Viral Video: ಮುದ್ದು ಮರಿಗಳೊಂದಿಗೆ ತಾಯಿ ಹುಲಿಯ ಆಟ; ಕ್ಯಾಮೆರಾದಲ್ಲಿ ಸೆರೆಯಾಯಿತು ಮಮತೆಯ ದೃಶ್ಯ

ಸೋಷಿಯಲ್ ಮೀಡಿಯಾದಲ್ಲಿ ಪ್ರಾಣಿ ಸಾಮ್ರಾಜ್ಯಕ್ಕೆ ಸಂಬಂಧಿಸಿದ ಮುದ್ದಾದ ವಿಡಿಯೋಗಳು ಪ್ರತಿನಿತ್ಯ ಹರಿದಾಡುತ್ತಿರುತ್ತವೆ. ಸದ್ಯ ಅಂತಹದ್ದೇ ವಿಡಿಯೋ ಇದೀಗ ವೈರಲ್ ಆಗಿದ್ದು, ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿನ  ರಿದ್ದಿ ಹೆಸರಿನ ಹುಲಿಯು ತನ್ನ  ಮರಿಗಳೊಂದಿಗೆ ಆಟ, ತುಂಟಾಟವಾಡುತ್ತಾ ಸಮಯ ಕಳೆದಿದೆ.  ಈ ಕ್ಯೂಟ್  ವಿಡಿಯೋ  ಪ್ರಾಣಿ ಪ್ರಿಯರ ಗಮನ ಸೆಳೆಯುತ್ತಿದೆ. 

Viral Video: ಮುದ್ದು ಮರಿಗಳೊಂದಿಗೆ ತಾಯಿ ಹುಲಿಯ ಆಟ; ಕ್ಯಾಮೆರಾದಲ್ಲಿ ಸೆರೆಯಾಯಿತು ಮಮತೆಯ ದೃಶ್ಯ
Edited By:

Updated on: Apr 27, 2024 | 3:53 PM

ಮನುಷ್ಯರು ಮಾತ್ರವಲ್ಲ  ಪ್ರಾಣಿಗಳು ಕೂಡಾ ತಮ್ಮ ಪುಟಾಣಿ ಮರಿಗಳನ್ನು ಮುದ್ದಾಡುತ್ತವೆ, ಅವುಗಳೊಂದಿಗೆ ಆಟವಾಡುತ್ತಾ ಸಮಯ ಕಳೆಯುತ್ತವೆ.  ಈ ಪ್ರಾಣಿಗಳ ಮುದ್ದಾದ ಆಟವನ್ನು  ನೋಡುವುದೇ ಚೆಂದ ಅಲ್ವಾ. ಹೌದು ಮೂಕ ಪ್ರಾಣಿಗಳ ಆಟ ತುಂಟಾಟ ನಮ್ಮ ಮನಸ್ಸಿಗೆ ಒಂದು ರೀತಿಯ ಮುದವನ್ನು ನೀಡುತ್ತದೆ. ಪ್ರಾಣಿಗಳಿಗೆ ಸಂಬಂಧಿಸಿದ ಇಂತಹ ಮುದ್ದಾದ ದೃಶ್ಯಾವಳಿಗಳು  ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಸದ್ಯ ಅಂತಹದ್ದೇ ವಿಡಿಯೋವೊಂದು ಇದೀಗ ಹರಿದಾಡುತ್ತಿದ್ದು, ತಾಯಿ ಹುಲಿಯೊಂದು ತನ್ನ ಮುದ್ದು ಮರಿಗಳ ಜೊತೆಗೂಡಿ ಆಟವಾಡಿದೆ. ಈ ಕ್ಯೂಟ್ ವಿಡಿಯೋ ಇದೀಗ ನೆಟ್ಟಿಗರ ಮನ ಸೆಳೆಯುತ್ತಿದೆ.

ತಾಯಿ ಹುಲಿ ತನ್ನ ಮರಿಗಳೊಂದಿಗೆ ಆಟವಾಡುತ್ತಿರುವಂತಹ ಈ ಮುದ್ದಾದ ದೃಶ್ಯವನ್ನು ರಾಜಸ್ಥಾನದಲ್ಲಿನ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ಸೆರೆಹಿಡಿಯಲಾಗಿದೆ. ಇಲ್ಲಿನ ರಿದ್ದಿ ಹೆಸರಿನ ಹೆಣ್ಣು ಹುಲಿ ಪ್ರಶಾಂತವಾದ ವಾತಾವರಣದಲ್ಲಿ ತನ್ನ ಎರಡು ಮರಿಗಳೊಂದಿಗೆ ಆಟವಾಡುತ್ತಾ ಸಮಯವನ್ನು ಕಳೆದಿದೆ. ತಾಯಿ ಮಕ್ಕಳ ನಡುವಿನ ಸುಂದರ ಬಾಂಧವ್ಯದ ಈ ಹೃದಯಸ್ಪರ್ಶಿ ದೃಶ್ಯವನ್ನು ವಿಷ್ಣು ಸಿಂಗ್ ರಾಥೋಡ್ ಎಂಬವರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

ಈ ವೈರಲ್ ವಿಡಿಯೋವನ್ನು ರಣಥಂಬೋರ್ ರಾಷ್ಟ್ರೀಯ ಉದ್ಯಾನವನದ (@ranthamborepark) ಅಧೀಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋ ರಿದ್ದಿ ಹೆಸರಿನ ಹೆಣ್ಣು ಹುಲಿಯು ಉದ್ಯಾನವನದಲ್ಲಿ ತನ್ನೆರಡು ಮರಿಗಳೊಂದಿಗೆ ಆಟವಾಡುತ್ತಾ, ಮೋಜು ಮಸ್ತಿ ಮಾಡುತ್ತಿರುವಂತಹ ಸುಂದರ ದೃಶ್ಯಾವಳಿಯನ್ನು ಕಾಣಬಹುದು.

ಇದನ್ನೂ ಓದಿ: ಓಲ್ಡ್​​​​​ ಇಸ್​​​ ಗೋಲ್ಡ್​​, ಹೇಗಿತ್ತು ನೋಡಿ 80-90ರ ದಶಕದ ಮದುವೆ ಸಂಭ್ರಮ 

ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ ಆರು ಸಾವಿರಕ್ಕೂ  ಹೆಚ್ಚಿನ ಲೈಕ್ಸ್ಗಳನ್ನು ಪಡೆದುಕೊಂಡಿದ್ದು, ತನ್ನ ಮುದ್ದು ಮರಿಗಳೊಂದಿಗೆ ತಾಯಿ ಹುಲಿ ಪ್ರಶಾಂತವಾಗಿ ಆಟವಾಡುತ್ತಿರುವ ಈ ಕ್ಯೂಟ್ ದೃಶ್ಯ ಪ್ರಾಣಿ ಪ್ರಿಯರ ಮನ ಗೆದ್ದಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ