Experiment : ಮತ್ತೆ ಮೊಬೈಲ್ ಹಿಡಿದುಕೊಂಡೆಯಾ? ಬಿಡು ಅದನ್ನು ಮೊದಲು. ಮೊಬೈಲ್ ನೋಡಿಯೇ ನೀನು ಹೀಗಾಡುವುದು. ನೋಡು ಈಗಾಗಲೇ ಕಣ್ಣುಗಳು ಹಾಳಾಗಿ ಹೋಗಿವೆ. ಎಷ್ಟು ಬೈದರೂ ನಿನಗೆ ಅರ್ಥವಾಗುವುದಿಲ್ಲವಲ್ಲ ಮತ್ತದೇ ಮೊಬೈಲ್ ಮೊಬೈಲ್. ಅದನ್ನ ದೂರ ಎಸೆದು ಬಿಡಬೇಕು! ಎಂದು ಅಬ್ಬರಿಸುತ್ತೀರೇ ಹೊರತು ಮೊಬೈಲ್ನಿಂದ ಮಕ್ಕಳು ದೂರವಿರಬೇಕು ಎಂದರೆ ನೀವು ಅವರ ಹತ್ತಿರಕ್ಕೆ ಹೋಗಬೇಕು ಎನ್ನುವುದು ನಿಮ್ಮ ಅರಿವಿಗೆ ಬರುವುದೇ ಇಲ್ಲ. ಆದರೆ, ನಿಮ್ಮ ಕೈಯಲ್ಲಿರುವ ಮೊಬೈಲ್ ಅನ್ನು ದಿನಕ್ಕೆ ಇಷ್ಟು ಗಂಟೆಯಾದರೂ ದೂರವಿಟ್ಟು ಆ ಸಮಯವನ್ನು ಮಕ್ಕಳಗಾಗಿ ವಿನಿಯೋಗಿಸುವುದೊಂದೇ ಪರಿಹಾರ. ಇದೀಗ ಈ ವಿಡಿಯೋ ನೋಡಿ. ಈ ಅಪ್ಪ ನಾಲ್ಕೂ ಮಕ್ಕಳೊಂದಿಗೆ ಮೋಜಿನ ವಿಜ್ಞಾನ (Fun Science) ಪ್ರಯೋಗವನ್ನು ಮಾಡುತ್ತಿದ್ದಾರೆ.
ನಾನು ಇಂಥವರ ಮನೆಯಲ್ಲಿ ಹುಟ್ಟಿ ಬೆಳೆಯಬೇಕಿತ್ತು ಎಂದು ಅನೇಕರು ಹೇಳುತ್ತಿದ್ದಾರೆ. ಈ ತಂದೆ ಎಷ್ಟು ಪ್ರೀತಿಯಿಂದ ಮಕ್ಕಿಳಿಗೆ ಈ ಪ್ರಯೋಗವನ್ನು ಹೇಳಿಕೊಡುತ್ತಿದ್ದಾರೆ. ಮತ್ತೆ ಆ ಮಕ್ಕಳೂ ಕೂಡ ಎಷ್ಟೊಂದು ಮಗ್ನವಾಗಿದ್ದಾರೆ. ಎದುರಿಗೆ ಮೊಬೈಲ್ನಲ್ಲಿ ಚಿತ್ರೀಕರಿಸಲಾಗುತ್ತಿದೆ ಎನ್ನುವ ಅರಿವಿಲ್ಲದಷ್ಟು! ಎಂದಿದ್ದಾರೆ ಒಬ್ಬರು. ಮಕ್ಕಳನ್ನು ಒಳ್ಳೆಯ ಕುತೂಹಲದೆಡೆ ತಿರುಗಿಸುವಂಥ ಇಂಥ ವಿಡಿಯೋಗಳನ್ನು ಹೆಚ್ಚೆಚ್ಚು ಮಾಡಬೇಕು. ಅವುಗಳಲ್ಲಿ ಹೀಗೆ ಪೋಷಕರೂ ತೊಡಗಿಕೊಳ್ಳಬೇಕು ಎಂದು ಮತ್ತೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ : Viral Video: ‘ಐ ಕೇಮ್ ಫ್ರಂ ಹನೇಹಳ್ಳಿ’ ; ಈ ಅಪ್ಪಟ ಅವಿದ್ಯಾವಂತನ ಗಂಟಲೋಳ್ ಇಳಿದ ಇಂಗ್ಲಿಷ್
ಆ ಚಿಕ್ಕಮಗು ಎಷ್ಟು ಮುದ್ದಾಗಿ ಕುತೂಹಲದಿಂದ ಈ ಪ್ರಯೋಗವನ್ನು ವೀಕ್ಷಿಸುತ್ತಿದೆಯಲ್ಲ ಎಂದು ಅನೇಕರು ಪ್ರೀತಿಯ ಹೂಮಳೆ ಸುರಿಸಿದ್ದಾರೆ. ನನ್ನ ಬಾಲ್ಯ ಮತ್ತು ಅಪ್ಪನನ್ನು ಈ ವಿಡಿಯೋ ನೆನಪಿಸುತ್ತಿದೆ ಎಂದು ಹೇಳಿದ್ದಾರೆ ಕೆಲವರು. ಅಪ್ಪ ಅಮ್ಮನಿಗೆ ವಾರಕ್ಕೆ ಎರಡು ರಜೆ ಕೊಡಬೇಕು. ಒಂದು ಮನೆಕೆಲಗಳನ್ನು ನಿರ್ವಹಿಸಲು ಇನ್ನೊಂದು ಮಕ್ಕಳೊಂದಿಗೆ ಕಳೆಯಲು ಎಂದು ಒಂದಿಷ್ಟು ಹೇಳಿದ್ದಾರೆ. ಈಗಲೂ ಮಕ್ಕಳನ್ನು ಇಂಥ ಸಂಗತಿಗಳ ಕಡೆಗೆ ಆಸಕ್ತಿ ಹುಟ್ಟುವಂತೆ ಖಂಡಿತ ಮಾಡಬಹುದು, ಮೊಬೈಲ್ನಿಂದ ದೂರವಿರಿಸಬಹುದು ಎಂಬ ಭರವಸೆ ಇದನ್ನು ನೋಡಿದ ಮೇಲೆ ಅನ್ನಿಸುತ್ತಿದೆ, ನಾನೂ ನನ್ನ ಮಕ್ಕಳೊಂದಿಗೆ ಪ್ರಯತ್ನಿಸುವೆ ಎಂದಿದ್ದಾರೆ ಒಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 1:27 pm, Fri, 7 July 23