್ದಾರೆ. ಈ ದಂಪತಿ 22 ಮಕ್ಕಳನ್ನು ಹೊಂದಿದ್ದು, ಸೋಶಿಯಲ್​ ಮೀಡಿಯಾಗಳಲ್ಲಿ ತಮ್ಮ ಐಷಾರಾಮಿ ಜೀವನಶೈಲಿಯ ಬಗ್ಗೆ ಹಂಚಿಕೊಳ್ಳುತ್ತಿರುತ್ತಾರೆ. ಇವರ ಕುಟುಂಬವನ್ನು ಕಂಡು ಮೆಚ್ಚುಗೆಗೆ ವ್ಯಕ್ತಪಡಿಸುವವರ ಜೊತೆಗೆ ಟ್ರೋಲ್​​ ಮಾಡುವವರು ಕೂಡ ಸಾಕಷ್ಟು ಜನರಿದ್ದಾರೆ.

ಇದನ್ನೂ ಓದಿ: ಹಾಳಾದ ಹಾಲಿನ ಹಣ ವಾಪಸ್ ಪಡೆಯಲು ಹೋಗಿ 77 ಸಾವಿರ ರೂ. ಕಳೆದುಕೊಂಡ ಬೆಂಗಳೂರಿನ ಮಹಿಳೆ 

ಪ್ರಾರಂಭದಲ್ಲಿ ಟ್ರೋಲ್ ಕಂಡು ಮನನೊಂದಿದ್ದ ಕುಟುಂಬ ನಂತರ ಯಾವುದನ್ನು ಲೆಕ್ಕಿಸದೇ ಸಂತೋಷವಾಗಿ ಜೀವನ ನಡೆಸುತ್ತಿದ್ದಾರೆ. ಸದ್ಯ ಇವರು ಬರೆದ ಪುಸ್ತಕ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಸ್ಯೂ ಮತ್ತು ನೋಯೆಲ್ ಅವರಿಗೆ 22 ಮಕ್ಕಳಿದ್ದಾರೆ, ಅವರಲ್ಲಿ ಹಿರಿಯ ಕ್ರಿಸ್, 34 ವರ್ಷದ ಹುಡುಗ, ಮತ್ತು ಕಿರಿಯ ಹೈಡಿಗೆ ಮೂರು ವರ್ಷ ವಯಸ್ಸು.

ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us