
ಮಕ್ಕಳೇ (Children) ಹಾಗೆ, ಆಟ ಆಡುವುದೇ ಪ್ರಪಂಚವಾಗಿರುತ್ತದೆ. ಹೀಗಾಗಿ ಈ ಪುಟ್ಟ ಮಕ್ಕಳನ್ನು ಸುಮ್ಮನೆ ಕೂರಿಸುವುದು ಹೆತ್ತವರಿಗೆ ತ್ರಾಸಿನ ಕೆಲಸ. ಬಸ್ಸಿನಲ್ಲಿ ಮಕ್ಕಳ ಜತೆಗೆ ಪ್ರಯಾಣ ಮಾಡುವಾಗ ಅವುಗಳನ್ನು ಸಂಭಾಳಿಸುವುದೇ ದೊಡ್ಡ ಸವಾಲಾಗಿರುತ್ತದೆ. ಆದರೆ ತಮಿಳುನಾಡಿನ (Tamil Nadu) ಬಸ್ ಚಾಲಕನೊಬ್ಬ ಮಕ್ಕಳಿಗಾಗಿ ಬಸ್ಸಿನಲ್ಲಿ ಹೊಸ ವ್ಯವಸ್ಥೆ ಮಾಡಿದ್ದು, ಮಕ್ಕಳನ್ನು ಖುಷಿ ಪಡಿಸಲು ಆಟಿಕೆ ಸ್ಟೀರಿಂಗ್ ಅನ್ನು ಅಳವಡಿಸಲಾಗಿದೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
log.kya.sochenge ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಚಾಲಕ ಬಸ್ ಓಡಿಸುತ್ತಿದ್ದಂತೆ, ಪಕ್ಕದಲ್ಲೇ ಕುಳಿತಿರುವ ಪುಟಾಣಿಯೊಂದು ಸ್ಟೀರಿಂಗ್ ಹಿಡಿದು ಬಸ್ ಓಡಿಸುವುದನ್ನು ನೋಡಬಹುದು. ಆದರೆ ಪುಟಾಣಿ ಮಕ್ಕಳಿಗಾಗಿ ಡ್ರೈವರ್ ತನ್ನ ಡ್ರೈವಿಂಗ್ ಸೀಟಿನ ಪಕ್ಕದಲ್ಲಿ ಆಟಿಕೆ ಸ್ಟೀರಿಂಗ್ ಅಳವಡಿಸಿಕೊಂಡಿರುವುದನ್ನು ಕಾಣಬಹುದು.
ಈ ವಿಡಿಯೋ ಇದುವರೆಗೆ ಹದಿನೆಂಟು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಬಾಲ್ಯದ ಕನಸು ಎಂದರೆ, ಮತ್ತೊಬ್ಬರು, ಡ್ರೈವರ್ ಸೆಲ್ಯೂಟ್ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರ ಇದು ಉಳಿದ ಬಸ್ಸಿನ ಡ್ರೈವರ್ ಏಕಾಗ್ರತೆಗೆ ಅಡ್ಡಿಯಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:53 pm, Sun, 30 November 25