Viral Video : ಬೆಂಕಿಯೇ ಇವನನ್ನು ನುಂಗಲು ಬಂದಾಗ; ಗುಜರಾತಿನಲ್ಲಿ ಕೈಕೊಟ್ಟ ಸ್ಟಂಟ್

Stunt : ಗಣೇಶ ಚತುರ್ಥಿ ಸಂದರ್ಭದಲ್ಲಿ ಬೆಂಕಿಯೊಂದಿಗೆ ಸಾಹಸ ಮಾಡಲು ಹೋದ ಈ ಯುವಕನ ಪರಿಸ್ಥಿತಿ ಏನಾಗಿದೆ ನೋಡಿ.

Viral Video : ಬೆಂಕಿಯೇ ಇವನನ್ನು ನುಂಗಲು ಬಂದಾಗ; ಗುಜರಾತಿನಲ್ಲಿ ಕೈಕೊಟ್ಟ ಸ್ಟಂಟ್
ಸ್ಟಂಟ್ ಮಾಡಲು ಹೋಗಿ
Edited By:

Updated on: Sep 02, 2022 | 12:49 PM

Viral Video : ಗುಜರಾತ್​ನ ಸೂರತ್​ನಲ್ಲಿ ಗಣೇಶ ಚತುರ್ಥಿ ಆಚರಣೆಯ ಸಂದರ್ಭದಲ್ಲಿ ಸ್ಟಂಟ್ ಮಾಡಲು ಹೋದ ವ್ಯಕ್ತಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ.  ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾರ್ವಜನಿಕವಾಗಿ ಬೆಂಕಿ ಉಗುಳುವ ಸಾಹಸದಲ್ಲಿ ತೊಡಗಿಕೊಂಡಿದ್ದಾಗ ಈ ದುರ್ಘಟನೆ ನಡೆದಿದೆ. ಬೆಂಕಿ ಅವನನ್ನೇ ಹೊತ್ತಿ ಉರಿಯಲು ಆರಂಭಿಸಿದಾಗ ಅಲ್ಲಿದ್ದ ಜನರೂ ಗಾಬರಿಗೊಳಗಾಗಿ ಓಡಾಡಿದ್ದಾರೆ. ನಂತರ ಪಕ್ಕದಲ್ಲೇ ಇದ್ದ ಒಬ್ಬರು ತಕ್ಷಣವೇ ಅವನ ಶರ್ಟ್​ ತೆಗೆದು ಬೆಂಕಿ ನಂದಿಸಲು ಸಹಾಯ ಮಾಡಿದ್ದಾರೆ. ಬಾಯಿಯಿಂದ ಬೆಂಕಿಯನ್ನು ಹೊತ್ತಿಸಲು ಹೋಗಿ ಬೆಂಕಿಯೇ ಅವನನ್ನು ನುಂಗಲು ನೋಡಿದ ಈ ಭಯಾನಕ ದೃಶ್ಯದಿಂದ ನೆಟ್ಟಿಗರೂ ಗಾಬರಿಯಾಗಿ ಪ್ರತಿಕ್ರಿಯಿಸಿದ್ದಾರೆ.

@oursuratcity ಎಂಬ ಪುಟವು Twitter ನಲ್ಲಿ ಈ ವಿಡಿಯೋ ಹಂಚಿಕೊಂಡಿದೆ. ಸೂರತ್‌ನ ಪರ್ವತ್ ಪಾಟಿಯಾ ಪ್ರದೇಶದಲ್ಲಿ ನಡೆದ ಈ ಘಟನೆ ನಿಜಕ್ಕೂ ಬೆಚ್ಚಿಬೀಳಿಸುವಂತಿದೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಇಂಥ ಸಾಹಸಕಾರ್ಯಗಳನ್ನು ಮಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಮತ್ತೊಬ್ಬರು ಹೇಳಿದ್ದಾರೆ.

ಅಷ್ಟಕ್ಕೂ ಅಪಾಯಕ್ಕೆ ಒಡ್ಡಿಕೊಳ್ಳುವಂಥ ಇಂಥ ಮೋಜು ಬೇಕಾ? ಸ್ವಲ್ಪ ಯೋಚಿಸಿ. ಇಂಥ ಸಾಹಸಗಳು  ನಿಮ್ಮನ್ನಷ್ಟೇ ಅಲ್ಲ ಸುತ್ತಮುತ್ತಲಿನವರನ್ನೂ ಆಹುತಿಗೆ ತೆಗೆದುಕೊಳ್ಳುತ್ತವೆ. ಹಬ್ಬ, ಆಚರಣೆ ಎಂದರೆ ಒಳ್ಳೆಯ ನೆನಪುಗಳಿಂದ ಕೂಡಿರಬೇಕಲ್ಲವಾ? ಜನ್ಮಪೂರ್ತಿ ಭಯಕ್ಕೆ ತಳ್ಳುವ ಇಂಥ ಅತಿರೇಕದ ಮಸ್ತಿ ಬೇಕಾ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ