ಅಮ್ಮ ಎಲ್ಲಿ ಹೋದಳೋ?; ಪರ್ವಾಗಿಲ್ಲ, ಫೀಡಿಂಗ್​ ಟಂಬ್ಲರಮ್ಮ ಇದಾಳಲ್ಲ

|

Updated on: May 16, 2023 | 1:26 PM

Kittens : ಅನಾಥ ಮರಿಗಳನ್ನು ಸಾಕುವವರೇ ಇತ್ತ ಗಮನಿಸಿ. ನಾಲ್ಕು ಬೆಕ್ಕಿನ ಮರಿಗಳು ಒಟ್ಟಿಗೇ ಹಾಲು ಕುಡಿಯಬಹುದು. ಬೆಕ್ಕಮ್ಮನ ಹೊಟ್ಟೆ, ಮೊಲೆಯಂಥ ವಿನ್ಯಾಸ, ಮೃದುತ್ವ ಇದಕ್ಕಿರುವುದರಿಂದ ಮರಿಗಳಿಗೂ ಭದ್ರಭಾವ. ನೋಡಿ ವಿಡಿಯೋ.

ಅಮ್ಮ ಎಲ್ಲಿ ಹೋದಳೋ?; ಪರ್ವಾಗಿಲ್ಲ, ಫೀಡಿಂಗ್​ ಟಂಬ್ಲರಮ್ಮ ಇದಾಳಲ್ಲ
ಇದೇ ನಮ್ಮಮ್ಮ!
Follow us on

Viral Video : ಪುಟ್ಟಮರಿಗಳನ್ನು ಮನೆಗೆ ತಂದಾಗ ಅಮ್ಮನಿಲ್ಲದೆಯೇ ಬೆಳೆಸಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಬೆಳೆದ ಮರಿಗಳು ಮನೆಗೆ ಹೊಂದಿಕೊಳ್ಳಲಾರವು ಎಂಬ ಕಾರಣದಿಂದಾಗಿ ಹೀಗೆ ಮಾಡುವುದು ಒಂದೆಡೆಯಾದರೆ, ಕೆಲವೊಮ್ಮೆ ಏನೋ ಕಾರಣದಿಂದಾಗಿ ಮರಿಗಳು ತಾಯಿಯಿಂದ ದೂರ ಇರಬೇಕಾದ ಪರಿಸ್ಥಿತಿ ಒದಗುತ್ತದೆ. ಆಗ ಎಳೇಮರಿಗಳನ್ನು ಪೋಷಿಸುವುದು ಸಾಕುವವರಿಗೆ ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಈ ಕೆಳಗಿನ ವಿಡಿಯೋ ನೋಡಿ, ಎಲ್ಲದಕ್ಕೂ ಪರ್ಯಾಯ ಎನ್ನುವುದೊಂದು ಇರುತ್ತದೆಯಲ್ಲ!

ಎಂಥ ಮುದ್ದಾದ ಮರಿಗಳಲ್ಲ, ತನ್ನ ತಾಯಿಯ ಮೊಲೆಯೇನೋ ಎಂಬಂತೆ ತನ್ಮಯತೆಯಿಂದ ಹಾಲು ಕುಡಿಯುತ್ತಿವೆ. ಪುಟ್ಟಪುಟ್ಟ ಮೊಲೆಯಾಕಾರದ ಈ ಹಾಲೂಡಿಸುವ ಪಾತ್ರೆ ಎಂಬ ಅರಿವೂ ಅವಕ್ಕಿಲ್ಲ. ಅಮ್ಮನ ಆಪ್ತ, ಭದ್ರ, ಬೆಚ್ಚಗಿನ ಸ್ಪರ್ಶವನ್ನೇ ನೀಡುವಂಥ ವಿನ್ಯಾಸ ಇದಕ್ಕಿದೆ. ಎರಡೂ ಕೈಗಳನ್ನು ಹಿಡಿದು ಹಾಲನ್ನು ಹೀರುವ ಈ ಪರಿ ಎಂಥ ಮುದ್ದಾಗಿದೆಯಲ್ಲ.

ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಕ್ಯೂಟ್​ ಕ್ಯಾಟ್ಸ್​ ಪುಟದಲ್ಲಿ ಈ ವಿಡಿಯೋದ ಒಕ್ಕಣೆ ಹೀಗಿದೆ, ‘ಇವು ನನ್ನ ಬೆಕ್ಕುಗಳಲ್ಲ. ಆದರೆ ಈ ವಿಡಿಯೋ ಬಹಳ ಮುದ್ದಾಗಿದೆ ಮತ್ತಿದನ್ನು ಯಾಕೆ ಹಂಚಿಕೊಂಡೆನೆಂದರೆ,  ತಾಯಿ ಇಲ್ಲದ ಮರಿಗಳನ್ನು ಸಾಕುತ್ತಿರುವರಿಗೆ ಇದು ಪ್ರಯೋಜನವಾಗಬಹುದು ಎಂದು’

ಆದರೆ ಯಾರೋ ಒಬ್ಬರು ಈ ವಿಡಿಯೋದ ಮೂಲವನ್ನು ಪತ್ತೆ ಹಚ್ಚಿ ಪ್ರೊಫೈಲ್ ಟ್ಯಾಗ್ ಮಾಡಿದ್ದಾರೆ. ಆ ಪ್ರೊಫೈಲಿನ ಒಡತಿ ರಾಚೆಲ್​ ವಲ್ಲಾಚ್​, ‘ ಫೇಸ್​ಬುಕ್​ನಲ್ಲಿ ಅನಾಥ ಬೆಕ್ಕಿನಮರಿಗಳಿಗಾಗಿ ಇರುವ ಗ್ರೂಪ್​ನಲ್ಲಿ ನಾನಿದ್ದೇನೆ. ಅಲ್ಲಿ ನನ್ನ ಈ ಬೆಕ್ಕಿನ ಮರಿಗಳ ವಿಡಿಯೋ ಪೋಸ್ಟ್ ಮಾಡಿದೆ. ಆದರೆ ಸಾಕಷ್ಟು ಜನ ಋಣಾತ್ಮಕವಾಗಿ ಪ್ರತಿಕ್ರಿಯಿಸಿದರು. ಆದರೆ ನನಗಂತೂ ಈ ಉಪಾಯ ಅತ್ಯಂತ ಉಪಯುಕ್ತ ಎನ್ನಿಸಿತು’ ಎಂದಿದ್ದಾರೆ.

ಈ ವಿಡಿಯೋ ಅನ್ನು ಇನ್​ಸ್ಟಾಗ್ರಾಂನಲ್ಲಿ ನೋಡಿದ ನೆಟ್ಟಿಗರು, ಖಂಡಿತ ಇದು ಬೆಕ್ಕಿನ ಮರಿಗಳಿಗೆ ಅನುಕೂಲಕರವಾಗಿದೆ. ಒಂದೇಸಲಕ್ಕೆ ತಾವಾಗಿಯೇ ಬೆಕ್ಕಿನ ಮರಿಗಳು ಹಾಲನ್ನು ಕುಡಿಯಬಹುದು ಎಂದಿದ್ದಾರೆ ಒಬ್ಬರು. ಇನ್ನೂ ಒಬ್ಬರು, ಯಾವ ಹಾಲನ್ನು ಕೊಡುತ್ತೀರಿ ಎಂದು ಕೇಳಿದ್ದಾರೆ. ಏಕೆಂದರೆ ಎಳೆಮಗು ಅಥವಾ ಮರಿಗಳಿಗೆ ಹಸುವಿನ ಹಾಲನ್ನು ಅರಗಿಸಿಕೊಳ್ಳುವಷ್ಟು ಜೀರ್ಣಶಕ್ತಿ ಇರುವುದಿಲ್ಲ.

ಇದನ್ನೂ ಓದಿ : ಬೆಕ್ಕನ್ನು ಹುಡುಕಲು ಹೋಗಿ ತಲೆತಿರುಗಿತು, ಅಷ್ಟರಲ್ಲಿ ಬೆಕ್ಕು ಓಡಿಹೋಯಿತು; ಹೌದೆ?

ಒಟ್ಟಿನಲ್ಲಿ ಈ ಫೀಡಿಂಗ್ ಟಂಬ್ಲರ್​ ಬಹಳಷ್ಟು ಇನ್​ಸ್ಟಾಗ್ರಾಮಿಗಳ ಮೆಚ್ಚುಗೆಗೆ ಕಾರಣವಾಗಿದೆ. ಇದು ಎಲ್ಲಿ ಸಿಗುತ್ತದೆ ಎಂದು ಅನೇಕರು ಕೇಳಿದ್ದಾರೆ. ಆಗ ರಾಚೆಲ್ ಅಮೇಝಾನ್​ನಲ್ಲಿ ಲಭ್ಯ ಎಂದಿದ್ದಾರೆ. ಆದರೂ ಯಾಕೆ ಉಳಿದ ನೆಟ್ಟಿಗರು ಈ ಉಪಾಯವನ್ನು ಇಷ್ಪಡುತ್ತಿಲ್ಲವೋ. ತಾಯಿ ಇಲ್ಲದ ಅಥವಾ ತಾಯಿಯಿಂದ ದೂರಾದ ಜೀವವನ್ನು ಉಳಿಸಿ ಬೆಳೆಸುವುದು ಮುಖ್ಯ ಅಲ್ಲವೆ. ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:53 pm, Tue, 16 May 23