AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಳಾದ ಹಾಲಿನ ಹಣ ವಾಪಸ್ ಪಡೆಯಲು ಹೋಗಿ 77 ಸಾವಿರ ರೂ. ಕಳೆದುಕೊಂಡ ಬೆಂಗಳೂರಿನ ಮಹಿಳೆ 

ಇತ್ತೀಚಿನ ದಿನಗಳಂತೂ ಆನ್ಲೈನ್ ವಂಚನೆಗಳು ತೀರಾ ಹೆಚ್ಚಾಗಿವೆ.  ಪ್ರತಿನಿತ್ಯ ಒಂದಲ್ಲಾ ಒಂದು ವಂಚನೆಯ ಪ್ರಕರಣಗಳು ಕೇಳಿಬರುತ್ತಿವೆ. ಅದೇ ರೀತಿಯ ವಂಚನೆಯ ಪ್ರಕರಣವೊಂದು ಇದೀಗ  ಬೆಳಕಿಗೆ ಬಂದಿದ್ದು, ಆನ್ಲೈನ್ ಮೂಲಕ ಕೆಟ್ಟು ಹೋದ ಹಾಲಿನ ಹಣವನ್ನು ವಾಪಸ್ ಪಡೆಯಲು  ಹೋಗಿ ಬೆಂಗಳೂರಿನ ಮಹಿಳೆಯೊಬ್ಬರು ಆನ್ಲೈನ್ ವಂಚನೆಗೆ  ಬಲಿಯಾಗಿ ತಮ್ಮ ಬ್ಯಾಂಕ್ ಖಾತೆಯಿಂದ ಬರೋಬ್ಬರಿ 77 ಸಾವಿರ ರೂ. ಹಣವನ್ನು ಕಳೆದುಕೊಂಡಿದ್ದಾರೆ. 

ಹಾಳಾದ ಹಾಲಿನ ಹಣ ವಾಪಸ್ ಪಡೆಯಲು ಹೋಗಿ 77 ಸಾವಿರ ರೂ. ಕಳೆದುಕೊಂಡ ಬೆಂಗಳೂರಿನ ಮಹಿಳೆ 
ಮಾಲಾಶ್ರೀ ಅಂಚನ್​
| Edited By: |

Updated on: Mar 25, 2024 | 2:57 PM

Share

ಇಂದಿನ ಕಾಲದಲ್ಲಿ ಸೈಬರ್ ಹಗರಣಗಳು ಜನರ ಕೊರಳಿಗೆ ಕಂಠಕವಾಗಿ ಪರಿಣಮಿಸಿದೆ.  ದಿನೇ ದಿನೇ ಆನ್ಲೈನ್ ವಂಚನೆಯು ಹೆಚ್ಚಾಗುತ್ತಿದೆ. ಇಂತಹ ಹಲವಾರು ಪ್ರಕರಣಗಳು ದಿನನಿತ್ಯ ನಡೆಯುತ್ತಲೇ ಇರುತ್ತವೆ. ಇದೀಗ ಅಂತಹದ್ದೇ  ಪ್ರಕರಣವೊಂದು  ಬೆಳಕಿಗೆ ಬಂದಿದ್ದು, ಕೆಟ್ಟು ಹೋದ ಹಾಲಿನ ಹಣವನ್ನು ಆನ್ಲೈನ್ ಮೂಲಕ ವಾಪಸ್ ಪಡೆಯಲು ಹೋಗಿ ಬೆಂಗಳೂರಿನ ಮಹಿಳೆಯೊಬ್ಬರು ಬರೋಬ್ಬರಿ 77 ಸಾವಿರ ರೂ. ಹಣವನ್ನು ಕಳೆದುಕೊಂಡಿದ್ದಾರೆ.

ಅಷ್ಟಕ್ಕೂ ಆಗಿದ್ದಾದರೂ ಏನು?

ಬೆಂಗಳೂರಿನ ಮಹಿಳೆಯೊಬ್ಬರು  ಮಾರ್ಚ್ 18ರಂದು ಆನ್ಲೈನ್ ಮಾರುಕಟ್ಟೆಯಲ್ಲಿ ದಿನಸಿ ಪದಾರ್ಥಗಳನ್ನು ಹಾಗೂ ಹಾಲು ಖರೀದಿ ಮಾಡಿ  ಯುಪಿಐ ಮೂಲಕ ಹಣವನ್ನು ಸಹ ಪಾವತಿ ಮಾಡಿದ್ದರು. ನಂತರ ಹಾಲಿನ ಪೊಟ್ಟಣ ತೆರೆದು ನೋಡಿದಾಗ ಹಾಲು ಕೆಟ್ಟು ಹೋಗಿತ್ತು. ನಂತರ ಅವರು  ಆನ್ಲೈನ್ ಅಲ್ಲಿ ಇ-ಕಾಮರ್ಸ್ ತಾಣದ ಕಸ್ಟಮರ್ ಕೇರ್ ಸಂಖ್ಯೆಯನ್ನು  ಹುಡುಕಿ, ಆ ಸಂಖ್ಯೆಗೆ ಕರೆ ಮಾಡಿ ನಾನು ಖರೀದಿಸಿದ ಹಾಲು ಕೆಟ್ಟು ಹೋಗಿದೆ, ಅದರ ಹಿಂದಿರುಗಿಸಿ ಎಂದು ಕೇಳಿದ್ದಾರೆ.

ಹೀಗೆ ಮಹಿಳೆ ಕರೆ ಮಾಡಿದಾಗ ಗ್ರಾಹಕರ ಪ್ರತಿನಿಧಿಯ ಹಾಗೆ ಮಾತನಾಡಿದ ಆನ್ಲೈನ್ ವಂಚಕರು ಆ ಮಹಿಳೆಯ ವೈಯಕ್ತಿಕ ವಿವರ ಮತ್ತು ಬ್ಯಾಂಕ್ ಖಾತೆಯ ಮಾಹಿತಿಯನ್ನು ಪಡೆದು,  ಅವರು ವಾಟ್ಸ್ಆಪ್ ಮೂಲಕ ಒಂದು ಲಿಂಕ್ ಕಳುಹಿಸಿ ಇದರಲ್ಲಿ ಯುಪಿಐ ನಂಬರ್ ಮತ್ತು ಪಿನ್ ನಮೂದಿಸಿ ಎಂದು ಹೇಳುತ್ತಾರೆ. ಇದನ್ನು ನಿಜವೆಂದು ನಂಬಿದ  ಹೆಂಗಸು  ತನ್ನ ಎಲ್ಲಾ  ಬ್ಯಾಂಕ್ ವಿವರವನ್ನು ಭರ್ತಿ ಮಾಡಿ ವಂಚಕರಿಗೆ ಕಳುಹಿಸುತ್ತಾರೆ. ಹೀಗೆ ಒಂದು ಯಡವಟ್ಟಿನಿಂದ ಆಕೆ  ತನ್ನ ಬ್ಯಾಂಕ್ ಖಾತೆಯಲ್ಲಿದ್ದ ಬರೋಬ್ಬರಿ 77 ಸಾವಿರ ರೂ. ಹಣವನ್ನು ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: ನಡು ರಸ್ತೆಯಲ್ಲಿ ರೀಲ್ಸ್​ ವಯ್ಯಾರ ಮಾಡ್ತಿದ್ದ ಯುವತಿ.. ಬೈಕಲ್ಲಿ ಬಂದವ ಕ್ಷಣಾರ್ಧದಲ್ಲಿ ಚಿನ್ನದ ಸರ ಎಗರಿಸಿಕೊಂಡುಹೋದ!

ತಾನು ಮೋಸ ಹೋಗಿರುವುದನ್ನು ಅರಿತ ಮಹಿಳೆ ಸೈಬರ್ ಸಹಾಯವಾಣಿಗೆ ಕರೆ ಮಾಡಿ ನಂತರ ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ.  ಸೈಬರ್ ವಂಚಕರು ಆನ್ಲೈನ್ ಫ್ಲಾಟ್ಫಾರ್ಮ್ ಅಲ್ಲಿ ಇ-ಕಾಮರ್ಸ್ ತಾಣದ ಸಂಪೂರ್ಣ ಮಾಹಿತಿಯನ್ನು ತಿರುಚಿ, ತಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಈ ಕೃತ್ಯ ಎಸಗಿ ಮಹಿಳೆಗೆ ಮೋಸ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್