ಪಕ್ಷಿಗಳ ಹಿಂಡಿನ ನಡುವೆ ಅಡಗಿರುವ 4 ಪಾರಿವಾಳಗಳ ಗುರುತಿಸಿ

Brain Teaser : ಅನೇಕರು ನಾನು ನಾಲ್ಕು ಪಾರಿವಾಳವನ್ನು ಹುಡುಕಿದೆ ಎಂದು ಹೇಳಿದ್ದಾರೆ. ಕೆಲವರು ನಾನು ತುಂಬಾ ಸಮಯದ ನಂತರ ಹುಡುಕಿದೆ ಎಂದಿದ್ದಾರೆ. ನೀವು?

ಪಕ್ಷಿಗಳ ಹಿಂಡಿನ ನಡುವೆ ಅಡಗಿರುವ 4 ಪಾರಿವಾಳಗಳ ಗುರುತಿಸಿ
ಎಲ್ಲಿ ಅಡಗಿವೆ ನಾಲ್ಕು ಪಾರಿವಾಳಗಳು
Follow us
TV9 Web
| Updated By: ಶ್ರೀದೇವಿ ಕಳಸದ

Updated on:May 16, 2023 | 3:43 PM

Viral Optical Illusion : ಆಗಾಗ ನೀವು ನಿಮ್ಮ ಬುದ್ಧಿಗೆ ಕಸರತ್ತು ಕೊಡುವ ಚಿತ್ರಗಳನ್ನು ನೋಡುತ್ತಿರುತ್ತೀರಿ, ಸವಾಲುಗಳಿಗೆ ಉತ್ತರಗಳನ್ನು ಕಂಡುಕೊಳ್ಳುತ್ತೀರಿ ಮತ್ತು ಪ್ರಯತ್ನಿಸುತ್ತಿರುತ್ತೀರಿ. ಅಲ್ಲವೇ? ಅವುಗಳನ್ನು ಚಿತ್ರಿಸುವ ಕಲಾವಿದ ಹಂಗೇರಿಯನ್​ನ ಗೆರ್ಗೆಲಿ ಡುಡಾಸ್. ಈ ಸಲ ಮತ್ತೊಂದು ಹೊಸ ಚಿತ್ರವನ್ನು ಅವರು ಅಂತರ್ಜಾಲದಲ್ಲಿ ಹರಿಬಿಟ್ಟಿದ್ದಾರೆ. ಇಲ್ಲಿರುವ ಪಕ್ಷಿಗಳ ಹಿಂಡಿನಲ್ಲಿ ನಾಲ್ಕು ಪಾರಿವಾಳಗಳನ್ನು ಅಡಗಿಸಿಟ್ಟಿದ್ದಾರೆ. ನೀವು ಎಂದಿನಂತೆ ಕಂಡುಹಿಡಿಯಬಲ್ಲಿರಾ? ಸಮಯದ ಮಿತಿ ಏನೂ ಇಲ್ಲ. ಆರಾಮಾಗಿ ಹುಡುಕಿ.

ಕಷ್ಟವಾಗುತ್ತಿದೆಯಾ? ನೆರೆದಿರುವ ನೂರಾರು ಪಕ್ಷಿಗಳ ಮಧ್ಯೆ ನಾಲ್ಕು ಪಾರಿವಾಳಗಳನ್ನು ಕಂಡು ಹಿಡಿಯುವುದು?ಊಟ ಮುಗಿಸಿ ಕಚೇರಿ ಕೆಲಸದಲ್ಲಿ ಮುಳುಗಿದ್ದೀರಿ ಅಥವಾ ಇನ್ನೇನೋ ಕೆಲಸದ ನಡುವೆ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೀರಿ. ತೂಕಡಿಕೆಯನ್ನು ಓಡಿಸಲು ಇದೊಂದು ಒಳ್ಳೆಯ ಉಪಾಯ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಪೋಸ್ಟ್​ಗೆ ಅನೇಕರು, ನಾನು ನಾಲ್ಕು ಪಾರಿವಾಳವನ್ನು ಹುಡುಕಿದೆ ಎಂದು ಹೇಳಿದ್ದಾರೆ. ನಾನು ತುಂಬಾ ಸಮಯದ ನಂತರ ನಾಲ್ಕು ಪಾರಿವಾಳಗಳನ್ನು ಹುಡುಕಿದೆ ಎಂದಿದ್ದಾರೆ ಕೆಲವರು. ಈಗ ನೀವಿಲ್ಲಿ ಹುಡುಕಲು ಸಾಧ್ಯವಾಗದೇ ಇದ್ದಲ್ಲಿ ಈ ಕೆಳಗಿನ ಚಿತ್ರವನ್ನು ನೋಡಿ.

The viral Brain Teaser find the 4 pigeon among all birds

ಉತ್ತರ ಇಲ್ಲಿದೆ

ಉತ್ತರ ಸಿಗಲಿ ಸಿಗದೇ ಇರಲಿ. ಆದರೆ ಅಷ್ಟು ಹೊತ್ತು ನೀವು ನಿಮ್ಮ ಮನಸ್ಸನ್ನು ನಿತ್ಯದ ಕೆಲಸಗಳಿಂದ ಹೊರತಾಗಿ ತೊಡಗಿಸಿಕೊಂಡಿದ್ದೀರಲ್ಲವೆ? ಯಂತ್ರದಂತೆ ಓಡುತ್ತಿದ್ದ ಮೆದುಳಿಗೆ ಸ್ವಲ್ಪ ಬ್ರೇಕ್​ ಕೊಟ್ಟು ವಿಶ್ರಾಂತಿ ಪಡೆದುಕೊಂಡಿರಲ್ಲವೆ? ಅದು ಮುಖ್ಯ. ಮತ್ತಷ್ಟು ಬ್ರೇನ್​ ಟೀಸರ್​​ಗಳೊಂದಿಗೆ ಸಿಗೋಣ.

ಇನ್ನಷ್ಟು ವೈರಲ್​ ವಿಡಿಯೋ ನೋಡಲು ಕ್ಲಿಕ್ ಮಾಡಿ

Published On - 3:42 pm, Tue, 16 May 23