Viral: ನನಗೆ ಇಂದು ಕೆಲ್ಸ ಮಾಡಲು ಆಗಲ್ಲ, ಕಣ್ಣು ಉರಿ; ಉದ್ಯೋಗಿಯ ಮೆಸೇಜ್‌ಗೆ ಬಾಸ್ ರಿಯಾಕ್ಷನ್ ನೋಡಿ

ಆರೋಗ್ಯ ಸಮಸ್ಯೆ ಸೇರಿದಂತೆ ಇನ್ನಿತರ ಕಾರಣಗಳಿಗೆ ಬಾಸ್ ಬಳಿ ರಜೆ ಕೇಳ್ತಾರೆ. ರಜೆ ಕೊಡಲ್ಲ ಎಂದಾಗ ಕೆಲವರು ಜಾಬ್ ರಿಸೈನ್ ಮಾಡ್ತಾರೆ. ಆದರೆ ಇಲ್ಲೊಬ್ಬ ಉದ್ಯೋಗಿಯೂ ಬಾಸ್‌ ಬಳಿ ನೇರವಾಗಿ ರಜೆ ಕೇಳಿದ್ದಾನೆ. ರಜೆ ಕೇಳುತ್ತಿದ್ದಂತೆ ಬಾಸ್ ನೀಡಿದ ಪ್ರತಿಕ್ರಿಯೆ ಎಲ್ಲರ ಗಮನ ಸೆಳೆದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ನನಗೆ ಇಂದು ಕೆಲ್ಸ ಮಾಡಲು ಆಗಲ್ಲ, ಕಣ್ಣು ಉರಿ; ಉದ್ಯೋಗಿಯ ಮೆಸೇಜ್‌ಗೆ ಬಾಸ್ ರಿಯಾಕ್ಷನ್ ನೋಡಿ
ಸಾಂದರ್ಭಿಕ ಚಿತ್ರ
Image Credit source: Pinterest

Updated on: Nov 27, 2025 | 6:10 PM

ಕೆಲಸಕ್ಕಿಂತ (job) ಆರೋಗ್ಯ ಮುಖ್ಯ. ಬಾಸ್ ರಜೆ ಕೊಡಲ್ಲ ಅಂದುಕೊಂಡು ಅದೆಷ್ಟೇ ಕಷ್ಟವಾದ್ರೂ  ಕೆಲ ಉದ್ಯೋಗಿಗಳು ಕೆಲಸ ಮಾಡೋದನ್ನು ನೀವು ನೋಡಿರುತ್ತೀರಿ. ಕೆಲವರು ಬಾಸ್ ಜತೆ ಕಿರಿಕ್ ಮಾಡಿಕೊಂಡಾದ್ರೂ ರಜೆ (leave) ತೆಗೆದುಕೊಳ್ತಾರೆ. ಆದರೆ ತನ್ನ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಯ ಜತೆಗೆ ನಡೆಸಿದ ಸಂಭಾಷಣೆಯ ಸ್ಕ್ರೀನ್‌ಶಾಟ್ ಹಂಚಿಕೊಂಡ ಬಾಸ್ ಕೆಲವು ವಿಚಾರವನ್ನು ಉಲ್ಲೇಖಿಸಿದ್ದಾರೆ. ಈ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸ್ವಪಿಲ್ ಶ್ರೀವಾಸ್ತವ್ (Swapnil Srivastav) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ಈ ಪೋಸ್ಟ್‌ನಲ್ಲಿ ವ್ಯಕ್ತಿಯೊಬ್ಬರು, ದೆಹಲಿಯಲ್ಲಿನ ತೀವ್ರ ಮಾಲಿನ್ಯದ ನಡುವೆ, ನನಗೆ ಇಂದು ನನ್ನ ಉದ್ಯೋಗಿಯಿಂದ ರಜೆಯ ಆದೇಶ ಬಂದಿದೆ. Gen Z ಉದ್ಯೋಗಿ ಸ್ಟ್ರೈಟ್ ಫಾರ್ವಡ್ ಆಗಿದ್ದಾರೆ ಎಂದು ಬರೆದುಕೊಂಡು ಸಂಭಾಷಣೆಯ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ. ಈ ಸ್ಕ್ರೀನ್ ಶಾಟ್‌ನಲ್ಲಿ ಉದ್ಯೋಗಿ ಇಂದು ನನಗೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ, ನನ್ನ ಕಣ್ಣು ಉರಿಯುತ್ತಿವೆ ಎಂದು ಸಂದೇಶ ಕಳುಹಿಸಿರುವುದನ್ನು ಕಾಣಬಹುದು. ಇದಕ್ಕೆ ಬಾಸ್ ಸಕಾರಾತ್ಮಕವಾಗಿ ಉತ್ತರಿಸಿ ಓಕೆ ಎಂದಿರುವುದನ್ನು ನೋಡಬಹುದು.

ವೈರಲ್‌ ಪೋಸ್ಟ್‌ ಇಲ್ಲಿದೆ ನೋಡಿ

ಇದನ್ನೂ ಓದಿ:ಟ್ಯಾಟೂ ಹಾಕಿದ ಉದ್ಯೋಗಿಯನ್ನೇ ನಿಂದಿಸಿದ ಬಾಸ್

ಈ ವಿಡಿಯೋ ಐದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಭಾರತೀಯ ಕೆಲಸದ ಸಂಸ್ಕೃತಿ ಸುಧಾರಿಸಿದೆ ಎಂದಿದ್ದಾರೆ. ಇನ್ನೊಬ್ಬರು, ತುಂಬಾ ನೇರವಾಗಿರುವುದು ಒಳ್ಳೆಯದು, ಯಾವುದೇ ನಾಟಕವಿಲ್ಲ, ಕೇವಲ ಪ್ರಾಮಾಣಿಕತೆ, ಅದು ಹೀಗಿರಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 6:08 pm, Thu, 27 November 25