Viral Video: ಓಲ್ಡ್ ಇಸ್ ಗೋಲ್ಡ್, ಹೇಗಿತ್ತು ನೋಡಿ 80-90ರ ದಶಕದ ಮದುವೆ ಸಂಭ್ರಮ
ಬಹುತೇಕ ಹೆಚ್ಚಿನವರು ಈ ತಂತ್ರಜ್ಞಾನದ ಯುಗಕ್ಕಿಂತ 80-90 ರ ದಶಕದ ಕಾಲಘಟ್ಟವೇ ನಿಜಕ್ಕೂ ತುಂಬಾನೇ ಚೆನ್ನಾಗಿತ್ತು ಅಂತ ಹೇಳ್ತಾರೆ. ಆಗಿನ ಕಾಲದಲ್ಲಿ ಮನೆಯಲ್ಲಿ ಒಂದು ಸಣ್ಣ ಕಾರ್ಯಕ್ರಮ ಏರ್ಪಡಿಸಿದ್ರೆ ಸಾಕು, ಎರಡು ಮೂರು ದಿನಕ್ಕಿಂತ ಮೊದಲೇ ಬಂಧು ಬಳಗದವರೆಲ್ಲಾ ಬಂದು ಆ ಸಂಭ್ರಮದ ಕಾರ್ಯಕ್ರಮದಲ್ಲಿ ಭಾಗಿಯಾಗ್ತಿದ್ರು. ಆದ್ರೆ ಈಗಿನ ಕಾಲದಲ್ಲಿ ಈ ಸಂಭ್ರಮ ಕಾಣಸಿಗುತ್ತಿಲ್ಲ. ಹೀಗೆ ಆಗಿನ ಕಾಲದಲ್ಲಿನ ಮದುವೆ ಸಮಾರಂಭ ಹೇಗಿದ್ದವು, ಅಲ್ಲಿ ಬಂಧು ಬಳಗದವರೆಲ್ಲರೂ ಹೇಗೆ ಎಂಜಾಯ್ ಮಾಡ್ತಿದ್ರೂ ಎಂದು ತೋರಿಸುವ ಹಾಗೂ 90 ರ ದಶಕದ ಸುಂದರ ಕ್ಷಣಗಳನ್ನು ನೆನಪಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
80-90 ರ ದಶಕದ ಕಾಲಘಟ್ಟವನ್ನು ಹಲವರು ಗೋಲ್ಡನ್ ಪೀರಿಯಡ್ ಅಂತ ಕರಿತಾರೆ. ಆಗಿನ ಕಾಲದಲ್ಲಿದ್ದ ಖುಷಿ, ನೆಮ್ಮದಿ, ಪ್ರೀತಿ, ಬಾಂಧವ್ಯ ಇಂದಿನ ಡಿಜಿಟಲ್ ಯುಗದಲ್ಲಿ ಕಾಣಸಿಗುವುದೇ ತೀರಾ ಅಪರೂಪವಾಗಿಬಿಟ್ಟಿದೆ. ಅದರಲ್ಲೂ ಅಂದಿನ ಕಾಲದಲ್ಲಿನ ಮದುವೆ ಇನ್ನಿತರ ಕಾರ್ಯಕ್ರಮದಲ್ಲಿ ಇದ್ದಂತಹ ಸಂಭ್ರಮ ಸಡಗರ ಇಂದಿನ ದಿನಗಳಲ್ಲಿನ ಕಾರ್ಯಕ್ರಮಗಳಲ್ಲಿ ಕಾಣಸಿಗುತ್ತಿಲ್ಲ. ಹೌದು ಈಗಂತೂ ಮದುವೆ, ಪೂಜೆ, ಯಾವುದೇ ಫಂಕ್ಷನ್ಸ್ ಇದ್ರೂ, ಜನರು ಆ ಸಂತೋಷದ ಕ್ಷಣವನ್ನು ಎಂಜಾಯ್ ಮಾಡದೇ ಮೊಬೈಲ್ ಅಲ್ಲಿಯೇ ಕಾಲ ಕಳೆಯುತ್ತಿರುತ್ತಾರೆ. ಆದ್ರೆ ಸ್ಮಾರ್ಟ್ ಫೋನ್, ಇಂಟರ್ನೆಟ್ ಇಲ್ಲದ ಆಗಿನ ಕಾಲದಲ್ಲಿ ಮದುವೆ ಸಂಭ್ರಮ ಹೇಗಿದ್ದವು, ಅಲ್ಲಿ ಬಂಧು ಬಳಗದವರು ಹೇಗಲ್ಲಾ ಎಂಜಾಯ್ ಮಾಡ್ತಿದ್ರೂ ಎಂದು ತೋರಿಸುವ ವಿಡಿಯೋ ತುಣುಕೊಂದು ಇದೀಗ ವೈರಲ್ ಆಗಿದೆ.
ಈ ವಿಡಿಯೋವನ್ನು @ACSkadakol ಎಂಬ ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, 80-90 ರ ದಶಕದ ಮದುವೆ ಸಮಾರಂಭದಲ್ಲಿ ಇದ್ದ ಪ್ರೀತಿ, ಖುಷಿ ಇವಾಗಿಲ್ಲ”ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
ವೈರಲ್ ವಿಡಿಯೋದಲ್ಲಿ 80-90 ರ ದಶಕದಲ್ಲಿ ಯಾವುದೇ ಆಡಂಬರವಿಲ್ಲದ್ದರೂ, ಸರಳ ಸಂಪ್ರದಾಯಬದ್ಧವಾಗಿ ಮದುವೆ ಕಾರ್ಯಕ್ರಮಗಳು ಹೇಗೆ ನಡೆಯುತ್ತಿದ್ದವು ಹಾಗೂ ಮದರಂಗಿ ಶಾಸ್ತ್ರ, ಆರತಕ್ಷತೆಯ ಸಂಭ್ರಮದಲ್ಲಿ ಬಂಧು ಬಳಗದವರೆಲ್ಲಾ ಜೊತೆ ಸೇರಿ ಹೇಗೆಲ್ಲಾ ಎಂಜಾಯ್ ಮಾಡ್ತಿದ್ರೂ ಎಂಬ ಸುಂದರ ದೃಶ್ಯಾವಳಿಯನ್ನು ಕಾಣಬಹುದು.
ಇದನ್ನೂ ಓದಿ: ಅಳಿಯನ ಮದುವೆ ಸಂಭ್ರಮದಲ್ಲಿ ಡಾನ್ಸ್ ಮಾಡುತ್ತಿದ್ದ ಮಾವ ಹೃದಯಾಘಾತದಿಂದ ಸಾವು
ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 40 ಸಾವಿರಕ್ಕೂ ಹೆಚ್ಚಿನ ಲೈಕ್ಸ್ ಹಾಗೂ ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು “ಇದಕ್ಕೆ ಹೇಳೋದು ಓಲ್ಡ್ ಇಸ್ ಗೋಲ್ಡ್ ಅಂತಾʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ನಿಜಕ್ಕೂ ಆಗಿನ ಕಾಲದ ಮದುವೆ ಸಂಭ್ರಮಗಳಿಗೆ ಈಗಿನ ಆಡಂಬರದ ಮದುವೆ ಸರಿಸಾಟಿಯಾಗಲಾರದು ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ