Viral Video: ದೈತ್ಯಾಕಾರದ ಹೆಬ್ಬಾವನ್ನು ಭುಜದ ಮೇಲೆ ಹೊತ್ತು ತಿರುಗಾಡಿದ ವ್ಯಕ್ತಿ!

ದೈತ್ಯ ಹೆಬ್ಬಾವನ್ನು ವ್ಯಕ್ತಿಯೊಬ್ಬರು ಭುಜದ ಮೇಲೆ ಹೊತ್ತುಕೊಂಡು ತಿರುಗಾಡಿರುವುದು ಕಂಡುಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗುತ್ತಿದೆ.

Viral Video: ದೈತ್ಯಾಕಾರದ ಹೆಬ್ಬಾವನ್ನು ಭುಜದ ಮೇಲೆ ಹೊತ್ತು ತಿರುಗಾಡಿದ ವ್ಯಕ್ತಿ!
ಹೆಬ್ಬಾವನ್ನು ಭುಜದ ಮೇಲೆ ಹೊತ್ತ ವ್ಯಕ್ತಿ
Edited By:

Updated on: Jun 11, 2022 | 12:12 PM

ಭಾರತಕ್ಕಿಂತ ವಿದೇಶಗಳಲ್ಲಿ ಜನರಿಗೆ ಹಾವುಗಳ ಮೇಲೆ ಪ್ರೀತಿ ಹೆಚ್ಚಿಸುತ್ತದೆ. ಕೆಲವರು ತಮ್ಮ ಮನೆಯಲ್ಲಿಯೇ ಹಾವುಗಳನ್ನು ಸಾಕುತ್ತಾರೆ. ಈ ಪೈಕಿ ಕೆಲವರು ದೈತ್ಯಾಕಾರದ ಹೆಬ್ಬಾವುಗಳನ್ನು ಸಾಕುತ್ತಾರೆ ಮತ್ತು ಅವುಗಳೊಂದಿಗೆ ಉತ್ತಮ ಒಡನಾಡಿಯನ್ನು ಹೊಂದಿರುತ್ತಾರೆ. ಇದೀಗ ದೈತ್ಯ ಹೆಬ್ಬಾವ(Python)ನ್ನು ವ್ಯಕ್ತಿಯೊಬ್ಬರು ಭುಜದ ಮೇಲೆ ಹೊತ್ತುಕೊಂಡು ತಿರುಗಾಡಿರುವುದು ಕಂಡುಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ (Video Viral) ಆಗುತ್ತಿದೆ.

ಇದನ್ನೂ ಓದಿ: Viral Video: ಚಲಿಸುತ್ತಿದ್ದ ರೈಲಿಗೆ ಹತ್ತಲು ಹೋದ ವ್ಯಕ್ತಿ! ಮುಂದೇನಾಯ್ತು? ನೀವೇ ನೋಡಿ

ಜೂನ್ 9 ರಂದು Snake._.world ಎಂಬ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ವೈರಲ್ ವಿಡಿಯೋ ಇದುವರೆಗೆ 1500ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ನಾವು ವೀಡಿಯೊದಲ್ಲಿ ನೋಡುವಂತೆ, ಒಬ್ಬ ವ್ಯಕ್ತಿ ತನ್ನ ಭುಜದ ಮೇಲೆ ದೈತ್ಯ ಹೆಬ್ಬಾವನ್ನು ಹೊತ್ತುಕೊಂಡು ಮೃಗಾಲಯದಂತೆ ತೋರುವ ಒಳಾಂಗಣ ಸ್ಥಳದ ಇತರ ಕೋಣೆಗೆ ಕೊಂಡೊಯ್ಯುತ್ತಾನೆ.

ವಿಡಿಯೋ ವೀಕ್ಷಿಸಿ:

ಇದನ್ನೂ ಓದಿ: Viral Video: ಹೆಚ್ಚು ಕಿರುಚಾಡಿದರೆ ಕೋಳಿಯಂತಾಗುವುದು ಕೇಳು ಮನುಜ, ಸಮಾಜಕ್ಕೊಂದು ಒಳ್ಳೆಯ ಪಾಠ

ಕುತೂಹಲಕಾರಿ ಸಂಗತಿಯೆಂದರೆ,  ಭುಜದ ಮೇಲೆ ಹೊತ್ತುಕೊಂಡು ಹೋಗುತ್ತಿದ್ದಾಗಲೂ ಹಳದಿ ಬಣ್ಣದಂತೆ ಕಾಣುವ ಆ ಹೆಬ್ಬಾವು ಶಾಂತವಾಗಿದೆ. ಆ ವ್ಯಕ್ತಿಯು ಹೊತ್ತುಕೊಂಡು ತಿರುಗಾಡುತ್ತಿದ್ದ ಹೆಬ್ಬಾವಿನೊಂದಿಗೆ ಉತ್ತಮ ಸಂಬಂಧ ಹೊಂದಿದ್ದ ಮತ್ತು ನಿಯಮಿತವಾಗಿ ಆ ರೀತಿ ಹೊತ್ತುಕೊಂಡು ತಿರುಗಾಡುತ್ತಾನೆ ಎಂದು ತೋರುತ್ತದೆ. ಜೊತೆಗೆ ಮನುಷ್ಯನೊಂದಿಗೆ ಆ ಹಾವು ಚೆನ್ನಾಗಿ ಹೊಂದಿಕೊಂಡಿದೆ ಎಂದು ತಿಳಿಯುತ್ತದೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ