ಸೃಷ್ಟಿಯ ಕಾರ್ಯವು ಯಥವತ್ತಾಗಿ ನಡೆಯಲೆಂದು ಹೆಣ್ಣು ಹಾಗೂ ಗಂಡಿನಲ್ಲಿ ಒಂದಷ್ಟು ಬಯಕೆಗಳನ್ನು ನೀಡಿದ್ದಾನೆ. ಆದರೆ ಕೆಲವರು ತಮ್ಮ ಲೈಂಗಿಕ ತೃಷೆಯನ್ನು ಈಡೇರಿಸಲು ಹೋಗಿ ಎಡವಟ್ಟುಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಆಸ್ಟ್ರೇಲಿಯಾದ ವೃದ್ಧರೊಬ್ಬರು ತಮ್ಮ ಲೈಂಗಿಕ ತೃಪ್ತಿಗಾಗಿ ಬ್ಯಾಟರಿಯನ್ನು ಶಿಶ್ನದೊಳಗೆ ಸಿಲುಕಿಕೊಂಡ ಘಟನೆಯೊಂದು ಬೆಳಕಿಗೆ ಬಂದಿದೆ. ತಾತ್ಕಾಲಿಕ ಲೈಂಗಿಕ ತೃಪ್ತಿ ಪಡೆಯುವುದಕ್ಕಾಗಿ ಎಡವಟ್ಟು ಮಾಡಿಕೊಂಡು ವೃದ್ಧರು ಆಸ್ಪತ್ರೆ ಸೇರಿದ್ದಾರೆ. ಹೌದು, 73 ವರ್ಷದ ವೃದ್ಧ ತನ್ನ ಲೈಂಗಿಕ ತೃಪ್ತಿಗಾಗಿ ಬಟನ್ ಶೈಲಿಯ ಬ್ಯಾಟರಿಗಳನ್ನು ತನ್ನ ಶಿಶ್ನಕ್ಕೆ ಅಳವಡಿಸಿಕೊಂಡಿದ್ದಾನೆ. ಆದರೆ ಆ ಬ್ಯಾಟರಿಯು ಶಿಶ್ನದಲ್ಲಿಯೇ ಸಿಲುಕಿದ್ದು, ಶಸ್ತ್ರ ಚಿಕಿತ್ಸೆಯ ಮೂಲಕ ಬ್ಯಾಟರಿಯನ್ನು ತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.
ಈ ಘಟನೆಗೆ ಸಂಬಂಧ ಪಟ್ಟಂತೆ ವೈದ್ಯಕೀಯ ಅಧ್ಯಯನದ ಪ್ರಕಾರ, ವ್ಯಕ್ತಿ ತನ್ನ ಶಿಶ್ನ ಮೂತ್ರನಾಳಕ್ಕೆ ಬ್ಯಾಟರಿಗಳನ್ನು ಉದ್ದೇಶಪೂರ್ವಕವಾಗಿ ತಳ್ಳುವ ಮೂಲಕ ತನ್ನದೇ ಆದ ಲೈಂಗಿಕ ತೃಪ್ತಿಯನ್ನು ಅನುಭವಿಸುತ್ತಿದ್ದನು. ಈ ಸಂದರ್ಭದಲ್ಲಿ ಬ್ಯಾಟರಿಗಳು ಮೂತ್ರನಾಳದಲ್ಲಿಯೇ ಸಿಲುಕಿಕೊಂಡಿವೆ. ಮೂತ್ರನಾಳ ನೈಕ್ರೋಸಿಸ್‌ನ ಮೊದಲ ಕೇಸ್ ಎಂದು ತಜ್ಞರು ತಿಳಿಸಿದ್ದಾರೆ.
ಈ ರೀತಿಯ ಎಡವಟ್ಟುಗಳನ್ನು ಮಾಡಿಕೊಳ್ಳಬಾರದು. ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಇಂತಹ ಯಡವಟ್ಟುಗಳನ್ನು ಮಾಡಿಕೊಳ್ಳುವುದರಿಂದ ಗ್ಯಾಂಗ್ರಿನ್ ಸಂಭವಿಸುವ ಸಾಧ್ಯತೆಯು ಅಧಿಕವಾಗಿದೆ. ಈ ರೀತಿಯ ಸೂಕ್ಷ್ಮ ಪ್ರದೇಶಗಳಿಗೆ ವಸ್ತುಗಳನ್ನು ಹಾಕಿಕೊಳ್ಳುವುದರಿಂದ ಮಾರಣಾಂತಿಕ ಕಾಯಿಲೆ ಸಂಭವಿಸಬಹುದು ಎಂದಿದ್ದಾರೆ ವೈದ್ಯರು.
ಇದನ್ನೂ ಓದಿ: ಹಾವುಗಳಿರುವ ಪೆಟ್ಟಿಗೆಯೊಳಗೆ ಕುಳಿತಿರುವ ಎಂಟೆದೆ ಭಂಟ, ಇಲ್ಲಿದೆ ನೋಡಿ ಭಯಾನಕ ವಿಡಿಯೋ
ಹಲವಾರು ವಿಧಾನಗಳು ವಿಫಲವಾದ ಬಳಿಕ ವೈದ್ಯರು ಅಂತಿಮವಾಗಿ ಫೋರ್ಸ್ಪ್ಸ್ ಬಳಸಿ ಬ್ಯಾಟರಿಗಳನ್ನು ತೆಗೆದುಹಾಕಲು ಸಾಧ್ಯವಾಯಿತು. “ಎಲ್ಲಾ ಹೊರತೆಗೆಯಲಾದ ಬ್ಯಾಟರಿಗಳು ಕಪ್ಪು ಟಾರ್ ತರಹದ ವಸ್ತುಗಳಿಂದ ಲೇಪಿತವಾಗಿವೆ” ಎಂದು ಅಧ್ಯಯನದಿಂದ ತಿಳಿದು ಬಂದಿದೆ. ಮತ್ತೆ ಆ ವೃದ್ದನು ಆಸ್ಪತ್ರೆಗೆ ಬಂದು ವೈದರ ಬಳಿ ಊತ ಎನ್ನುತ್ತಿದ್ದಂತೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. “ಮನುಷ್ಯನ ಮೂತ್ರನಾಳದ ಭಾಗವನ್ನು ತೆಗೆಯಬೇಕಿತ್ತು. ಔಪಚಾರಿಕ ಶಿಶ್ನ ಮೂತ್ರನಾಳ ಜೀವಗೊಳಿಸಲು 3-ಹಂತದ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ ಎಂದು ಪರಿಗಣಿಸಲಾಗಿದೆ” ಎಂದು ತಜ್ಞರು ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ