Viral Video: ತರಗತಿಗೆ ವಿದ್ಯಾರ್ಥಿಗಳನ್ನು ವಿಶಿಷ್ಟವಾಗಿ ಸ್ವಾಗತಿಸಿದ ಶಿಕ್ಷಕಿ

ವಿದ್ಯಾರ್ಥಿಗಳನ್ನು ಶಿಕ್ಷಕಿ ಸ್ವಾಗತ ಕೋರುವ ಶೈಲಿ ವಿಭಿನ್ನವಾಗಿದ್ದು, ವಿಡಿಯೋವನ್ನು ನೋಡಿ ನೆಟ್ಟಿಗರು ಹರ್ಷಗೊಂಡಿದ್ದಾರೆ. 

Viral Video: ತರಗತಿಗೆ ವಿದ್ಯಾರ್ಥಿಗಳನ್ನು ವಿಶಿಷ್ಟವಾಗಿ ಸ್ವಾಗತಿಸಿದ ಶಿಕ್ಷಕಿ
ವಿಶಿಷ್ಟವಾಗಿ ಮಕ್ಕಳ್ಳನ್ನು ಸ್ವಾಗತಿಸುವ ಶಿಕ್ಷಕಿ
Image Credit source: India Today

Updated on: Jun 21, 2022 | 5:09 PM

ಚಿಕ್ಕ ಮಕ್ಕಳು ಶಾಲೆಗೆ (School) ಹೋಗಲು ಹಠ ಮಾಡುತ್ತವೆ, ಶಾಲೆಗೆ ಹೋಗುವುದಿಲ್ಲವೆಂದು ಗೊಗೆರೆಯುತ್ತವೆ. ಹಾಗೇ  ಪೋಷಕರು (Parents) ಮಕ್ಕಳನ್ನು (Children) ಶಾಲೆಗೆ ಕಳುಹಿಸಲು ಹರ ಸಾಹಸ ಪಡುತ್ತಾರೆ. ಆದರೆ ಈ ವಿಡಿಯೋದಲ್ಲಿ ಮಕ್ಕಳು ಶಾಲೆಗೆ ನಲಿನಲಿಯುತ್ತಾ ಹೋಗುತ್ತಾರೆ. ಇದಕ್ಕೆ ಕಾರಣ ತರಗತಿಯ ಶಿಕ್ಷಕಿ. ವಿಡಿಯೋದಲ್ಲಿ ಶಿಕ್ಷಕಿ ಮಕ್ಕಳನ್ನು ತರಗತಿಗೆ ಬರಮಾಡಿಕೊಳ್ಳುವ ಶೈಲಿಯೇ ವಿಚಿತ್ರವಾಗಿದೆ ನೀವು ಒಮ್ಮೆ ನೋಡಿದರೆ ಸಂತೋಷಗೊಳ್ಳುತ್ತೀರಿ.

ಇದನ್ನು ಓದಿ: 100 ಮೀಟರ್​​ ಓಟವನ್ನು 45.40 ಸೆಕೆಂಡ್‌ಗಳಲ್ಲಿ ಓಡಿದ 105 ವರ್ಷದ ಸಾಧಕಿ ಈಕೆ

ವಿಡಿಯೋದಲ್ಲಿ ವಿದ್ಯಾರ್ಥಿಗಳನ್ನು ಶಿಕ್ಷಕಿ (Teacher) ಸ್ವಾಗತ ಕೋರುವ ಶೈಲಿ ವಿಭಿನ್ನವಾಗಿದ್ದು, ವಿಡಿಯೋವನ್ನು ನೋಡಿ ನೆಟ್ಟಿಗರು ಹರ್ಷಗೊಂಡಿದ್ದಾರೆ.  ವಿಡಿಯೋದಲ್ಲಿ ಶಿಕ್ಷಕಿ ವಿದ್ಯಾರ್ಥಿಗಳನ್ನು ಕುಣಿಯುತ್ತಾ, ಬಾಚಿ ತಬ್ಬಿಕೊಳ್ಳುತ್ತಾ, ನಮಸ್ತೆ ಎಂದು ಹೇಳುತ್ತಾ ತರಗತಿಗೆ ಬರಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನು    ಆಲ್ವಿನ್ ಫೂ ಎಂಬುವವರು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋ ಸಾಕಷ್ಟು ವೈರಲ್​ ಆಗಿದ್ದು ವಿಡಿಯೋದಲ್ಲಿ ಶಿಕ್ಷಕಿ ಕೆಲವರ ಜೊತೆ ಕುಣಿದು ಕುಪ್ಪಳಿಸಿದರೆ, ಇನ್ನು ಕೆಲವರಿಗೆ ಬಿಗಿದಪ್ಪಿಕೊಂಡರು.

ಈ ವಿಡಿಯೋವನ್ನು ನಟ ಜೇಮ್ಸ್ ವುಡ್ ಕೂಡ ರಿಟ್ವೀಟ್ ಮಾಡಿದ್ದಾರೆ. ಟ್ವಿಟರ್​ನಲ್ಲಿ ವಿಡಿಯೋ ವೈರಲ್​ ಆಗುತ್ತಿದ್ದಂತೆ ವಿಡಿಯೋ 3 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.

ಟ್ರೆಂಡಿಂಗ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ    ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:09 pm, Tue, 21 June 22