ವರದಕ್ಷಿಣೆ ಪಡೆಯುವುದನ್ನು ತಡೆಯಲು ಅನೇಕ ಕಾನೂನುಗಳು ಚಾಲ್ತಿಯಲ್ಲಿವೆ, ಇದರ ಹೊರತಾಗಿಯೂ ವರದಕ್ಷಿಣೆ ಕಿರುಕುಳದ ಹಲವು ಘಟನೆಗಳು ಮುನ್ನಲೆಗೆ ಬರುತ್ತಿವೆ. ವರದಕ್ಷಿಣೆ ಕೇಳುವುದು ಎಷ್ಟು ತಪ್ಪೋ, ಕೊಡುವುದು ಕೂಡ ಅಷ್ಟೇ ದೊಡ್ಡ ತಪ್ಪು, ಮೊದಲೆಲ್ಲಾ ವರದಕ್ಷಿಣೆ ಇಂತಿಷ್ಟು ಬೇಕು ಎಂದು ನೇರವಾಗಿ ಕೇಳಿ ಪಡೆಯುತ್ತಿದ್ದರು, ಆದರೆ ಈಗೀಗ ನನಗೇನು ಬೇಡ, ಏನಾದರೂ ಕೊಡುವುದಿದ್ದರೆ ನಿಮ್ಮ ಮಗಳಿಗೆ ಕೊಡಿ, ನಿಮ್ಮ ಮಗಳು ಖುಷಿಯಾಗಿರಬೇಕಲ್ಲಾ ಎಂದು ಹೇಳಿ ಪಡೆಯುತ್ತಾರೆ.
ಹಾಗೆಯೇ ಇಲ್ಲೊಬ್ಬ ವರ ವಧುವಿನ ತಂದೆಯ ಬಳಿ ವರದಕ್ಷಿಣೆಯಾಗಿ ಬೈಕ್ ಒಂದನ್ನು ಕೇಳಿದ್ದಾರೆ, ಅದಕ್ಕೆ ಕೋಪಗೊಂಡ ಮಾವ ಅಳಿಯನಿಗೆ ಚಪ್ಪಲಿಯಲ್ಲಿ ಹಿಗ್ಗಾಮುಗ್ಗ ಥಳಿಸಿದ್ದಾರೆ.
वाह ससुर जी…दामाद जी ने मोटरसाइकिल क्या मांगी, पिल पड़े चप्पल उतारकर….आनंद लीजिए पर दहेज नहीं….. @mmanishmishra @sanjayjourno @Shailendra_Mona pic.twitter.com/WQdOtojc5r
— manoj pamar (@ManojPamar) May 8, 2023
ಈ ವೈರಲ್ ವೀಡಿಯೊದಲ್ಲಿ, ಹುಡುಗಿಯ ತಂದೆ ವರನನ್ನು ತನ್ನ ಕಾಲರ್ ಹಿಡಿದು ಥಳಿಸುತ್ತಿರುವುದನ್ನು ನೀವು ನೋಡಬಹುದು.
ಈ ಸಮಯದಲ್ಲಿ, ಅಳಿಯನನ್ನು ಉಳಿಸಲು ಅನೇಕರು ಪ್ರಯತ್ನಿಸುತ್ತಾರೆ. ಇದರ ನಂತರ, ವರನು ತನ್ನ ವಧುವಿನ ಕೈಯನ್ನು ಹಿಡಿದುಕೊಂಡು ಮುಂದೆ ಸಾಗಲು ಪ್ರಾರಂಭಿಸುತ್ತಾನೆ ಮತ್ತು ತಪ್ಪಾಯಿತು ಎಂದು ಹೇಳುತ್ತಾನೆ.
ಮತ್ತಷ್ಟು ಓದಿ: ತುಮಕೂರು: ಪತ್ನಿಗೆ ವರದಕ್ಷಿಣೆ ತರುವಂತೆ ಕಿರುಕುಳ; ಪತಿ ಸೇರಿ ಐವರ ವಿರುದ್ಧ ಪ್ರಕರಣ ದಾಖಲು
ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ
ಕೆಲವರು ಈ ವೀಡಿಯೊವನ್ನು ಸ್ಕ್ರಿಪ್ಟೆಡ್ ಎಂದು ಕರೆಯುತ್ತಿದ್ದಾರೆ. ವರನ ಈ ವರ್ತನೆಯನ್ನು ಕೆಲವರು ಖಂಡಿಸಿದ್ದಾರೆ. ಒಬ್ಬ ಬಳಕೆದಾರ, ವರದಕ್ಷಿಣೆಯನ್ನು ವಿರೋಧಿಸಿ,ಅದನ್ನು ಬೆಂಬಲಿಸಬೇಡಿ’ ಎಂದು ಹೇಳಿದ್ದಾರೆ. ಮತ್ತೊಬ್ಬರು ವರದಕ್ಷಿಣೆ ಕೇಳುವವರ ಸ್ಥಿತಿ ಬದಲಾಗಬೇಕು ಎಂದಿದ್ದಾರೆ.
ಕೆಲವರು ಕೇವಲ ವರದಕ್ಷಿಣೆ ಬಗ್ಗೆ ಮಾತ್ರ ಯಾಕೆ ಮಾತನಾಡುತ್ತೀರಿ, ಈಗೀಗ ಹೆಣ್ಣುಮಕ್ಕಳು ವರನ ಸಂಬಳ ಎಷ್ಟಿದೆ, ಕೆಲಸ ಎಂಥದ್ದು, ಸ್ಯಾಲರಿ ಸ್ಲಿಪ್ ಹೀಗೆ ಎಲ್ಲವನ್ನೂ ಕೇಳುತ್ತಾರೆ ಎಂದಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:23 pm, Tue, 16 May 23