Viral Video: ಬುರ್ಜ್ ಖಲೀಫಾ ನೋಡಿರುತ್ತೀರಿ; ಆದ್ರೆ ದುಬೈನಲ್ಲಿ ಬಡವರು ವಾಸಿಸುವ ಸ್ಥಳ ಹೇಗಿದೆ ನೋಡಿದ್ದೀರಾ? ಇಲ್ಲಿದೆ ವಿಡಿಯೋ

ದುಬೈ ಎಂದಾಕ್ಷಣ ಮೊದಲು ನೆನಪಾಗುವುದೇ ಬುರ್ಜ್‌ ಖಲೀಫಾ ಸೇರಿದಂತೆ ಗಗನ ಚುಂಬಿ ಕಟ್ಟಡಗಳು. ಇದರ ಹೊರತಾಗಿಯೂ ಜಗತ್ತಿನಿಂದ ಮರೆಮಾಚಲ್ಪಟ್ಟಿರುವ ಇನ್ನೊಂದು ಅಂಶವೂ ಕೂಡ ಇಲ್ಲಿ ಇದೆ. ದುಬೈನಲ್ಲಿ ಬಡವರು ವಾಸಿಸುವ ಸ್ಥಳ ಹೇಗಿದೆ ನೋಡಿದ್ದೀರಾ? ಇಲ್ಲಿದೆ ನೋಡಿ ವಿಡಿಯೋ

Viral Video: ಬುರ್ಜ್ ಖಲೀಫಾ ನೋಡಿರುತ್ತೀರಿ; ಆದ್ರೆ ದುಬೈನಲ್ಲಿ ಬಡವರು ವಾಸಿಸುವ ಸ್ಥಳ ಹೇಗಿದೆ ನೋಡಿದ್ದೀರಾ? ಇಲ್ಲಿದೆ ವಿಡಿಯೋ
The Poor Side of Dubai

Updated on: Jul 11, 2024 | 6:23 PM

ದುಬೈ ಎಂದಾಕ್ಷಣ ಮೊದಲು ಕಣ್ಣಿಗೆ ಬರುವುದೇ ಆಧುನಿಕ ಜಗತ್ತಿನ ಅತಿ ಎತ್ತರದ ಕಟ್ಟಡ ಎಂಬ ಖ್ಯಾತಿ ಹೊಂದಿರುವ ದುಬೈನ ಬುರ್ಜ್‌ ಖಲೀಫಾ. ಇದಲ್ಲದೇ ಬರೀ ಗಗನ ಚುಂಬಿ ಕಟ್ಟಡಗಳ ಚಿತ್ರಣ. ಆದರೆ ಎಂದಾದರೂ ದುಬೈನಲ್ಲಿ ಬಡವರು ವಾಸಿಸುವ ಸ್ಥಳ ಹೇಗಿದೆ ನೋಡಿದ್ದೀರಾ? ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​​ ಆಗಿದೆ.

uaegirly ಎಂಬ ಇನ್ಸ್ಟಾಗ್ರಾಮ್​​​ ಖಾತೆಯಲ್ಲಿ ದುಬೈನಲ್ಲಿ ಬಡವರು ವಾಸಿಸುವ ಸ್ಥಳದ ಕುರಿತು ವಿಡಿಯೋ ಹಂಚಿಕೊಳ್ಳಲಾಗಿದೆ. ಜೂನ್​​ 13ರಂದು ಹಂಚಿಕೊಂಡಿರುವ ಈ ವಿಡಿಯೋ ಇಲ್ಲಿಯವರೆಗೆ 6.5 ಮಿಲಿಯನ್​​ ಅಂದರೆ 60ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ 229,308 ಲಕ್ಷ ಜನರು ವಿಡಿಯೋ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಲ್ಲದೇ ಸಾಕಷ್ಟು ಜನರು ಕಾಮೆಂಟ್​​ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಪ್ರೀತಿಗೆ ವಿರೋಧ; ತಂದೆ-ತಾಯಿ ಹಾಗೂ ಸಹೋದರನನ್ನು ಬರ್ಬರವಾಗಿ ಕೊಂದ 15 ರ ಬಾಲಕ

ಒಂದೆಡೆ ದುಬೈನ ನೋಟ ನೋಡಿದರೆ ಶ್ರೀಮಂತ ಎನಿಸಿದರೆ ಮತ್ತೊಂದೆಡೆ ಜಗತ್ತಿನಿಂದ ಮರೆಮಾಚಲ್ಪಟ್ಟಿರುವ ಇನ್ನೊಂದು ಅಂಶವೂ ಕೂಡ ಇರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಬಡವರು ವಾಸಿಸುವ ಸ್ಥಳವಾದರೂ ಸ್ವಚ್ಛತೆಯನ್ನು ಕಂಡು ಸಾಕಷ್ಟು ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಸಾಕಷ್ಟು ನೆಟ್ಟಿಗರು ಭಾರತದೊಂದಿಗೆ ಹೋಲಿಕೆ ಮಾಡಿರುವುದನ್ನು ಕಾಮೆಂಟ್​​ನಲ್ಲಿ ಕಾಣಬಹುದು.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ