ಕೊವಿಡ್ ಸಾಂಕ್ರಾಮಿಕ ಹರಡುವಿಕೆಯು ಡಿಜಿಟಲ್ಗೆ ತೀವ್ರವಾಗಿ ಹೊಂದಿಕೊಳ್ಳುವಂತೆ ಮಾಡಿತು. ಆಫೀಸ್ ಕೆಲಸಗಳು, ಆನ್ಲೈನ್ ಕ್ಲಾಸ್ ಹೀಗೆ ಎಲ್ಲವೂ ಮನೆಯಲ್ಲಿಯೇ ಕುಳಿತು ಮಾಡುವಂತಹ ಪರಿಸ್ಥಿತಿ ಎದುರಾಯಿತು. ಈಗೆಲ್ಲಾ ಪ್ರತಿಯೊಂದಕ್ಕೂ ಪಾಸ್ವರ್ಡ್ ಬೇಕೇಬೇಕು. ನಿಮ್ಮ ಪ್ರೊಫೈಲ್, ಡೀಟೇಲ್ಸ್, ಲೆಕ್ಕಪತ್ರ ಎಲ್ಲವೂ ಲೀಕ್ ಆಗದೇ ಸುರಕ್ಷತೆ ಕಾಯ್ದುಕೊಳ್ಳಲು ಪಾಸ್ವರ್ಡ್ ಅಗತ್ಯವಿದೆ. ನೀವು ಗೌಪ್ಯವಾಗಿಟ್ಟಿರುವ ಪಾಸ್ವರ್ಡ್ ಎಷ್ಟು ಸೇಫ್? ಹೀಗಿರುವಾಗ ನಾರ್ಡ್ಪಾಸ್ ಸಂಸ್ಥೆಯ ಹೊಸ ಅಧ್ಯಯನವು, ಭಾರತದಲ್ಲಿ ಸಾಮಾನ್ಯವಾಗಿ ಬಳಸುವ ಪಾಸ್ವರ್ಡ್ ಯಾವುದು ಎಂಬುದನ್ನು ಬಹಿರಂಗಪಡಿಸಿದೆ. ಸುಲಭವಾಗಿ ಕಂಡುಹಿಡಿಯಲು ಸಾಧ್ಯವಾಗದ ಪಾಸ್ವರ್ಡ್ಗಳ ಆಯ್ಕೆಗಳನ್ನು ಹೊಂದಿರಿ ಎಂಬುದರ ಕುರಿತಾಗಿ ಪೊಲೀಸ್ ಇಲಾಖೆ ಎಚ್ಚರಿಸುತ್ತಿರುವ ಹೊರತಾಗಿಯೂ ಸುಲಭದಲ್ಲಿ ಕಂಡುಹಿಡಿಯಬಹುದಾದ ಪಾಸ್ವರ್ಡ್ಗಳ ಬಳಕೆಯಾಗುತ್ತಿದೆ ಎಂದು ಅಧ್ಯಯನ ತಿಳಿಸಿದೆ.
ನಾರ್ಡ್ಪಾಸ್, ದೇಶಾದ್ಯಂತ 50 ಪಾಸ್ವರ್ಡ್ಗಳನ್ನು ಪಟ್ಟಿ ಮಾಡಿದೆ. ಭಾರತದಲ್ಲಿ Password ಎಂಬುದು ಅತ್ಯಂತ ಸಾಮಾನ್ಯವಾಗಿ ಬಳಸುವ ಪಾಸ್ವರ್ಡ್. ಈ ನಂತರದಲ್ಲಿ 12345, 123456, 123456789, 12345678, India123, 1234567890, 1234567 ಮತ್ತು abc123 ಎಂದು ತಿಳಿದು ಬಂದಿದೆ.
ನಾರ್ಡ್ಪಾಸ್ ಸಂಸ್ಥೆಯ ವರದಿಯ ಪ್ರಕಾರ, India123 ಅನ್ನು ಹೊರತುಪಡಿಸಿ ಈ ಎಲ್ಲಾ ಪಾಸ್ವರ್ಡ್ಗಳನ್ನು ಒಂದು ಸೆಕೆಂಡಿಗಿಂತ ಕಡಿಮೆ ಅವಧಿಯಲ್ಲಿ ಹ್ಯಾಕ್ ಮಾಡಬಹುದು. India123 ಎಂಬ ಪಾಸ್ವರ್ಡ್ಅನ್ನು ಭೇದಿಸಲು 17 ನಿಮಿಷಗಳು ತೆಗೆದುಕೊಳ್ಳುತ್ತದೆ. ಪಾಸ್ವರ್ಡ್ ಹ್ಯಾಕ್ ಆಗುವ ಸಮಯ ಸೂಚಕವಾಗಿದ್ದರೂ ಪಾಸ್ವರ್ಡ್ ಬಗ್ಗೆ ಎಷ್ಟು ಜಾಗರೂಕರಾಗಿರಬೇಕು ಎಂಬ ಕಲ್ಪನೆಯನ್ನು ಜನರಿಗೆ ನೀಡುತ್ತದೆ ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ಪಾಸ್ವರ್ಡ್ ನಾವು ಹೊಂದಿಕೊಂಡ ಡಿಜಿಟಲ್ ಜೀವನಕ್ಕೆ ಗೇಟ್ವೇ ಇದ್ದಹಾಗೆ ಎಂಬುದನ್ನು ಅರ್ಥ ಮಾಡಿಕೊಳ್ಳಲೇಬೇಕು. ನಾವು ಹೆಚ್ಚು ಸಮಯ ಆನ್ಲೈನ್ನಲ್ಲಿ ಕಳೆಯುವುದು ಜೊತೆಗೆ ನಮ್ಮ ಸೈಬರ್ ಸುರಕ್ಷತೆಯನ್ನು ನೋಡಿಕೊಳ್ಳುವುದು ಅಷ್ಟೇ ಮುಖ್ಯ ಎಂದು ನಾರ್ಡ್ಪಾಸ್ ಸಿಇಒ ಜೋನಾಸ್ ಕಾಕ್ಲಿರ್ಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ದುರಾದೃಷ್ಟವಾಶಾತ್ ಪಾಸ್ವರ್ಡ್ಗಳು ಹೆಚ್ಚು ದುರ್ಬಲವಾಗುತ್ತಲೇ ಇರುತ್ತಿವೆ. ಜನರು ಇನ್ನೂ ಸರಿಯಾದ ಪಾಸ್ವರ್ಡ್ ಬಳಕೆ ಮಾಡುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ದೇಶದಲ್ಲಿ ಸಾಮಾನ್ಯವಾಗಿ ಬಳಸಲ್ಪಟ್ಟ 50 ಪಾಸ್ವರ್ಡ್ಗಳನ್ನು ಪಟ್ಟಿಮಾಡಲಾಗಿದೆ. ಜಾಗತಿಕವಾಗಿ ಅತಿ ಹೆಚ್ಚು ಬಳಕೆಯಲ್ಲಿದ್ದು ಮೂರು ಸ್ಥಾನಗಳನ್ನು ಪಡೆದುಕೊಂಡ ಸಾಮಾನ್ಯ ಬಳಕೆಯ ಪಾಸ್ವರ್ಡ್ಗಳು ಹೀಗಿವೆ; 123456, 123456789 ಮತ್ತು 12345.
ನಿಮ್ಮ ಡಿಜಿಟಲ್ ಸುಕ್ಷತೆಯ ದೃಷ್ಟಿಯಿಂದ ಪಾಸ್ವರ್ಡ್ ಹೆಚ್ಚು ಬಲವಾಗಿದ್ದಷ್ಟು ನಿಮಗೆ ಸುರಕ್ಷಿತ. ಹೀಗಿರುವಾಗ ಆನ್ಲೈನ್ ಮೂಲಕವೂ ಪೊಲೀಸ್ ಇಲಾಖೆ ಜನರನ್ನು ಎಚ್ಚರಿಸುವ ಸಂದೇಶವನ್ನು ಸಾರುತ್ತಿವೆ. ಅವುಗಳಲ್ಲಿ ಮುಂಬೈ ಪೊಲೀಸ್ ಇಲಾಖೆ ಕೂಡಾ ಒಂದು. ಜನರಿಗೆ ಪಾಸ್ವರ್ಡ್ ಬಗ್ಗೆ ಹೆಚ್ಚು ಅರಿವು ಮೂಡಿಸಲು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಕೆಲವು ಪೋಸ್ಟ್ಗಳು ಈ ಕೆಳಗಿನಂತಿವೆ;
Hackers, when they get access to an account due to a weak password: pic.twitter.com/ueCM4braay
— Mumbai Police (@MumbaiPolice) March 13, 2021
Update your ‘aam’ password to the ‘King of all passwords!’ #NoAamPasswords pic.twitter.com/whjiL1bPAC
— Mumbai Police (@MumbaiPolice) May 31, 2020
Dear #binod , we hope your name is not your online password. It’s pretty viral, change it now! #OnlineSafety
— Mumbai Police (@MumbaiPolice) August 7, 2020
Published On - 2:52 pm, Fri, 19 November 21