ಬಂತು ನೋಡಿ ಡಾರ್ಕ್ ಪಾರ್ಲೆ-ಜಿ; ಸೋಷಿಯಲ್ ಮೀಡಿಯಾದಲ್ಲಿ ಕೋಲಾಹಲ ಸೃಷ್ಟಿಸುತ್ತಿದೆ ಪಾರ್ಲೆ-ಜಿ 

ಪಾರ್ಲೆಜಿ ಬಿಸ್ಕೆಟ್ 90 ರ ದಶಕದ ಮಕ್ಕಳ ಫೆವರೇಟ್ ಅಂತಾನೇ ಹೇಳಬಹುದು. ಪ್ರಸ್ತುತ ಕಾಲಘಟ್ಟದಲ್ಲಿ ತರಹೇವಾರಿ ಬಿಸ್ಕೆಟ್ ಗಳಿದ್ದರೂ ಹೆಚ್ಚಿನವರು ಪಾರ್ಲೆ-ಜಿ ಬಿಸ್ಕೆಟ್ ತಿನ್ನಲು ಇಷ್ಟಪಡುತ್ತಾರೆ. 1929 ರಲ್ಲಿ ಶುರುವಾದ ಈ ಪಾರ್ಲೆ-ಜಿ ಬಿಸ್ಕೆಟ್ ಒಂದೇ ಫ್ಲೇವರ್ ಅಲ್ಲಿ ಮಾತ್ರ ಲಭ್ಯವಿತ್ತು. ಆದರೆ ಇದೀಗ ಚಾಕೊಲೇಟ್ ಫ್ಲೇವರ್ ನ ಡಾರ್ಕ್ ಪಾರ್ಲೆ-ಜಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಎಂಬ ಸುದ್ದಿ ವೈರಲ್ ಆಗುತ್ತಿದೆ.

ಬಂತು ನೋಡಿ ಡಾರ್ಕ್ ಪಾರ್ಲೆ-ಜಿ; ಸೋಷಿಯಲ್ ಮೀಡಿಯಾದಲ್ಲಿ ಕೋಲಾಹಲ ಸೃಷ್ಟಿಸುತ್ತಿದೆ ಪಾರ್ಲೆ-ಜಿ 
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 07, 2024 | 1:08 PM

ಪಾರ್ಲೆ-ಜಿ (Parle-G) ಬಿಸ್ಕೆಟ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ಈ ಬಿಸ್ಕೆಟ್ 90 ರ ದಶಕದ ಮಕ್ಕಳ ಫೇವರೇಟ್ ಅಂತಾನೇ ಹೇಳಬಹುದು. ಇಂದಿಗೂ ಕೂಡಾ ಹಚ್ಚಿನವರು ಮಾರುಕಟ್ಟೆಗಳಲ್ಲಿ ತರಹೇವಾರಿ ಬಿಸ್ಕೆಟ್ ಗಳಿದ್ದರೂ, ಪಾರ್ಲೆ-ಜಿ ಬಿಸ್ಕೆಟ್ ಅನ್ನೇ ಖರೀದಿ ಮಾಡುತ್ತಾರೆ. ಕೆಲವರಿಗಂತೂ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಕಾಫಿ ಟೀ ಜೊತೆಗೆ ಪಾರ್ಲೆ-ಜಿ ಬಿಸ್ಕೆಟ್ ಇರಲೇಬೇಕು. ಈಗ ನಮ್ಮೆಲ್ಲರ ನೆಚ್ಚಿನ ಪಾರ್ಲೆ-ಜಿ ಚಾಕೊಲೇಟ್ ಫ್ಲೇವರ್ ಗಳಲ್ಲಿಯೂ ಲಭ್ಯವಿದೆಯಂತೆ. ಪಾರ್ಲೆ-ಜಿ ಯ ಈ ಹೊಸ ಆವೃತ್ತಿಯ ಫೋಟೋವೊಂದು  ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಈ ಚಿತ್ರ ನಿಜವೋ ಅಥವಾ ಫೋಟೋಶಾಪ್ ನಿಂದ ಮಾಡಲ್ಪಟ್ಟಿದೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಫೋಟೋದಲ್ಲಿ “ಡೆಲಿಸಿಯಸ್ ಚಾಕೊಲೇಟಿ ಡಾರ್ಕ್ ಚಾಕೊಲೇಟ್ ಬಿಸ್ಕೆಟ್” ಎಂದು ಬರೆದಿರುವ ಚಾಕೊಲೇಟ್ ಫ್ಲೇವರ್ ನ   ಡಾರ್ಕ್ ಪಾರ್ಲೆ-ಜಿ ಬಿಸ್ಕೆಟ್ ಪೊಟ್ಟಣವನ್ನು  ಕಾಣಬಹುದು.  ಆದರೆ ಪಾರ್ಲೆ-ಜಿ ಯ ಅಧೀಕೃಯ ವೆಬ್ ಸೈಟ್ ಅಲ್ಲಿ ಈ ಡಾರ್ಕ್ ಪಾರ್ಲೆ-ಜಿ ಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ.  ಈ ಡಾರ್ಕ್ ಪಾರ್ಲೆ-ಜಿ ಬಿಸ್ಕೆಟ್ ಪೊಟ್ಟಣದ ಫೋಟೋವನ್ನು ರಮೆನ್ (@CoconutShawarma)  ಎಂಬವರು ತಮ್ಮ  X ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: 3 ಅಡಿ ಎತ್ತರದ ಗಣೇಶ್ ಬಾರಯ್ಯ ವಿಶ್ವದ ಅತ್ಯಂತ ಕುಳ್ಳಗಿನ ಡಾಕ್ಟರ್‌

ಒಂದು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್ 9 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ 12 ಸಾವಿರ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಆನ್ಲೈನ್ ಅಲ್ಲಿ ಇದರ ಬಗ್ಗೆ ಯಾವುದೇ ಮಾಹಿತಿ ಇಲ್ಲ, ಇದು ಸುಳ್ಳು ಸುದ್ದಿʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ಬಗ್ಗೆ ಗೂಗಲ್ ನಲ್ಲಿಯೂ ಯಾವುದೇ ಮಾಹಿತಿ ಇಲ್ಲʼ ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು ಡಾರ್ಕ್ ಪಾರ್ಲೆ-ಜಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು ನಿಜ ಎಂದು ಹೇಳಿದರೆ, ಇನ್ನೂ ಕೆಲವರು ಇದು ಸುಳ್ಳು ಸುದ್ದಿ, ಇದು ಕೇವಲ  AI ರಚಿತ ಫೋಟೋ  ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ