ಮನುಷ್ಯರು ಮಾತ್ರವಲ್ಲ ಪ್ರಾಣಿಗಳಿಗೂ ರಕ್ತ ಸಂಬಂಧ, ಪ್ರೀತಿ, ಮಮತೆ, ಭಾವನೆಗಳು ಇರುವುತ್ತವೆ ಎಂಬುದಕ್ಕೆ ಸಾಕ್ಷಿ ಎಂಬಂತಿರುವ ಮನಕಲಕುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿದ್ಯುತ್ ಸ್ಪರ್ಶದಿಂದ ಹಸುನೀಗಿದ ತಾಯಿ ಹಸುವನ್ನು ಮನೆಯವರು ಮಣ್ಣು ಮಾಡಿರುತ್ತಾರೆ. ಆದರೆ ನನಗೆ ನನ್ನಮ್ಮಾ ಬೇಕೇ ಬೇಕು ಎಂದು ಸಮಾಧಿ ಬಳಿ ಓಡುತ್ತಾ ಬಂದ ಕರು ಹೂತಿದ್ದ ಮಣ್ಣನ್ನು ಕಾಲಿನಿಂದ ಕೆರೆದು ಅಮ್ಮಾ ಎದ್ದೇಳಮ್ಮಾ….. ಎಂದು ಗೋಳಾಡಿದೆ. ಹೆತ್ತ ತಾಯಿಯನ್ನು ಕಳೆದುಕೊಂಡ ಕರುವಿನ ಈ ಯಾತನೆ ಕರುಳು ಹಿಂಡುವಂತಿದೆ.
ಈ ಮನಕಲಕುವ ಘಟನೆ ಮೈಸೂರಿನಲ್ಲಿ ನಡೆದಿದ್ದು, ಇಲ್ಲಿನ ಹೂಟಗಳ್ಳಿಯ ಎಸ್‌ಆರ್‌ಎಸ್ ಬಡಾವಣೆಯಲ್ಲಿ ಮಂಗಳವಾರದಂದು (ಜುಲೈ 16) 1.20 ಲಕ್ಷ ಬೆಲೆಬಾಳುವ ಗರ್ಭಿಣಿ ಹಸುವೊಂದು ರಸ್ತೆ ಬದಿಯಲ್ಲಿದ್ದ ಬೋರ್‌ವೇಲ್ ವಿದ್ಯುತ್ ಸಂಪರ್ಕ ಕಲ್ಪಿಸುವ ಸ್ವಿಚ್‌ಬಾಕ್ಸ್ ಸ್ಪರ್ಶಿಸಿ ಸ್ಥಳದಲ್ಲೇ ಧಾರುಣವಾಗಿ ಸಾವನ್ನಪ್ಪಿದೆ. ತಾಯಿ ಹಸುವು ಒದ್ದಾಡಿ ಪ್ರಾಣ ಬಿಟ್ಟಿದ್ದನ್ನು ಕಣ್ಣಾರೆ ಕಂಡ ಕರುವಿನ ರೋಧನೆ ಕರುಳು ಹಿಂಡುವಂತಿದೆ.
ಇದನ್ನೂ ಓದಿ: ಪಿಟ್‌ಬುಲ್ ಶ್ವಾನಗಳ ದಾಳಿ; ಪ್ರಾಣ ಉಳಿಸಿಕೊಳ್ಳಲು ಕಾರಿನ ಮೇಲತ್ತಿ ಕುಳಿತ ಡೆಲಿವರಿ ಬಾಯ್
ಹೌದು ಸಾವನ್ನಪ್ಪಿದ ಹಸುವನ್ನು ಮನೆಯವರು ಮಣ್ಣು ಮಾಡಿದ್ದು, ಆ ಸಂದರ್ಭದಲ್ಲಿ ತಾಯಿ ಸಮಾಧಿ ಬಳಿಗೆ ಓಡುತ್ತಾ ಬಂದ ಕರು ಅಮ್ಮಾ ಎದ್ದೇಳಮ್ಮಾ…. ಅಮ್ಮಾ ಎಲ್ಲಿದ್ದೀಯಾ ಬೇಗ ಬಾರಮ್ಮಾ… ಎಂದು ಕಾಲಿನಿಂದ ಸಮಾಧಿಯ ಮಣ್ಣನ್ನು ಅಗೆದು, ತಾಯಿಗಾಗಿ ಈ ಮುಗ್ಧ ಜೀವ ಗೋಳಾಡಿದೆ. ಈ ಮನಕಲಕುವ ವಿಡಿಯೋ ದೃಶ್ಯಾವಳಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ತಾಯಿಯನ್ನು ಕಳೆದುಕೊಂಡ ಮೂಕ ಜೀವಿಯ ಯಾತನೆ ಕರುಳು ಹಿಂಡುವಂತಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ