ಜೀವನವೇ ಒಂದು ಹೋರಾಟ! ವಿಡಿಯೋದಲ್ಲಿರುವ ಆ ದೃಶ್ಯ ನೇರವಾಗಿ ನಿಮ್ಮ ಹೃದಯವನ್ನು ಸ್ಪರ್ಶಿಸುವುದು ಖಂಡಿತ. ಸಾಮಾನ್ಯವಾಗಿ ತಾನು ನಡೆದಿದ್ದೇ ದಾರಿ ಎಂಬಂತೆ ಹೆಸರಿಗೆ ತಕ್ಕಂತೆ ಗಜ ಗಾಂಭೀರ್ಯದಿಂದ ನಡೆಯುವ ಆನೆ, ಮೂರು ಕಾಲಿನಲ್ಲಿ ನಡೆದು ಜೀವನ ಸಾಗಿಸುವುದನ್ನು ಇಲ್ಲಿ ನೋಡಿ! ಕೆಲವೊಮ್ಮೆ ಪ್ರಾಣಿಗಳು ಮನುಷ್ಯರಿಗಿಂತ ಹೆಚ್ಚು ಬುದ್ಧಿವಂತ ಮತ್ತು ಹೋರಾಟದ ಕೌಶಲ್ಯವನ್ನು ತುಸು ಹೆಚ್ಚೇ ಹೊಂದಿರುತ್ತವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ..? ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋವೊಂದು ಆ ಕಟು ಸತ್ಯವನ್ನು ಸಾಬೀತುಪಡಿಸಿದೆ. ದಕ್ಷಿಣ ಆಫ್ರಿಕಾದ (South Africa) ಸುಕಾ ಪ್ರೈವೇಟ್ ಗೇಮ್ ರಿಸರ್ವ್‌ನಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿರುವ ಡೈಲನ್ ಪೊನ್ಸ್ ಅವರು (content creator Dylan Pons) ರೆಕಾರ್ಡ್ ಮಾಡಿ ಹಂಚಿಕೊಂಡಿರುವ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಹೃದಯವನ್ನು ಆರ್ದ್ರಗೊಳಿಸುವ ಈ ವೀಡಿಯೊದಲ್ಲಿ, ಮೂರು ಕಾಲಿನ ಆನೆಯೊಂದು ಕಾಡಿನಲ್ಲಿ ಸಂಚರಿಸುತ್ತಿದೆ. ಡೈಲನ್ ಪೊನ್ಸ್ ಅವರು ಈ ಆನೆಯನ್ನು ವುಟೊಮಿ ಎಂದು ವೀಡಿಯೊ ಜೊತೆಗಿನ ಶೀರ್ಷಿಕೆಯಲ್ಲಿ ವಿವರಿಸಿದ್ದಾರೆ. ವೀಡಿಯೊದಲ್ಲಿ, ವುಟೋಮಿ (3 legged elephant Vutomi ) ತನ್ನ ಮೂರು ಕಾಲುಗಳ ಮೇಲೆ ಬ್ಯಾಲೆನ್ಸ್ ಮಾಡುತ್ತಾ, ಅಪ್ಪಿತಪ್ಪಿಯೂ ಬೀಳದೆ ಬಹಳ ಎಚ್ಚರಿಕೆಯಿಂದ, ಕಷ್ಟದಿಂದ ಮುನ್ನಡೆಯುತ್ತಾ… ತನ್ನ ಆನೆಗಳ ಹಿಂಡಿನ ಕಡೆಗೆ ನಡೆಯುತ್ತಾಳೆ. ಕೇವಲ 10 ಸೆಕೆಂಡುಗಳ ಈ ವೀಡಿಯೋವನ್ನು ಮತ್ತೆ ಮತ್ತೆ ನೋಡುವಂತಾಗುತ್ತದೆ ನಿಮಗೆ.
ಕ್ರುಗರ್ ರಾಷ್ಟ್ರೀಯ ಉದ್ಯಾನವನದ ನೇಮಾನಿ ಅಣೆಕಟ್ಟಿನ ಬಳಿ ಈ ದೃಶ್ಯ ಕಂಡುಬಂದಿದೆ. ವುಟೋಮಿಗೆ ಹಿಂದಿನ ಬಲ ಕಾಲು ಇಲ್ಲ. ಅಪಘಾತ ಅಥವಾ ಬೇಟೆಗಾರರಿಂದ ಆನೆ ಕಾಲು ಕಳೆದುಕೊಂಡಿರಬಹುದು ಎಂದು ಪೋನ್ಸ್ ತಮ್ಮ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ. ವಿಡಿಯೋದಲ್ಲಿರುವ ಆ ದೃಶ್ಯ ನಿಜಕ್ಕೂ ಹೃದಯಸ್ಪರ್ಶಿಯಾಗಿದೆ. ಕಾಲು ಕಳೆದುಕೊಂಡರೂ ತನ್ನ ಗುಂಪಿನೊಂದಿಗೆ ಸಾಮಾನ್ಯ ಜೀವನ ನಡೆಸುವ ವುಟೊಮಿಯ ಸಂಕಲ್ಪದಿಂದ ನಾವು ಮನುಷ್ಯರು ಕಲಿಯುವುದು ಬಹಳಷ್ಟಿದೆ ಎಂದು ಅವರು ಹೇಳುತ್ತಾರೆ.
ಇದನ್ನೂ ಓದಿ:
ವುಟೊಮಿ ಇತರ ಆನೆಗಳೊಂದಿಗೆ ನಡೆಯುವುದನ್ನು ನೋಡಿದ ಇಡೀ ಹಿಂಡು ಅದನ್ನು ಅಪ್ಪಿಕೊಂಡು, ಅದನ್ನು ಬೆಂಬಲಿಸಿ, ಅದಕ್ಕೆ ಅಪಾರವಾದ ಸಹಾನುಭೂತಿಯನ್ನು ಸೂಚಿಸಿತು ಎಂದು ತಾವು ಗಮನಿಸಿದ್ದನ್ನು ಅವರು ಟಿಪ್ಪಣಿ ಮಾಡಿದ್ದಾರೆ. ವುಟೋಮಿಯಂತಹ ಪ್ರಾಣಿಗಳು ಇನ್ನೂ ಕಾಡಿನಲ್ಲಿರಬಹುದು ಎಂದೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ ತಮ್ಮ ಟ್ವೀಟ್ ನಲ್ಲಿ!
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 5:32 pm, Tue, 14 March 23